ವೆಜ್‌ ಬದಲು ನಾನ್‌ ವೆಜ್‌ ಪಿಜ್ಜಾ ನೀಡಿದ ಡೊಮಿನೊಸ್‌!

KannadaprabhaNewsNetwork |  
Published : Jul 17, 2024, 12:48 AM IST
16ಡಿಡಬ್ಲೂಡಿ9ಸಸ್ಯಾಹಾರಿ ಪಿಜ್ಜಾ ಬದಲು ಡೊಮಿನೋಸ್‌ ನಿಂದ ಬಂದಿರುವ ಮಾಂಸಹಾರಿ ಪಿಜ್ಜಾ. | Kannada Prabha

ಸಾರಾಂಶ

ನಾವು ಸಸ್ಯಹಾರಿ ಕುಟುಂಬದವರು. ಸಸ್ಯಹಾರಿ ಎಂದು ನಿರ್ದಿಷ್ಟವಾಗಿ ಹೇಳಿ ಪಿಜ್ಜಾ ತರಿಸಿದರೆ ಮಾಂಸಹಾರಿ ಪಿಜ್ಜಾ ನೀಡಲಾಗಿದೆ. ಜತೆಗೆ ಡೊಮಿನೊಸ್‌ ಸಂಸ್ಥೆ ಸಿಬ್ಬಂದಿ ತಡವಾಗಿ ಬಂದಿದ್ದು ಪ್ರಶ್ನಿಸಿದರೆ ಬೆದರಿಸುವ ರೀತಿಯಲ್ಲಿ ಉತ್ತರ ಕೊಡುತ್ತಾರೆ ಎಂದು ಪ್ರದ್ಯುಮ್ನ ಹೇಳಿದ್ದಾರೆ.

ಧಾರವಾಡ:

ಇಲ್ಲಿಯ ಪ್ರತಿಷ್ಠಿತ ಆಹಾರ ಸಂಸ್ಥೆಯಿಂದ ತಾವಿದ್ದ ಕೋಣೆಗೆ ಸಸ್ಯಹಾರ ಪಿಜ್ಜಾ ಆರ್ಡರ್ ಮಾಡಿದ್ದ ಯುವಕನೋರ್ವನಿಗೆ ಮಾಂಸಾಹಾರ ನೀಡಿದ್ದು, ಇದರಿಂದ ಆಕ್ರೋಶಗೊಂಡಿರುವ ಯುವಕ ಡೋಮಿನೋಸ್‌ ಪಿಜ್ಜಾ ಸಂಸ್ಥೆ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾನೆ.

ಮೂಲತಃ ಬೆಳಗಾವಿಯ ಜಿಲ್ಲೆ ಬೈಲಹೊಂಗಲದ ಪ್ರದ್ಯುಮ್ನ ಇಲ್ಲಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದಾನೆ. ಸ್ನೇಹಿತನೊಂದಿಗೆ ನಗರದ ದಾನೇಶ್ವರ ಬಡಾವಣೆಯಲ್ಲಿ ರೂಮ್‌ ಮಾಡಿಕೊಂಡಿದ್ದಾನೆ. ಜು. 12ರಂದು ರಾತ್ರಿ ಈತ ವಿದ್ಯಾಗಿರಿಯ ಡೊಮಿನೊಸ್‌ ಪಿಜ್ಜಾ ಆರ್ಡರ್ ಮಾಡಿದ್ದನು. ತನ್ನ ಗೆಳೆಯನೊಡನೆ ಸೇರಿ ಒಂದು ವೆಜ್ ಪಿಜ್ಜಾ, ಎರಡು ಜಿಂಗಿ ಪಾರ್ಸಲ್, ಗಾರ್ಲಿಕ್ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ, ಡೆಲಿವರಿ ಬಾಯ್ ಪಿಜ್ಜಾ ತರಲು ವಿಳಂಬ ಮಾಡಿದ್ದರಿಂದ ಇಬ್ಬರ ನಡುವೆ ಕೊಂಚ ಮಾತಿನ ಚಕಮಕಿಯೂ ನಡೆದಿತ್ತು. ಇದಾದ ಬಳಿಕ ರೂಂಗೆ ಹೋಗಿ ಪಾರ್ಸಲ್ ಓಪನ್ ಮಾಡಿ ಆಹಾರ ಬಾಯಿಗಿಟ್ಟುಕೊಂಡಾಗ ಗೊತ್ತಾಗಿದ್ದು ಅದು ವೆಜ್ ಅಲ್ಲ, ಬದಲಿಗೆ ನಾನ್ ವೆಜ್ ಎಂದು. ತಾನು ತಿನ್ನುತ್ತಿರುವ ಪಿಜ್ಜಾದಲ್ಲಿ ಚಿಕನ್ ಪೀಸ್ ಇರುವುದು ಗೊತ್ತಾಗಿದೆ. ತಕ್ಷಣವೇ ಪ್ರದ್ಯುಮ್ನ ಮತ್ತು ಆತನ ಸ್ನೇಹಿತ ವಾಂತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಡೊಮಿನೊಸ್‌ಗೆ ವಿಚಾರಿಸಿದರೆ, ಅದರ ಬದಲಿಗೆ ಇನ್ನೊಂದು ಬಾರಿ ಏನಾದರೂ ಪರಿಹಾರವಾಗಿ ಆಹಾರ ಕಳುಹಿಸುತ್ತೇವೆ ಎಂದು ಸಮಾಜಾಯಿಸಿ ನೀಡಿದ್ದಾರೆ.

ನಾವು ಸಸ್ಯಹಾರಿ ಕುಟುಂಬದವರು. ಸಸ್ಯಹಾರಿ ಎಂದು ನಿರ್ದಿಷ್ಟವಾಗಿ ಹೇಳಿ ಪಿಜ್ಜಾ ತರಿಸಿದರೆ ಮಾಂಸಹಾರಿ ಪಿಜ್ಜಾ ನೀಡಲಾಗಿದೆ. ಜತೆಗೆ ಡೊಮಿನೊಸ್‌ ಸಂಸ್ಥೆ ಸಿಬ್ಬಂದಿ ತಡವಾಗಿ ಬಂದಿದ್ದು ಪ್ರಶ್ನಿಸಿದರೆ ಬೆದರಿಸುವ ರೀತಿಯಲ್ಲಿ ಉತ್ತರ ಕೊಡುತ್ತಾರೆ. ಈ ಕುರಿತು ಸಂಸ್ಥೆಗೆ ಪ್ರಶ್ನಿಸಿದರೆ ಸರಿಯಾಗಿ ಸ್ಪಂದನೆಯೂ ಇಲ್ಲದಾಗಿದೆ. ಆದ್ದರಿಂದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಪ್ರದ್ಯುಮ್ನ ಮಾಹಿತಿ ನೀಡಿದರು.

16ಡಿಡಬ್ಲೂಡಿ9

ಸಸ್ಯಾಹಾರ ಪಿಜ್ಜಾ ಬದಲು ಡೊಮಿನೋಸ್‌ ನಿಂದ ಬಂದಿರುವ ಮಾಂಸಹಾರ ಪಿಜ್ಜಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಸಾನ್‌ ಸನ್ಮಾನ್‌ ಇ - ಕೆವೈಸಿಗೆ ಸರ್ವರ್‌ ಅಡ್ಡಿ!
ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು : ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್