ಅಂಕ ಪಡೆಯುವುದಕ್ಕಾಗಿ ಓದಬೇಡಿ: ಬಜರಂಗಬಲಿ

KannadaprabhaNewsNetwork |  
Published : Nov 22, 2025, 02:45 AM IST
ಪೋಟೋಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಚಾರ್ಯ ಬಜರಂಗಬಲಿ ಮಾತನಾಡಿದರು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಪದವಿಗೆ ಮಾತ್ರ ಸೀಮಿತವಾಗದೆ ಬೇರೆ-ಬೇರೆ ರೀತಿಯ ಕೌಶಲ್ಯ ಬೆಳೆಸಿಕೊಳ್ಳುವುದರ ಜತೆಗೆ ಸ್ಪರ್ಧಾತ್ಮಕ ವಿಷಯ ಮೈಗೂಡಿಸಿಕೊಳ್ಳಬೇಕು

ಕನಕಗಿರಿ: ಅಂಕ ಪಡೆಯುವುದಕ್ಕಾಗಿ ಓದದೇ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು ಎಂದು ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸಪ್ರದ ಕಾಲೇಜಿನ ಪ್ರಾಂಶುಪಾಲ ಡಾ. ಬಜರಂಗಬಲಿ ಹೇಳಿದರು.

ಪಟ್ಟಣದ ಎಸ್ಪಿಎಸ್ಜಿಎಸ್ ಸಪ್ರದ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ವಿದ್ಯಾರ್ಥಿಗಳು ಪದವಿಗೆ ಮಾತ್ರ ಸೀಮಿತವಾಗದೆ ಬೇರೆ-ಬೇರೆ ರೀತಿಯ ಕೌಶಲ್ಯ ಬೆಳೆಸಿಕೊಳ್ಳುವುದರ ಜತೆಗೆ ಸ್ಪರ್ಧಾತ್ಮಕ ವಿಷಯ ಮೈಗೂಡಿಸಿಕೊಳ್ಳಬೇಕು ಎಂದರು.

ನಮ್ಮ ಕಾಲೇಜಿನಲ್ಲಿ ಒಟ್ಟು 10039 ಪುಸ್ತಕಗಳಿದ್ದು, ಅದರಲ್ಲಿ 1028 ಪುಸ್ತಕಗಳು ವಿವಿಧ ಬಗೆಯ ಸ್ಪರ್ಧಾತ್ಮಕ ಪುಸ್ತಕಗಳಿವೆ.

ಪ್ರತಿ ವಿದ್ಯಾರ್ಥಿ ಕನಿಷ್ಠ ಮೂರು ಗಂಟೆ ಗ್ರಂಥಾಲಯದಲ್ಲಿ ಪುಸ್ತಕ ಅಧ್ಯಾಯನ ಮಾಡಿದರೆ ಸದೃಢ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ.ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾಲೇಜಿನ ಗ್ರಂಥಾಲಯ ಸದುಪಯೋಗ ಪಡೆದುಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದರು.

ಗ್ರಂಥಾಲಯ ವಿಭಾಗದ ಸಂಯೋಜಕಿ ನಫೀಜ್ ಭಾನು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಂಥಪಾಲಕ ಸಿದ್ದಪ್ಪ, ಸಹಾಯಕ ಪ್ರಾಧ್ಯಾಪಕಿ ರಕ್ಷಿತ್, ಡಾ. ವೀರೇಶ ಕೆಂಗಲ್, ಸರ್ವಮಂಗಳಮ್ಮ ಟಿ.ಆರ್, ಸಂಗಮೇಶ, ದತ್ತಾಂಶ ಸಹಾಯಕಿ ಜ್ಯೋತಿ, ಉಪನ್ಯಾಸಕ ಗೋಪಾಲರೆಡ್ಡಿ, ಬಾಳಪ್ಪ ಸುಳೇಕಲ್, ಸೋಮಶೇಖರ, ಎಸ್.ಕೆ. ಖಾದ್ರಿ, ಅಂಬರೀಶ, ಮಾರುತೇಶ, ಶಾಂತ, ದೇವೇಂದ್ರಪ್ಪ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ