ಉಮ್ಮಚಗಿಯಲ್ಲಿ ವಿಷ್ಣು ಪ್ರಿಯ ಬಾಲಪರ್ವ ಕಾರ್ಯಕ್ರಮ

KannadaprabhaNewsNetwork |  
Published : Nov 22, 2025, 02:45 AM IST
ಫೋಟೋ ನ.೨೦ ವೈ.ಎಲ್.ಪಿ. ೦೧  | Kannada Prabha

ಸಾರಾಂಶ

ಉಮ್ಮಚಗಿಯಲ್ಲಿ ಗೀತಾಜ್ಞಾನಯಜ್ಞ ಕೇಂದ್ರ, ಶ್ರೀವಿಷ್ಣು ಸಹಸ್ರನಾಮ ಲೇಖನಯಜ್ಞ ಸಮಿತಿ, ಶ್ರೀ ಲಕ್ಷ್ಮೀ ನರಸಿಂಹ ಪಾರಾಯಣ ತಂಡ ಹಿತ್ಲಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲ್ಲಾಪುರ ಇವರ ಸಹಯೋಗದಲ್ಲಿ ವಿಷ್ಣು ಪ್ರಿಯ ಬಾಲಪರ್ವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಉಮ್ಮಚಗಿಯಲ್ಲಿ ಗೀತಾಜ್ಞಾನಯಜ್ಞ ಕೇಂದ್ರ, ಶ್ರೀವಿಷ್ಣು ಸಹಸ್ರನಾಮ ಲೇಖನಯಜ್ಞ ಸಮಿತಿ, ಶ್ರೀ ಲಕ್ಷ್ಮೀ ನರಸಿಂಹ ಪಾರಾಯಣ ತಂಡ ಹಿತ್ಲಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲ್ಲಾಪುರ ಇವರ ಸಹಯೋಗದಲ್ಲಿ ವಿಷ್ಣು ಪ್ರಿಯ ಬಾಲಪರ್ವ ಕಾರ್ಯಕ್ರಮ ನಡೆಯಿತು.

ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಕಾರ್ಯಕ್ರಮ ಉದ್ಘಾಟಿಸಿ, ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣದ ಮಹತ್ವ ತಿಳಿಸಿದರು. ಯಮುನಾ ನಾಯ್ಕ ವಿಷ್ಣು ಸಹಸ್ರನಾಮ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಕಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಾಗೂ ಭಾಗವಹಿಸಿದ ಮಕ್ಕಳ ಎಲ್ಲಾ ತಾಯಂದಿರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಿದರು.

ಶ್ರೀ ಮಾತಾ ಸಂಸ್ಕೃತ ಪಾಠಶಾಲೆ ಉಮ್ಮಚಗಿಯ ಪ್ರಾಚಾರ್ಯ ನಾಗೇಶ ಭಟ್ಟ, ಅಧ್ಯಕ್ಷ ವಿಶ್ವನಾಥ ಜೋಶಿ, ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಪಿಡಿಓ ನಸ್ರೀನ್ ಯಕ್ಕುಂಡಿ, ಪಾರಾಯಣ ತಂಡ ಹಿತ್ಲಳ್ಳಿ ಮಹಾಲಕ್ಷ್ಮಿ ಹೆಗಡೆ ಮುಂತಾದವರಿದ್ದರು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಅಂಗನವಾಡಿ ಮಕ್ಕಳಿಂದ ಮಹಾ ವಿಷ್ಣುವಿನ ದಶಾವತಾರ ರೂಪಕಗಳು, ನೃತ್ಯಗಳು, ಕಿರು ನಾಟಕಗಳು ಪ್ರದರ್ಶನಗೊಂಡವು.

ಮಂಗಲಾ ದೇವಾಡಿಗ ಪ್ರಾರ್ಥಿಸಿದರು. ರಾಜೇಶ್ ಶಾಸ್ತ್ರಿ ಸ್ವಾಗತಿಸಿ, ನಿರ್ವಹಿಸಿದರು. ಇಂದು ಪ್ರತಿಭಾ ಕಾರಂಜಿ, ಕಲೋತ್ಸವ

ಶಾಲಾ ಶಿಕ್ಷಣ ಇಲಾಖೆ, ಜಿಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ನ.೨೨ರಂದು ಯಲ್ಲಾಪುರ ಪಟ್ಟಣದ ವೈ.ಟಿ.ಎಸ್.ಎಸ್. ಸಭಾಂಗಣದಲ್ಲಿ ತಾಲುಕಾ ಮಟ್ಟದ ಪ್ರಾಥಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ-೨೦೨೫-೨೬ ನಡೆಯಲಿದೆ.ಬೆಳಗ್ಗೆ ೯.೩೦ಕ್ಕೆ ವಿಧಾನಪರಿಷತ್ ಸಭಾಪತಿ ಬಸವರಜ ಹೊರಟ್ಟಿ, ಶಾಸಕ ಆರ್.ವಿ. ದೇಶಪಾಂಡೆ, ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟಂಟ್ ಮತ್ತು ಏಜೆನ್ಸೀಸ್ ಅಧ್ಯಕ್ಷ ಸತೀಶ ಸೈಲ್ ಉಪಸ್ಥಿತಿಯಲ್ಲಿ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸುವರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಪ ಸದಸ್ಯರಾದ ಎಸ್.ವಿ. ಸಂಕನೂರು, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ್, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ ಅಂಗಡಿ ಅತಿಥಿಗಳಾಗಿ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ತಹಶೀಲ್ದಾರ ಚಂದ್ರಶೇಖರ ಹೊಸಮನಿ, ತಾಪಂ ಆಡಳಿತಾಧಿಕಾರಿ ನಟರಾಜ ಇ.ಎಚ್., ತಾಪಂ ಇಒ ರಾಜೇಶ ಧನವಾಡಕರ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಇತರರು ಆಗಮಿಸುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ