ವಸೂಲಿಗೆ ರೈತ ಸಂಘದ ಟವೆಲ್ ಬಳಕೆಯಾಗದಿರಲಿ: ಚುಕ್ಕಿ ನಂಜುಂಡಸ್ವಾಮಿ

KannadaprabhaNewsNetwork |  
Published : Dec 23, 2024, 01:05 AM IST
ಪೋಟೋ: 21ಎಸ್‌ಎಂಜಿಕೆಪಿ03ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘದ ಸಂಸ್ಥಾಪಕರು ಹಾಗೂ ರೈತ ಕುಲದ ಕಲ್ಮಣಿಯಾಗಿದ್ದ ಎನ್.ಡಿಸುಂದರೇಶ್ ಅವರ 32ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ರೈತ ಜಾಗೃತಿ ಸಭೆ ನಡೆಯಿತು.  | Kannada Prabha

ಸಾರಾಂಶ

ಹಿಂದೆ ಲಾರಿ ಬಸ್‍ಗಳಲ್ಲಿ ರೈತರು ಹೋರಾಟಕ್ಕೆ ಬರುತ್ತಿದ್ದರು. ಹಸಿರು ಶಾಲು ಶೋಕಿಗೆ ಹಾಕುವುದಲ್ಲ. ಇವತ್ತು ವಸೂಲಿಗೆ ರೈತ ಸಂಘದ ಟವೆಲ್ ಬಳಕೆ ಆಗುತ್ತಿದೆ. ಇವತ್ತಿನ ತಲೆಮಾರಿನ ಒಂದು ವರ್ಗ ಹಸಿರು ಟವೆಲ್‌ಅನ್ನು ಸ್ವಾರ್ಥಕ್ಕೆ ಬಳಕೆ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಿಂದೆ ಲಾರಿ ಬಸ್‍ಗಳಲ್ಲಿ ರೈತರು ಹೋರಾಟಕ್ಕೆ ಬರುತ್ತಿದ್ದರು. ಹಸಿರು ಶಾಲು ಶೋಕಿಗೆ ಹಾಕುವುದಲ್ಲ. ಇವತ್ತು ವಸೂಲಿಗೆ ರೈತ ಸಂಘದ ಟವೆಲ್ ಬಳಕೆ ಆಗುತ್ತಿದೆ. ಇವತ್ತಿನ ತಲೆಮಾರಿನ ಒಂದು ವರ್ಗ ಹಸಿರು ಟವೆಲ್‌ಅನ್ನು ಸ್ವಾರ್ಥಕ್ಕೆ ಬಳಕೆ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ಕರ್ನಾಟಕ ಸಂಘದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘದ ಸಂಸ್ಥಾಪಕರು ಹಾಗೂ ರೈತ ಕುಲದ ಕಲ್ಮಣಿಯಾಗಿದ್ದ ಎನ್.ಡಿ. ಸುಂದರೇಶ್ ಅವರ 32ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ರೈತ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.ರೈತ ಸಂಘಟನೆಗಳು ಒಂದಾಗಬೇಕು. ವಿಚಾರದ ಮೇಲೆ ಒಂದಾಗಲು ಒಂದು ನಿಮಿಷ ಸಾಕು. ಹಲವಾರು ಸಮಸ್ಯೆಗಳು ರೈತರನ್ನು ಕಾಡುತ್ತಿವೆ. ಯಾವ ಕಿರೀಟ ಬಯಸದೇ ರೈತರಿಗೆ ದುಡಿಯುವ ಪಡೆ ತಯಾರು ಮಾಡಬೇಕಾಗಿದೆ. ಹೋರಾಟ ಮುಂದಿನ ತಲೆಮಾರಿಗೆ ವರ್ಗಾಯಿಸಬೇಕು ಎಂದರು.ಯುವ ರೈತ ಮುಖಂಡ ಹಾಗೂ ಸುಂದರೇಶ್ ಪುತ್ರ ಎನ್.ಎಸ್. ಸುಧಾಂಶು ಮಾತನಾಡಿ, ಸ್ವಾರ್ಥಕ್ಕಾಗಿ ರೈತ ಸಂಘ ಮಾಡಬಾರದು. ನಾನು ಅದಾಗಬೇಕು, ಇದಾಗಬೇಕೆನ್ನುವುದು ಇರಬಾರದು. ಸಂಘ ರೈತರಿಗಾಗಿ ಮಾತ್ರ ಹೋರಾಟ ಮಾಡಬೇಕು ಎಂದರು.ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ ಪ್ರಾಸ್ತಾವಿಕ ಮಾತನಾಡಿ, ಸರಣಿ ಉಪವಾಸ ಸತ್ಯಾಗ್ರಹಕ್ಕೆ ಸುಂದರೇಶ್ ಕರೆ ನೀಡಿದ್ದರು. ಜಾರ್ಜ್ ಫನಾರ್ಂಡೀಸ್ ಆಗಮಿಸಿದ್ದರು. ಆದರೆ ರಾಜಕಾರಣಿಗಳಿಗೆ ಅವಕಾಶ ಇಲ್ಲ ಎಂದು ವಾಪಸ್ ಕಳಿಸಿದ್ದರು. ನರಗುಂದ ಗೋಲಿಬಾರ್ ಬಳಿಕ ರೈತ ಸಂಘ ಸ್ಥಾಪನೆ ಮಾಡಿದರು. ಗುಂಡಿಟ್ಡು ಕೊಲ್ಲುವ ಸರ್ಕಾರಕ್ಕೆ ಮತ ಇಲ್ಲ ಎಂದು ಕರೆ ನೀಡಿದರು ಎಂದರು.ಮುಖಂಡ ರಾಮಣ್ಣ ಕೆಂಚಾಲೆ ಮಾತನಾಡಿ, ಹೋರಾಟಕ್ಕೆ ಯುವಕರ ಸಂಖ್ಯೆ ಕಡಿಮೆ ಆಗುತ್ತಿದೆ. ಅರವತ್ತು ದಾಟಿದವರೇ ಇದ್ದಾರೆ. ಹೋರಾಟ ಶಕ್ತಿ ಕಡಿಮೆ ಆಗುತ್ತಿದೆ. ಒಕ್ಕಲುತನ ಪರಿಸ್ಥಿತಿ ಬಗ್ಗೆ ಕಿಂಚಿತ್ ಚಿಂತೆ ಯುವಕರಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶೋಕಿಗೆ ಶಾಲು ಹಾಕಿಕೊಂಡು ಸಂಘಟನೆ, ಹೋರಾಟ ಮಾಡದೇ ಇದ್ದರೆ ಅನ್ಯಾಯ ಮಾಡಿದ ಹಾಗೆ. ಸಣ್ಣ ಪುಟ್ಟ ವೈಮನಸ್ಸು ಬದಿಗಿಟ್ಟು ಸಂಘಟಿತ ಹೋರಾಟ ಮಾಡೋಣ. ಜನ ಎಷ್ಟು ಇದ್ದಾರೆ ಎನ್ನುವುದು ಮುಖ್ಯ ಅಲ್ಲ ಎಂದು ತಿಳಿಸಿದರು.ವೇದಿಕೆಯಲ್ಲಿ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್, ಮಂಡ್ಯದ ನಾಗಣ್ಣ, ಜಾನಕಿ ರಾಮಣ್ಣ, ಕೆ.ಎಸ್. ಪುಟ್ಟಪ್ಪ, ಕೋಲಾರ್ ಮಂಜುನಾಥ, ಗೌರವಾಧ್ಯಕ್ಷ ವೀರಪ್ಪ ಇನ್ನಿತರರು ಉಪಸ್ಥಿತರಿದ್ದರು.ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಪದಾಧಿಕಾರಿಗಳ ಹಾಗೂ ಬ್ಲಾಕ್ ಅಧ್ಯಕ್ಷರುಗಳ ಸಭೆ ಇಂದು ಜಿಲ್ಲಾ ಕಾಂಗ್ರೆಸ್ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಮಂಜುನಾಥ್ ಬಾಬು ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ರಮೇಶ್, ಪ್ರಮುಖರಾದ ಜೀವಸುಬ್ರಹ್ಮಣಿ, ಆರ್.ಕೆ. ಉಮೇಶ್, ಭೂತೇಶ್, ಎಸ್.ಡಿ. ಶಿವಪ್ಪ, ಕೆ.ಪಿ. ಚಂದ್ರು ಇನ್ನಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ