-ಜಿಲ್ಲೆಯ ರೈತ ಮುಖಂಡರಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಮನವಿ
ಕನ್ನಡಪ್ರಭ ವಾರ್ತೆ ಹೊಸದುರ್ಗ ವಿವಿಸಾಗರದ ಹೆಚ್ಚುವರಿ ನೀರು ಕೋಡಿ ಮೂಲಕವೇ ಹರಿಯಲಿ ಎನ್ನುವ ಹಠಕ್ಕೆ ಬೀಳದೇ ಅಧಿಕಾರಿಗಳು ನೀಡುವ ತಾಂತ್ರಿಕ ಸಲಹೆ ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಹಕಾರ ನೀಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಜಿಲ್ಲೆಯ ರೈತ ಮುಖಂಡರಿಗೆ ಮನವಿ ಮಾಡಿದರು.
ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೈಸೂರಿನ ಮಹಾರಾಜರು ವಿವಿ ಸಾಗರ ನಿರ್ಮಿಸಿದರು. ತಾಲೂಕಿನ ರೈತರು 25 ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಉದಾರವಾಗಿ ನೀಡಿದರು. ಅಗ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಹಿರಿಯೂರು ತಾಲೂಕಿನ ಜನರು ಸದೃಢರಾಗಿದ್ದಾರೆ. ಹಿನ್ನಿರಿನ ಜನರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕನ್ನಡ ಭಾಷೆ, ನೆಲ ಜಲದ ವಿಚಾರವನ್ನು ತಿಳಿಸುವ ಕೆಲಸ ಆಗಬೇಕು. ಭವಿಷ್ಯದ ಮಕ್ಕಳಿಗೆ ನಾಡಿನ ಕಲೆ, ಸಂಸ್ಕೃತಿ, ಇತಿಹಾಸ ಎಲ್ಲವನ್ನು ತಿಳಿಸಬೇಕು. ಗಡಿ ಭಾಗದ ರಾಜ್ಯಗಳ ಜೊತೆಗೆ ಹರಿದು ಹಂಚಿ ಹೋಗಿದ್ದ ಮೈಸೂರು ರಾಜ್ಯವನ್ನು ದೇವರಾಜ್ ಅರಸು ಅವರ ಕಾಲದಲ್ಲಿ ಅಖಂಡ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ತಿರುಪತಿ ಪಾಟೀಲ್ ಧ್ವಜಾರೋಹಣ ಮಾಡಿದರು. ವೇದಿಕೆಯಲ್ಲಿ ತಾಪಂ ಇಒ ಸುನಿಲ್‌ಕುಮಾರ್, ಬಿಇಒ ಸಯ್ಯದ್ ಮೋಸೀನ್, ಪಿಐ ಮಧು, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಪುರಸಭಾ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಗೀತಾ, ಪುರಸಭೆ ಸದಸ್ಯರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಆಧಿಕಾರಿಗಳು, ಮುಖಂಡರು ಹಾಗೂ ಶಾಲಾ ಕಾಲೇಜು ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.
........ಬಾಕ್ಸ್.......
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿವರ್ಷ ತಾಲೂಕು ಆಡಳಿತದಿಂದ ಸನ್ಮಾನಿಸಲಾಗುತಿತ್ತು. ಆದರೆ, ಈ ಸಾಲಿನಲ್ಲಿ ನೂರು ಅಂಕ ಪಡೆದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಸನ್ಮಾನಿಸಲಿಲ್ಲ. ಇದು ಮಕ್ಕಳು ಹಾಗೂ ಪೋಷಕರಿಗೆ ಬೇಸರ ಮೂಡಿಸಿತು.
ಪೋಟೋ, 1ಎಚ್‌ಎಸ್‌ಡಿ1: ಹೊಸದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.