ಕರೀಘಟ್ಟ ದೇವಸ್ಥಾನದ ಬಳಿ ಇಣಜಿನಿಯರಿಂಗ್ ವಿದ್ಯಾರ್ಥಿಗಳಿಂದ ಶ್ರಮದಾನ

KannadaprabhaNewsNetwork |  
Published : Oct 21, 2024, 12:34 AM IST
೨೦ಕೆಎಂಎನ್‌ಡಿ-೯ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ದೇವಸ್ಥಾನ ಬಳಿಯ ಪುರಾತನ ಮಂಟಪ ಸುತ್ತ ಬೆಳೆದಿದ್ದ ಗಿಡ ಗಂಟೆಗಳನ್ನು ಶೇಷಾದ್ರಿಪುರಂ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನ ನಡೆಸಿ ಸ್ವಚ್ಚಗೊಳಿಸಿದರು. | Kannada Prabha

ಸಾರಾಂಶ

ಪುರಾತನ ದೇವಸ್ಥಾನಗಳು, ಮಂಟಪ ಸೇರಿದಂತೆ ಸ್ಮಾರಕಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಜೊತೆಗೆ ಪ್ಲಾಸ್ಟಿಕ್‌ನಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಐಎಂಎ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸುವುದು ನಮ್ಮ್ಮೆಲ್ಲರ ಕರ್ತವ್ಯ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕರೀಘಟ್ಟ ದೇವಸ್ಥಾನ ಬಳಿಯ ಪುರಾತನ ಮಂಟಪ ಸುತ್ತ ಬೆಳೆದಿದ್ದ ಗಿಡ, ಗಂಟೆಗಳನ್ನು ಶೇಷಾದ್ರಿಪುರಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನ ನಡೆಸಿ ಸ್ವಚ್ಛಗೊಳಿಸಿದರು.

ರೋಟರಿ ಸಂಸ್ಥೆ, ಅಚೀವರ್ಸ್ ಅಕಾಡೆಮಿ ಹಾಗೂ ಮೈಸೂರಿನ ಕಡಕೋಳ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಒಂದು ದಿನದ ಶ್ರಮದಾನ ನಡೆಸಿ, ಪುರಾತನ ಮಂಟಪದ ಸುತ್ತ ಬೆಳೆದು ನಿಂತಿದ್ದ ಗಿಡ, ಗಂಟೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿ, ಸ್ವಚ್ಛತಾ ಕಾರ್ಯ ನಡೆಸಿದರು.

ನಂತರ ದೈಹಿಕ ಶಿಕ್ಷಣ ನಿರ್ದೇಶಕ ಡಾ ರಾಘವೇಂದ್ರ ಮಾತನಾಡಿ, ಪುರಾತನ ದೇವಸ್ಥಾನಗಳು, ಮಂಟಪ ಸೇರಿದಂತೆ ಸ್ಮಾರಕಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಜೊತೆಗೆ ಪ್ಲಾಸ್ಟಿಕ್‌ನಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಐಎಂಎ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸುವುದು ನಮ್ಮ್ಮೆಲ್ಲರ ಕರ್ತವ್ಯ. ಉತ್ತಮ ವಾತಾವರಣ ನಿರ್ಮಾಣಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.

ದೇವಸ್ಥಾನ ಹಾಗೂ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳನ್ನು ತಂದು ಎಲ್ಲೆಂದರಲ್ಲಿ ಬಿಸಾಡಿ, ಪರಿಸರ ಹಾಳು ಮಾಡುವುದರ ಬದಲು ಕಸದ ತೊಟ್ಟಿಯಲ್ಲಿ ಹಾಕಿ, ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಪ್ರವಾಸಿಗರಲ್ಲಿ ಮನವಿ ಮಾಡಿದರು.

ಕಾಲೇಜಿನ ವಿದ್ಯಾರ್ಥಿಗಳಾದ ಕರ್ಣ, ಹೃದಯ್, ದರ್ಶನ್, ಪುನೀತ್, ಅನನ್ಯ, ಧನುಷ್, ಪೂರ್ವಜ್, ಮನು, ಪಾಲಳ್ಳಿ ರವಿ, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಅಚೀವರ್ಸ್ ಅಕಾಡೆಮಿ ಸದಸ್ಯರು ಸಾಥ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ