ಉಡುಪಿ: ಇಲ್ಲಿನ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ನೇಜಾರಿನ ಸ್ಪಂದನ ದಿವ್ಯಾಂಗರ ಸಂರಕ್ಷಣಾ ಕೇಂದ್ರದಲ್ಲಿ ಮಂಗಳವಾರ ಅಗತ್ಯ ವಸ್ತುಗಳ ವಿತರಣೆ ಸಮಾರಂಭ ನಡೆಯಿತು.
ಉಡುಪಿ: ಇಲ್ಲಿನ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ನೇಜಾರಿನ ಸ್ಪಂದನ ದಿವ್ಯಾಂಗರ ಸಂರಕ್ಷಣಾ ಕೇಂದ್ರದಲ್ಲಿ ಮಂಗಳವಾರ ಅಗತ್ಯ ವಸ್ತುಗಳ ವಿತರಣೆ ಸಮಾರಂಭ ನಡೆಯಿತು.
ಈ ಸಂದರ್ಭ ಕೇಂದ್ರದ ದಿವ್ಯಾಂಗರಿಗೆ ವಸ್ತುಗಳನ್ನು ಹಸ್ತಾಂತರಿಸಿದ ಶೋಕ ಮಾತಾ ಇಗರ್ಜಿಯ ಧರ್ಮಗುರು ವಂ. ಫಾ. ಡೆನ್ನಿಸ್ ಡೇಸಾ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆ. ಸೊಸೈಟಿ ಅನೇಕ ವರ್ಷಗಳಿಂದ ಉಡುಪಿ ಜಿಲ್ಲೆಯ ವಿಶೇಷ ಮಕ್ಕಳ ಶಾಲೆ ಹಾಗೂ ದಿವ್ಯಾಂಗರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನು ವಿತರಿಸಿಕೊಂಡು ಬರುತ್ತಿದೆ. ಇದು ಇತರ ಹಣಕಾಸು ಸಂಸ್ಥೆಗಳಿಗೆ ಮಾದರಿಯಾಗಿದೆ. ಹಣಕಾಸಿನ ವ್ಯವಹಾರ ಜೊತೆ ಸಮಾಜಮುಖಿ ಕಾರ್ಯವು ನಿರಂತರವಾಗಿ ನಡೆದು ದುರ್ಬಲ ವರ್ಗದವರಿಗೆ ಆಸರೆಯಾಗಿ ಇರಲಿ ಎಂದು ಹಾರೈಸಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಲ್ಪೆ ಠಾಣೆ ಉಪನಿರೀಕ್ಷಕ ಅನಿಲ್ ಕುಮಾರ್, ಸೊಸೈಟಿಯ ಅಭಿವೃದ್ಧಿ ಅಧಿಕಾರಿ ಮನೀಶ್, ಉಡುಪಿ ಶಾಖಾ ವ್ಯವಸ್ಥಾಪಕಿ ಪ್ರಮೀಳಾ ಲೋಬೊ, ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ಉಡುಪಿ ಶಾಖೆಯ ಸಿಬ್ಬಂದಿಗಳಾದ ಸಂದೇಶ್, ನಿಶಿತ್, ರೋಶನ್ ಮೆಂಡೋನ್ಸ, ಧನುಷ್, ಸುವಿಧಾ, ಅಜಯ್ ಶೆಟ್ಟಿ, ಸುಮಂತ್ ಉಪಸ್ಥಿತರಿದ್ದರು. ಜಾಸ್ಮಿನ್ ಶಿಲ್ಪಾ ಕ್ರಾಸ್ಟ ನಿರೂಪಿಸಿದರೆ, ನಿಶಿತ್ ಕುಲಾಲ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.