ಕರ್ಣಾಟಕ ಬ್ಯಾಂಕ್‌ನಿಂದ ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ಫ್ಯಾನ್‌ಗಳ ಕೊಡುಗೆ

KannadaprabhaNewsNetwork |  
Published : Feb 10, 2026, 01:45 AM IST
9ಕೆಎಂಎನ್‌ಡಿ-12ಕರ್ಣಾಟಕ ಬ್ಯಾಂಕ್ ಶಾಖೆ ವತಿಯಿಂದ ಪಟ್ಟಣದ ಶ್ರೀರಂಗನಾಥ ದೇಗುಲಕ್ಕೆ ಸುಮಾರು 55 ಸಾವಿರ ರು. ಬೆಲೆಯುಳ್ಳ 10 ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. | Kannada Prabha

ಸಾರಾಂಶ

ಕರ್ಣಾಟಕ ಬ್ಯಾಂಕ್ ವತಿಯಿಂದ ಹತ್ತು ಹಲವು ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು, ದೇವರ ದರ್ಶನಕ್ಕಾಗಿ ಬರುವ ಭಕ್ತರು ದೇವಾಲಯದ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅನುಕೂಲವಾಗಿ ಎಂಬ ಉದ್ದೇಶದಿಂದ ಹತ್ತು ಫ್ಯಾನ್ ಗಳನ್ನು ನೀಡಲಾಗಿದೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಕರ್ಣಾಟಕ ಬ್ಯಾಂಕ್ ಶಾಖೆಯಿಂದ ಪಟ್ಟಣದ ಶ್ರೀರಂಗನಾಥ ದೇಗುಲಕ್ಕೆ ಸುಮಾರು 55 ಸಾವಿರ ರು. ಬೆಲೆಯುಳ್ಳ 10 ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಬ್ಯಾಂಕ್‌ನ ಎಜಿಎಂ ಕೆ.ಎಲ್ ಶೇಷಾದ್ರಿರವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮಾ ಅವರಿಗೆ ಹಸ್ತಾಂತರಿಸಿ, ಭಕ್ತರ ಅನುಕೂಲಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ವತಿಯಿಂದ ಹತ್ತು ಹಲವು ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು, ದೇವರ ದರ್ಶನಕ್ಕಾಗಿ ಬರುವ ಭಕ್ತರು ದೇವಾಲಯದ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅನುಕೂಲವಾಗಿ ಎಂಬ ಉದ್ದೇಶದಿಂದ ಹತ್ತು ಫ್ಯಾನ್ ಗಳನ್ನು ನೀಡಿದ್ದಾಗಿ ತಿಳಿಸಿದರು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮಾ ಮಾತನಾಡಿ, ಭಕ್ತರು ಹಾಗೂ ದೇವಾಲಯಕ್ಕೆ ಅತ್ಯವಶ್ಯಕವಾಗಿದ್ದಂತಹ ಫ್ಯಾನ್‌ಗಳನ್ನ ಕರ್ಣಾಟಕ ಬ್ಯಾಂಕ್ ವತಿಯಿಂದ ನೀಡಲಾಗಿದೆ. ಶ್ರೀರಂಗನಾಥಸ್ವಾಮಿಯ ಆಶೀರ್ವಾದದಿಂದ ಬ್ಯಾಂಕ್ ಮತ್ತಷ್ಟು ಅಭಿವೃದ್ದಿಯತ್ತ ಸಾಗಲಿ ಎಂದು ಶುಭ ಆರೈಸಿದರು.

ಈ ವೇಳೆ ಮದ್ದೂರು ಕ್ಲಸ್ಟರ್‌ನ ಸಿ.ಎಂ. ಮುನಿರಾಜು ರೆಡ್ಡಿ, ಶ್ರೀರಂಗಪಟ್ಟಣ ಶಾಖಾ ವ್ಯವಸ್ಥಾಪಕ ವಿ.ನಾರಾಯಣ್ ಸೇರಿದಂತೆ ಬ್ಯಾಂಕ್ ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಇಂದು ಹಲಗೂರು ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ

ಹಲಗೂರು: ಸಮೀಪದ ಗುಂಡಾಪುರ ಗೇಟ್ ಬಳಿ ಇರುವ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.10 ರಂದು ಮಂಗಳವಾರ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಕಾರಣದಿಂದ ಹಲಗೂರು, ಲಿಂಗಪಟ್ಟಣ ದಳವಾಯಿ ಕೋಡಿಹಳ್ಳಿ, ಗುಂಡಾಪುರ, ಎಚ್.ಬಸಾಪುರ, ಕೊನ್ನಾಪುರ, ಬೆನಮನಹಳ್ಳಿ, ಕುಂತೂರು, ನಿಟ್ಟೂರು, ಎನ್.ಹಲಸಹಳ್ಳಿ, ತೊರೆಕಾಡನಹಳ್ಳಿ, ಸಾಗ್ಯ ಸರಗೂರು, ಬಸವನಹಳ್ಳಿ, ಎಚ್.ಬಸಾಪುರ, ಕೆಂಪಯ್ಯನದೊಡ್ಡಿ, ಚಿಲ್ಲಾಪುರ, ಒದು ಬಸಪ್ಪನದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಫೆ.10ರಂದು ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಳವಳ್ಳಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌‌ ಟಿ.ಪುಟ್ಟಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಾಳೆ ಯತ್ತಂಬಾಡಿಯಲ್ಲಿ ವಿದ್ಯುತ್‌ ವ್ಯತ್ಯಯ

ಹಲಗೂರು:

ಸಮೀಪದ ಯತ್ತಂಬಾಡಿ ಗ್ರಾಮದಲ್ಲಿರುವ 66/11 ಕೆ.ವಿ.ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.11ರಂದು ಮಂಗಳವಾರ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಅಂತರವಳ್ಳಿ, ಯತ್ತಂಬಾಡಿ, ಬೆಳತೂರು, ದಡಮಹಳ್ಳಿ, ಹೊಸಪುರ, ಹುಸ್ಕೂರು, ಸಿದ್ದಾಪುರ, ಹುಚ್ಚೇಗೌಡನದೊಡ್ಡಿ, ಕುಲುಮೆ ದೊಡ್ಡಿ, ಬಾಣಗಹಳ್ಳಿ ಗ್ರಾಮಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಜೂನಿಯರ್ ಎಂಜಿನಿಯರ್ ಮಧುಸೂದನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೋಟದ ಕಾರ್ಮಿಕರ ಮೇಲೆ ಚಿರತೆ ದಾಳಿ
ಕನ್ನಡ ಭಾಷಾ ನೀತಿಯ ಅನುಷ್ಠಾನಕ್ಕೆ ವಿಶೇಷ ಕ್ರಮ: ಡಿಸಿ ಪ್ರಭುಲಿಂಗ ಕವಳಿಕಟ್ಟಿ