ದಾನಿಗಳಿಂದ ಉತ್ತಮ ಸಮಾಜ ನಿರ್ಮಾಣ: ಎ.ಜೆ.ಜಾರ್ಜ್

KannadaprabhaNewsNetwork |  
Published : Jul 22, 2025, 12:15 AM IST
ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರ ಸಮೀಪದ ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚಿನಲ್ಲಿ ಫಾದರ್ ಎ.ಜೆ.ಜಾರ್ಜ್ ಮಾತನಾಡಿದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ, ದಾನಿ ವಿಶ್ವನಾಥ್  ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ದಾನಿಗಳಿಂದಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ ಎಂದು ಪ್ರವಾಸಿ ಮಂದಿರ ರಸ್ತೆಯ ಸೆಂಟ್ ಜಾರ್ಜ ಜಾಕೋ ಬೈಟ್ ಚರ್ಚನ ಫಾ. ಎ.ಜೆ.ಜಾರ್ಜ ತಿಳಿಸಿದರು.

ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್ ನಲ್ಲಿ ದಾನಿ ವಿಶ್ವನಾಥರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಾನಿಗಳಿಂದಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ ಎಂದು ಪ್ರವಾಸಿ ಮಂದಿರ ರಸ್ತೆಯ ಸೆಂಟ್ ಜಾರ್ಜ ಜಾಕೋ ಬೈಟ್ ಚರ್ಚನ ಫಾ. ಎ.ಜೆ.ಜಾರ್ಜ ತಿಳಿಸಿದರು.

ಪ್ರವಾಸಿ ಮಂದಿರ ಸಮೀಪದ ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚನಲ್ಲಿ ದಾನಿಗಳಾದ ಉದ್ಯಮಿ ಗದ್ದೇಮನೆ ವಿಶ್ವನಾಥ ದಂಪತಿಗೆ ಸನ್ಮಾನಿಸಿ ಮಾತನಾಡಿದರು. ನಾನು ದೀಪ್ತಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾಗ ಉದ್ಯಮಿ ವಿಶ್ವನಾಥ ವಿದ್ಯಾರ್ಥಿಯಾಗಿದ್ದರು. ಈಗ ದೊಡ್ಡ ಉದ್ಯಮಿಯಾಗಿ ಬೆಳವಣಿಗೆ ಹೊಂದಿರುವುದಕ್ಕೆ ನನಗೆ ಹೆಮ್ಮೆಯಾಗಿದೆ. ತಾವು ದುಡಿದಿರುವ ಹಣದಲ್ಲಿ ಆದಾಯದ ಸ್ವಲ್ಫ ಭಾಗವನ್ನು ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಗಳು, ದೇವಸ್ಥಾನ, ಚರ್ಚಗಳಿಗೆ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಮಾತನಾಡಿ, ಕಳೆದ 12 ವರ್ಷಗಳಿಂದ ಉದ್ಯಮಿ ಗದ್ದೇಮನೆ ವಿಶ್ವನಾಥ ಸಮಾಜ ಸೇವೆ ಮಾಡುತ್ತಿದ್ದಾರೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತೀರ್ಥಹಳ್ಳಿ ತಾಲೂಕಿನ 110 ಶಾಲೆಗಳ 7500 ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದಾರೆ. ತಮ್ಮ ಹುಟ್ಟೂರನ್ನು ಮರೆಯದೆ ಸಮುದಾಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಕೊಟ್ಟಿದ್ದು ತನಗೆ ಕೂಡಿಟ್ಟಿದ್ದು ಪರರಿಗೆ ಎಂಬ ಗಾದೆಯಂತೆ ವಿಶ್ವನಾಥ್ ದಾನ ಮಾಡಿ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚಿಗೆ ಆರ್ಥಿಕ ಸಹಾಯ ನೀಡಿದ ವಿಶ್ವನಾಥ್ ದಂಪತಿಯನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ವಿಶ್ವನಾಥ್ ದಂಪತಿ ಎಲ್.ಎಫ್ ಚರ್ಚ್, ಬಸ್ತಿಮಠದ ಸೆಂಟ್ ಮೇರೀಸ್ ಚರ್ಚ್ ಗ ಭೇಟಿ ನೀಡಿ ಆ ಚರ್ಚಿನ ಫಾದರ್ ಹಾಗೂ ಆಡಳಿತ ಮಂಡಳಿಯವರಿಗೆ ಆರ್ಥಿಕ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಕ್ರಿಶ್ಚಿಯನ್ ಕೌನ್ಸಿಲ್ ನ ಮಾಜಿ ಸದಸ್ಯ ಎಂ.ಪಿ.ಸನ್ನಿ, ಸೆಂಟ್ ಜಾರ್ಜ ಜಾಕೋಬೈಟ್ ಚರ್ಚಿನ ಕಾರ್ಯದರ್ಶಿ ಫೌಲೋಸ್, ಸಹ ಕಾರ್ಯದರ್ಶಿ ಎಲ್ದೋ, ಖಜಾಂಚಿಗಳಾದ ಟಿ.ವಿ.ವಿಜಯನ್, ಜೇಮ್ಸ್ ಹಾಗೂ ದಾನಿ ವಿಶ್ವನಾಥ ಅವರ ಪತ್ನಿ ಜಿನಿ ವಿಶ್ವನಾಥ್ ಇದ್ದರು. ಎಂ.ಪಿ.ಮನು ಸ್ವಾಗತಿಸಿದರು.

PREV

Recommended Stories

ಅಕ್ಕಿ ಅಕ್ರಮ ಹಗರಣ: ಸತ್ತವರಿಗೂ ಅನ್ನಭಾಗ್ಯ !
ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು