ಡಾ.ಅಂಬೇಡ್ಕರ್‌ ಭವನ ಅವ್ಯವಸ್ಥೆ ಆಗರ !

KannadaprabhaNewsNetwork |  
Published : Dec 12, 2025, 03:15 AM IST
ಉಪಯೋಗಕ್ಕೆ ಬಾರದ ಶೌಚ್ಯಾಲಯ | Kannada Prabha

ಸಾರಾಂಶ

ದುರ್ನಾತ ಬೀರುತ್ತಿರುವ ಶೌಚಾಲಯಗಳು, ಮುರಿದು ಬಿದ್ದಿರುವ ಬಾಗಿಲುಗಳು, ನಿರಂತರ ನೀರು ಸೋರುತ್ತಿರುವ ಪೈಪ್‌ಗಳು. ಇದು ಯಾವುದೋ ಪಾಳು ಬಿದ್ದ ಕಟ್ಟಡದ ವರ್ಣನೆಯಲ್ಲ. ದಲಿತ ಸಮುದಾಯದ ಸಭೆ, ಸಮಾರಂಭ ಇತರ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಜಮಖಂಡಿ ನಗರದಲ್ಲಿ ನಿರ್ಮಾಣವಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭವನ ಅವ್ಯವಸ್ಥೆಯ ಆಗರವಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ದುರ್ನಾತ ಬೀರುತ್ತಿರುವ ಶೌಚಾಲಯಗಳು, ಮುರಿದು ಬಿದ್ದಿರುವ ಬಾಗಿಲುಗಳು, ನಿರಂತರ ನೀರು ಸೋರುತ್ತಿರುವ ಪೈಪ್‌ಗಳು. ಇದು ಯಾವುದೋ ಪಾಳು ಬಿದ್ದ ಕಟ್ಟಡದ ವರ್ಣನೆಯಲ್ಲ. ದಲಿತ ಸಮುದಾಯದ ಸಭೆ, ಸಮಾರಂಭ ಇತರ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಜಮಖಂಡಿ ನಗರದಲ್ಲಿ ನಿರ್ಮಾಣವಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭವನದ ಅವ್ಯವಸ್ಥೆ.

ಹಲವು ವರ್ಷಗಳಿಂದ ಬಳಕೆಯಲ್ಲಿರುವ ಈ ಭವನ, ಸಮಾಜದ ಅನೇಕ ಸಮಾರಂಭಗಳು, ಸಭೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಕೇಂದ್ರವಾಗಿದೆ. ಮೇಲ್ನೋಟಕ್ಕೆ ಕಟ್ಟಡ ಸುಸಜ್ಜಿತ ಎಂಬಂತೆ ಕಾಣುತ್ತದೆ. ಆದರೆ ಒಳಹೊಕ್ಕರೆ ಅವ್ಯವಸ್ಥೆಯ ದರ್ಶನವಾಗುತ್ತದೆ. ಭವನದ ಒಳಾಂಗಣ ಮತ್ತು ಹೊರಾಂಗಣ ಎರಡೂ ಕಡೆ ಅವ್ಯವಸ್ಥೆ ತಾಂಡವವಾಡುತ್ತಿದೆ.ಮೂಲ ಸೌಕರ್ಯಗಳಿಂದ ವಂಚಿತವಾಗಿ ಹಾಳು ಕೊಂಪೆಯಾಗಿ ಮಾರ್ಪಟ್ಟಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ನಿಷ್ಕಾಳಜಿಯೇ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶೌಚಾಲಯಗಳು ಬಳಸಲು ಅಸಾಧ್ಯವಾಗಿರುವ ಮಟ್ಟಿಗೆ ಹಾನಿಯಾಗಿದ್ದು, ಬಾಗಿಲುಗಳು ಮುರಿದು ಬಿದ್ದಿರುವುದರಿಂದ ಭದ್ರತೆಗೂ ತೊಂದರೆ ಉಂಟಾಗಿದೆ. ನೀರು ಸುರಿಯುವ ಪೈಪ್‌ಗಳು ಪ್ರತಿದಿನ ಜಲ ನಷ್ಟ ಉಂಟುಮಾಡುತ್ತಿದ್ದು, ಇದು ನಿರ್ವಹಣೆಯ ವೈಫಲ್ಯತೆ ಸಾಬೀತುಪಡಿಸುತ್ತದೆ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆಯದಿರುವುದು ಬೇಸರದ ಸಂಗತಿ. ಸಮುದಾಯ ಭವನನಿರ್ಮಿಸಿದಾಗ ಜನರಿಗೆ ಉಪಯೋಗವಾಗಬೇಕು ಎಂದು ಉದ್ದೇಶವಿದ್ದರೂ ನಿರ್ವಹಣೆ ಕೊರತೆಯಿಂದ ಹಾಳುಕೊಂಪೆಯಾಗಿ ಮಾರ್ಪಾಡಾಗಿದೆ.

ಭವನ ಸಮಾಜದ ಗೌರವದ ಸ್ಥಳ. ಆದರೆ ಈ ಭವನ ನೋಡಿದರೆ ನಿರ್ವಹಣೆ ಮರೀಚಿಕೆ ಆಗಿದೆ. ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

- ಭೀಮು ಮೀಸಿ ಜಿಲ್ಲಾಧ್ಯಕ್ಷರು ದಲಿತ ಸೇನೆ ಕರ್ನಾಟಕ

ಭವನದ ಶೌಚಾಲಯ, ಬಾಗಿಲು, ಪೈಪ್‌ಲೈನ್ ದುರಸ್ತಿ ಮತ್ತು ನವೀಕರಣ ತಕ್ಷಣ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು.

- ಲಿಂಗರಾಜ ಬೆಳ್ಳೆನ್ನವರ ತಾಲೂಕಾಧ್ಯಕ್ಷರು ದಲಿತ ಸೇನೆ ಕರ್ನಾಟಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಒಟ್ಟು ₹ 5500 ನೀಡಲು ರೈತರ ಬೇಡಿಕೆ
ಮಂಗಳೂರು ಏರ್‌ಪೋರ್ಟ್‌ಗೆ ಪಿಒಸಿ ಸ್ಥಾನಮಾನ ನೀಡಲು ಕ್ಯಾ. ಚೌಟ ಒತ್ತಾಯ