ಡಾ. ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ಮಹಿಳಾ ಕಬಡ್ಡಿ ತಂಡ ರಾಜ್ಯಮಟ್ಟಕ್ಕೆ

KannadaprabhaNewsNetwork |  
Published : Nov 09, 2026, 02:15 AM IST
2026 - 27ನೇ ಸಾಲಿನ ಜಿಲ್ಲಾಮಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಿನ ಹಳೇ ಶಿಡೇನೂರ ಡಾ. ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ತಂಡವು ವಿಜಯಿಶಾಲಿಯಾಗುವ ಮೂಲಕ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ. | Kannada Prabha

ಸಾರಾಂಶ

2026- 27ನೇ ಸಾಲಿನ ಜಿಲ್ಲಾಮಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಿನ ಹಳೇ ಶಿಡೇನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ತಂಡವು ವಿಜಯಶಾಲಿಯಾಗುವ ಮೂಲಕ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ.

ಬ್ಯಾಡಗಿ:2026- 27ನೇ ಸಾಲಿನ ಜಿಲ್ಲಾಮಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಿನ ಹಳೇ ಶಿಡೇನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ತಂಡವು ವಿಜಯಶಾಲಿಯಾಗುವ ಮೂಲಕ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ.

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಸವಣೂರಿನ ಮಜೀದ್ ಸರ್ಕಾರಿ ಪಪೂ ಕಾಲೇಜು ಮಹಿಳಾ ತಂಡವನ್ನು 13 ಅಂಕಗಳಿಂದ ಮಣಿಸುವ ಮೂಲಕ ನಿರಾಯಾಸದ ಗೆಲವು ಸಾಧಿಸಿತು, ಪಂದ್ಯದ ಮೊದಲಾರ್ಧದಲ್ಲಿ ಸಮಬಲದ ಹೋರಾಟ ಕಂಡು ಬಂದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಕಾಲೇಜು ಅಲ್ಪಮುನ್ನಡೆ ಸಾಧಿಸಿತ್ತು, ಆದರೆ ದ್ವಿತೀಯಾರ್ಧದಲ್ಲಿ ಉತ್ತಮ ಸಾಂಘಿಕ ಪ್ರದರ್ಶನ ತೋರುವ ಮೂಲಕ 13 ಅಂಕಗಳಿಂದ ಮಣಿಸಿದರು, ಮಜೀದ್ ಕಾಲೇಜು ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿತ್ತಾದರೂ ಕೋಚ ಮಂಜುಳಾ ಭಜಂತ್ರಿ ಅವರ ಗಡಿಯಲ್ಲಿ ಪಳಗಿದ ಡಾ. ಬಿ.ಆರ್.ಅಂಬೇಡ್ಕರ್ ಕಾಲೇಜು ತಂಡದ ಎದುರು ಮಂಡಿಯೂರಿತು.

ವಿಜಯಿ ತಂಡದ ಪರ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ರುಕ್ಸಾರ ಖತೀಬ್ ಆಲ್ ರೌಂಡ ಆಟದ ನೆರವಿನಿಂದ ಸುಲಭದ ಜಯ ಸಾಧಿಸಲು ಸಾಧ್ಯವಾಯಿತು, ರೈಡಿಂಗ್‌ನಲ್ಲಿ ನೀಲಮ್ಮ ಹಾಗೂ ಸಾನಿಕಾ ತಂಡಗಳಿಗೆ ಉತ್ತಮ ಅಂಕಗಳಿಸಿದರಲ್ಲದೇ ಕ್ಯಾಚಿಂಗ್‌ನಲ್ಲಿ ಉತ್ತಮ ಅಂಕಗಳನ್ನು ಕಲೆ ಹಾಕುವ ಮೂಲಕ ದೀಪಾ, ಸಂಜನಾ ಸೌಜನ್ಯ ಹಾಗೂ ಸರಿತಾ ಗೆಲುವಿಗೆ ಸಾಥ್ ನೀಡಿದರು. ಬರುವ ನ.26ರಿಂದ 28ರ ವರೆಗೆ ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿವೆ.

ಅಭಿನಂದನೆ: ಕಬಡ್ಡಿಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ತಂಡಕ್ಕೆ ಶಾಸಕರಾದ ಬಸವರಾಜ ಶಿವಣ್ಣನವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ನೆಹರು ಓಲೇಕಾರ, ಸದಸ್ಯರಾದ ಮಂಜುನಾಥ, ದೇವರಾಜ ಓಲೇಕಾರ ಮತ್ತು ನಮ್ಮ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ .ಟಿ. ಬೆನ್ನೂರ ಉಪಪ್ರಾಚಾರ್ಯ ಡಿ.ಸಿ. ಚಂದ್ರಪ್ಪ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕ ಮಾಲತೇಶ ಹಕ್ಕಿಮರಿಯಣ್ಣವರ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ