ಉದ್ಯೋಗ ಖಾತರಿ ಕಾಮಗಾರಿ ವಿಕಸಿತ ಭಾರತ ಮತ್ತು ಜೀವನೋಪಾಯ ಮಿಶನ್ ಅಡಿ ಮಂಜೂರಿಗೆ ಮನವಿ

KannadaprabhaNewsNetwork |  
Published : Nov 09, 2026, 02:15 AM IST
ಹಾನಗಲ್ಲ ತಾಲೂಕು ಗೊಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

೨೦೨೫-೨೬ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ-ರಾಮ ಜಿ) ಅಡಿ ಮಂಜೂರು ಮಾಡುವಂತೆ ತಾಲೂಕಿನ ಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಶಾಸಕ ಶ್ರೀನಿವಾಸ ಮಾನೆ, ತಾಪಂ ಇಒ ಜಗದೀಶ ಕಮ್ಮಾರ ಹಾಗೂ ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.

ಹಾನಗಲ್ಲ: ೨೦೨೫-೨೬ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ-ರಾಮ ಜಿ) ಅಡಿ ಮಂಜೂರು ಮಾಡುವಂತೆ ತಾಲೂಕಿನ ಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಶಾಸಕ ಶ್ರೀನಿವಾಸ ಮಾನೆ, ತಾಪಂ ಇಒ ಜಗದೀಶ ಕಮ್ಮಾರ ಹಾಗೂ ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.

ಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರು ೨೦೨೫-೨೬ನೇ ಸಾಲಿನ ಎಂಜಿಎನ್‌ಆರ್‌ಇಜಿ ಯೋಜನೆ ಅಡಿ ಅಡಿಕೆ ತೋಟ ನಿರ್ಮಿಸಲು ಕ್ರಿಯಾ ಯೋಜನೆಯಲ್ಲಿ ಹೆಸರು ಸೇರ್ಪಡೆ ಮಾಡಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರ ಜಮೀನಿನ ಪೋಟೋ ಜಿಪಿಎಸ್ ಮಾಡಿದ್ದಾರೆ. ಇದೀಗ ವಿಬಿ-ಜಿ-ರಾಮ ಜಿ ಯೋಜನೆಯಡಿ ಎನ್‌ಎಂಆರ್ ತೆಗೆಯಲು ಬರುವುದಿಲ್ಲ. ಹೊಸ ಕಾಮಗಾರಿಗಳಿಗೆ ಮಾತ್ರ ಖಾಲಿ ಜಾಗದ ಪೋಟೋ ಇದ್ದರೆ ಬರುತ್ತದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನರೇಗಾ ಯೋಜನೆಯಡಿ ಜಿಪಿಎಸ್ ಪೋಟೋ ಮಾಡಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸಂಬಂಧ ನ. ೫ರಂದು ನಡೆದ ಗೊಂದಿ ಗ್ರಾಪಂ ಗ್ರಾಮಸಭೆಯಲ್ಲಿ ರೈತರಿಗೆ ನೂತನ ನಿಯಮಗಳಿಂದ ಅನ್ಯಾಯವಾಗುತ್ತಿದೆ ಎಂದು ಮನವರಿಕೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ಮಾರ್ಪಾಡು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಕರಬಸನಗೌಡ ಪಾಟೀಲ, ವಿರುಪಾಕ್ಷ ದಾಳೇರ, ಮಂಜು ತಳವಾರ, ರಬ್ಬಾನಿ ಅತ್ತಿಕಟ್ಟಿ, ಬಸವಣ್ಣೆಪ್ಪ ಕುರುಬರ, ಶಾರುಕಾನ್ ಗೊಂದಿ, ಪ್ರಕಾಶ ವಡ್ಡರ, ಸದಾಶಿವ ದ್ವಾರಳ್ಳಿ, ಶಿವು ಕಿಳ್ಳಿಕ್ಯಾತರ, ಚಂದ್ರು ಗೊಂದಿ, ಶಿವನಗೌಡ್ರ ಓದೇಗೌಡ್ರ, ಶಿವಯೋಗಿ ಬಾಳಿಹಳ್ಳಿ, ಕರಬಸಪ್ಪ ಮಾಕೊಪ್ಪದ, ಮುನ್ನಾ ಆಲೂರ, ಸಲೀಂ, ಸರ್ಫರಾಜ್ ಬಾಳೂರ, ಮಂಜು ಕೋಣನಕೊಪ್ಪ, ಸಲೀಂ ಆಲದಕಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ