ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗಭೂಮಿ ಉಡುಪಿ’ಯ ೫೯ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹೊಟೇಲ್ ಡಯಾನಾದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗಭೂಮಿ ಉಡುಪಿ’ಯ ೫೯ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹೊಟೇಲ್ ಡಯಾನಾದಲ್ಲಿ ನಡೆಯಿತು. ಸಂಸ್ಥೆಯ ೬೦ನೇ ವರ್ಷದ ಸಂಭ್ರಮದ ೨೦೨೪-೨೫ರ ಸಾಲಿಗೆ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.ಉಳಿದಂತೆ ಮಾರ್ಗದರ್ಶಕರಾಗ ಡಾ. ಎಚ್. ಶಾಂತಾರಾಮ್, ಗೌರವಾಧ್ಯಕ್ಷರಾಗಿ ಡಾ. ಎಚ್.ಎಸ್. ಬಲ್ಲಾಳ್, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ್ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ - ಪ್ರದೀಪ್‌ಚಂದ್ರ ಕುತ್ಪಾಡಿ, ಜತೆ ಕಾರ್ಯದರ್ಶಿಗಳು - ಶ್ರೀಪಾದ ಹೆಗಡೆ ಮತ್ತು ವಿವೇಕಾನಂದ ಎನ್., ಕೋಶಾಧಿಕಾರಿ - ಭೋಜ ಯು.
ಕಾರ್ಯಕಾರಿ ಮಂಡಳಿಯ ಸದಸ್ಯರು: ಪೂರ್ಣಿಮಾ ಸುರೇಶ್, ವಿದ್ಯಾವಂತ ಆಚಾರ್ಯ, ಎಚ್. ಜಯಪ್ರಕಾಶ್ ಕೆದ್ಲಾಯ, ಆನಂದ ಮೇಲಂಟ, ಡಾ. ವಿಷ್ಣುಮೂರ್ತಿ ಪ್ರಭು, ಅಮಿತಾಂಜಲಿ ಕಿರಣ್, ರವೀಂದ್ರ ಶೆಟ್ಟಿ ಕಡೆಕಾರು, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಹರೀಶ್ ಜಿ. ಕಲ್ಮಾಡಿ, ಕೆ. ರವೀಂದ್ರ ಆಚಾರ್ಯ, ಕಾರ್ತಿಕ್ ಪ್ರಭು.
ಗೌರವ ಸಲಹಾ ಸಮಿತಿ: ಯು. ದಾಮೋದರ್, ಕೆ. ಗೋಪಾಲ್, ಕೆ. ಲಕ್ಷ್ಮೀನಾರಾಯಣ ಭಟ್, ಯು. ವಿಶ್ವನಾಥ ಶೆಣೈ, ಭುವನಪ್ರಸಾದ್ ಹೆಗ್ಡೆ, ಕುತ್ಪಾಡಿ ವಿಠಲ ಗಾಣಿಗ.ವಿಶೇಷ ಆಹ್ವಾನಿತರು : ಡಾ. ಮಾಧವಿ ಭಂಡಾರಿ, ಬೆಳಗೋಡು ರಮೇಶ್ ಭಟ್, ತೆಳ್ಳಾರು ರವೀಂದ್ರ ಪೂಜಾರಿ, ರಂಜನ್ ಕಲ್ಕೂರ, ಜಯಕರ್ ಮಣಿಪಾಲ, ಪಿ. ಆರ್ಮುಗಂ, ಸಂದೀಪ್ ಕುಮಾರ್ ಎಂ., ವಿಜಯ್ ಪ್ರಭಾಕರ್, ಎಚ್. ನರಸಿಂಹಮೂರ್ತಿ ರಾವ್, ಸೂರ್ಯಪ್ರಕಾಶ್, ಸುಬ್ರಹ್ಮಣ್ಯ ಸೇರಿಗಾರ್, ಸುಭಾಶ್ ಕೊರಂಗ್ರಪಾಡಿ, ರಾಘವ ಬಿ., ಅಕ್ಷಯ್ ಭಟ್, ಆದ್ಯತಾ ಭಟ್, ಪ್ರೀತಮ್ ನಾಯಕ್, ರೇವತಿ ನಾಡಿಗೇರ್, ರವಿರಾಜ್ ನಾಯಕ್, ಶ್ರೀಕಲ್ಯಾಣಿ ಪೂಜಾರಿ, ವಿಶ್ವನಾಥ್ ಕಟ್ಟೆಗುಡ್ಡೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.