ನವಲಿ: ಸಾಮಾಜಿಕ ಅಸಮಾನತೆ ಮತ್ತು ಅಸ್ಪೃಶ್ಯತೆ ವಿರುದ್ಧ ಡಾ.ಬಿ.ಆರ್. ಅಂಬೇಡ್ಕರ್ ನಡೆಸಿದ ಹೋರಾಟ ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ನಿಂಗಪ್ಪ ನಾಯಕ ತಿಳಿಸಿದರು.
ಶಿಕ್ಷಣದ ಮೂಲಕ ಸಮಾಜ ಬದಲಾಯಿಸಬಹುದು ಎಂಬ ಅವರ ನಂಬಿಕೆ ಯುವ ಜನತೆಗೆ ಪ್ರೇರಣೆಯಾಗಿದೆ, ಶಿಕ್ಷಣ ಪಡೆದು ಸಂಘಟಿತ ಹೋರಾಟ ನಡೆಸಿ ಎಂಬ ಅವರ ಹೋರಾಟ ಇಂದಿಗೂ ಪ್ರಸ್ತುತವಾಗಿದೆ ಎಂದರು.
ವೀರೇಶ ನಾಗವಂಶಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಒಂದೇ ಜಾತಿಗೆ ಸೀಮಿತರಲ್ಲ, ಅವರು ಅಸ್ಪೃಶ್ಯರ ಮತ್ತು ಕಾರ್ಮಿಕರ, ರೈತರು, ಪ್ರತಿಯೊಂದು ಸಮುದಾಯದ ಬಗ್ಗೆ ಹೋರಾಟ ಮಾಡಿ ನ್ಯಾಯ ಒದಗಿಸಿದ್ದಾರೆ. ಅಂಬೇಡ್ಕರ್ ಮಾರ್ಗದಲ್ಲಿ ಇಂದಿನ ಯುವಜನತೆ ಸಾಗಬೇಕು ಎಂದರು.ಜಯಂತಿ ಆಚರಣೆ ವೇಳೆ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಪವಿತ್ರಾ, ಗಣೇಶ, ಹುಲಿಗೇಮ್ಮ, ಕಾವೇರಿ, ಗಣೇಶರನ್ನು ಸನ್ಮಾನಿಸಲಾಯಿತು.