ಕನ್ನಡಪ್ರಭ ವಾರ್ತೆ ಉಡುಪಿ
ಅವರು ಕಾಲೇಜಿನಲ್ಲಿ ಏರ್ಪಡಿಸಿದ್ದ ಡಾ. ಬಾಬು ಜಗಜೀವನ್ ರಾಮ್ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಥಿ೯ ಕ್ಷೇಮಾಪಾಲನಾ ಅಧಿಕಾರಿ ಪ್ರೊ. ಸುರೇಖಾ, ಮಾನವಿಕ ವಿಭಾಗದ ಮುಖ್ಯಸ್ಥ ಪ್ರೊ.ರೋಹಿತ್ ಎಸ್. ಅಮೀನ್, ಐಕ್ಯೂಎಸಿಯ ಡಾ.ಜಯಮೋಲ್ ಪಿ.ಎಸ್ ಹಾಜರಿದ್ದರು ಹಾಗೂ ಶಿಕ್ಷಕ ವೃಂದ ಪುತ್ತಳಿಗೆ ಪುಷ್ಪನಮನ ಸಲ್ಲಿಸಿದರು.ಎನ್.ಎಸ್.ಎಸ್‌ನ ಸಂಯೋಜನಾಧಿಕಾರಿಯಾದ ಡಾ. ಸಿ.ಬಿ ನವೀನ್ ಚಂದ್ರ ಹಾಗೂ ಅಮೋಘ ಗಾಡ್ಕರ್ ಕಾರ್ಯಕ್ರಮ ಸಂಯೋಜಿಸಿದ್ದರು. ಎನ್.ಎಸ್.ಎಸ್ ವಿದ್ಯಾರ್ಥಿನಿ ಕುಮಾರಿ ಚಂದ್ರಿಕಾ ಡಾ. ಬಾಬು ಜಗಜೀವನ್ ರಾಮ್ ರವರ ಕಿರು ಪರಿಚಯ ಮಾಡಿದರು. ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ಅಶೋಕ ಮತ್ತು ನಂದನ್ ರೈಮಂಡ್ ಮಚಾಡೋ ಹಾಗೂ ರೆಡ್ ಕ್ರಾಸ್ ಕಾರ್ಯದರ್ಶಿಗಳಾದ ಮಂಜುನಾಥ್ ಮತ್ತು ಬಸವರಾಜ್ ಹಾಜರಿದ್ದರು.