ದಮನಿತರ ಧ್ವನಿಯಾದ ಡಾ. ಬಾಬು ಜಗಜೀವನರಾಂ-ತಹಸೀಲ್ದಾರ್‌ ಎಸ್‌. ರೇಣುಕಾ

KannadaprabhaNewsNetwork |  
Published : Apr 07, 2026, 02:30 AM IST
ಹಾನಗಲ್ಲಿನಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ತಾಲೂಕು ತಹಶೀಲ್ದಾರ ಎಸ್.ರೇಣುಕಾ ಹಾಗೂ ಅಧಿಕಾರಿಗಳು ಗಣ್ಯರು ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ದಮನಿತರ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಕಟ್ಟಾಳುವಾದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರು ನಾಡು ಕಂಡ ಅಪ್ರತಿಮ ಆದರ್ಶ ನಾಯಕ ಎಂದು ತಾಲೂಕು ತಹಸೀಲ್ದಾರ್‌ ಎಸ್.ರೇಣುಕಾ ತಿಳಿಸಿದರು.

ಹಾನಗಲ್ಲ: ದಮನಿತರ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಕಟ್ಟಾಳುವಾದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರು ನಾಡು ಕಂಡ ಅಪ್ರತಿಮ ಆದರ್ಶ ನಾಯಕ ಎಂದು ತಾಲೂಕು ತಹಸೀಲ್ದಾರ್‌ ಎಸ್.ರೇಣುಕಾ ತಿಳಿಸಿದರು.

ಸೋಮವಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ತಹಸೀಲ್ದಾರ್‌ ಕಚೇರಿಯ ಸಭಾಭವನದಲ್ಲಿ ಆಯೋಜಿಸಿದ ಡಾ. ಬಾಬು ಜಗಜೀವನರಾಂ ಅವರ ೧೧೯ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದಲ್ಲಿ ಆಹಾರ ಕ್ರಾಂತಿಯನ್ನೇ ಮಾಡಿದ ಜಗಜೀವನರಾಂ ಅವರು ದೀರ್ಘ ಕಾಲದ ಅಧಿಕಾರಾವಧಿಯನ್ನು ದೇಶದ ಹಿತಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡ ದೇಶಭಕ್ತ. ಅವರ ಸಾಧನೆಯ ಶಕ್ತಿ ಮಾರ್ಗದರ್ಶಿಯಾದುದು. ೩೦ ವರ್ಷಗಳ ಕಾಲ ಭಾರತ ಸರ್ಕಾರದ ಸಚಿವರಾಗಿ ಇಡೀ ದೇಶದ ಹಿತಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ದಲಿತ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿತಿಯಲ್ಲಿ ತರುವ, ಸಾಮಾಜಿಕ ನ್ಯಾಯಕ್ಕಾಗಿ ಎಲ್ಲ ರೀತಿಯ ಬೆಂಬಲ ಸಹಕಾರ ನೀಡಿದ ಅವರ ಬದುಕು ಸಾರ್ಥಕವಾದುದು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಂಗಮ್ಮ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ತೋಟಗಾರಿಕಾ ಇಲಾಖೆ ಅಧಿಕಾರಿ ವೀರಭದ್ರಯ್ಯ, ಸಿಡಿಪಿಓ ರಾಮು ಬಯಲಸೀಮೆ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಉಪನೋಂದಣಾಧಿಕಾರಿ ಚಕ್ರಸಾಲಿ, ಚಂದ್ರಣ್ಣ ಹರಿಜನ, ಹನುಮಂತಪ್ಪ ಯಳ್ಳೂರ, ರಾಜಕುಮಾರ ಶಿರಪಂಥಿ, ರಾಜು ಹರಿಜನ, ನೀಲಪ್ಪ ಹರಿಜನ, ಪ್ರವೀಣ ಹರಿಜನ, ನಿಂಗಪ್ಪ ಕಾಳೇರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲೆದಾಟ ತಪ್ಪಿಸಲು ಜನಸ್ಪಂದನ ಜಾರಿ: ಭೀಮಣ್ಣ ನಾಯ್ಕ
ಹಲವರ ತ್ಯಾಗ,ಬಲಿದಾನದಿಂದ ಬಿಜೆಪಿ ಬಲಿಷ್ಠ: ಕೆ.ಎಸ್. ರಾಘವೇಂದ್ರ