ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಮುಖರ್ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪಕ್ಷದ ಸಂಸ್ಥಾಪಕ ಅವರ ಜೀವನದ ಬಗ್ಗೆ ವಿವರಿಸಿ ಅವರು ಹಾಕಿಕೊಟ್ಟ ಆದರ್ಶದಲ್ಲಿಯೇ ನಾವೆಲ್ಲ ಇರಬೇಕೆಂದು ಕರೆ ನೀಡಿದರು.
ನಂತರ ಪಕ್ಷ ಕೊಟ್ಟ ಹಲವಾರು ಕಾರ್ಯಕ್ರಮಗಳ ಬಗ್ಗೆ ಸಂಚಾಲಕ ಶ್ರೀಕಾಂತ ನಾಯಕ್ ಮಾಹಿತಿ ನೀಡಿ, ಇಂದಿನ ಪುಣ್ಯತಿಥಿಯಿಂದ ಅವರ ಜನ್ಮದಿನಾಂಕ ಜುಲೈ 6ನೇ ತಾರೀಕಿನ ವರೆಗೆ ಪ್ರತೀ ಬೂತ್‌ನಲ್ಲಿಯೂ ‘ಏಕ್ ಪೇಡ್ ಮಾ ಕೆ ನಾಮ್’ ಎನ್ನುವ ಕಾರ್ಯಕ್ರಮ ಮಾಡಬೇಕು. ಪ್ರತೀ ಬೂತ್‌ನಲ್ಲಿ ಕನಿಷ್ಠ ಹತ್ತು ಗಿಡಗಳನ್ನಾದರೂ ಮನೆಗಳಲ್ಲಿ ತಾಯಿಯೊಂದಿಗೆ ನಿಂತು ನೆಟ್ಟು ವರದಿ ನೀಡಬೇಕು. ಅದರೊಂದಿಗೆ ಜೂನ್ 25ರಂದು ತುರ್ತು ಪರಿಸ್ಥಿತಿಯ ಕರಾಳ ದಿನದ ಕಾರ್ಯಕ್ರಮ, ವಾಲ್ಮೀಕಿ ನಿಗಮದ ಹಗರಣ ಕುರಿತಂತೆ ಡಿಸಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ, ಮನ್ ಕಿ ಬಾತ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಲ್ಲ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಮಂಡಲದಿಂದ ಬೂತ್ ಮಟ್ಟದವರೆಗಿನ ಪದಾಧಿಕಾರಿಗಳು ನಡೆಸಿ ವರದಿ ನೀಡಬೇಕೆಂದು ಹೇಳಿದರು.ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಮಾತನಾಡಿ, ಎಲ್ಲ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್, ಅನಿತಾ ಶ್ರೀಧರ್, ರೈತ ಮೋರ್ಚ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಕಾರ್ಯಕ್ರಮಗಳ ಸಂಚಾಲಕರಾದ ಅರುಣ್ ಭಂಡಾರಿ, ಮಮತಾ ಶೆಟ್ಟಿ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ವೀಣಾ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಚಿನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಂಕೇತಿಕವಾಗಿ ಗಿಡಗಳ ವಿತರಣೆ ಮಾಡಲಾಯಿತು.