ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಗೆ ಪ್ರತಿಷ್ಠಿತ ಸುವರ್ಣ ಕನ್ನಡಿಗ-26 ಪ್ರಶಸ್ತಿ

KannadaprabhaNewsNetwork |  
Published : Mar 31, 2026, 01:15 AM IST
ಮುಷ್ಕರನಿರತ ಭೂಮಾಪಕರು | Kannada Prabha

ಸಾರಾಂಶ

ತರೀಕೆರೆತಾಲೂಕಿನ ರಂಗೇನಹಳ್ಳಿ ಗ್ರಾಮೀಣ ಪ್ರತಿಭೆ ಡಾ.ಎಚ್.ಎಂ. ಮರುಳ ಸಿದ್ದಯ್ಯ ಪಟೇಲ್ ಅವರಿಗೆ ಕನ್ನಡಪ್ರಭ ಮತ್ತು ಏಷಿಯಾ ನೆಟ್ ಸುವರ್ಣ ನ್ಯೂಸ್ ನಿಂದ ವಿಶೇಷ ಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ಸುವರ್ಣ ಕನ್ನಡಿಗ 2026ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಾವಿರಾರು ಕುಟುಂಬಗಳನ್ನು ನಾಡಿಗೆ ಕರೆತಂದು ಬಾಳಿಗೆ ಬೆಳಕಾದವರು

ಕನ್ನಡಪ್ರಭ ವಾರ್ತೆ ತರೀಕೆರೆ

ತಾಲೂಕಿನ ರಂಗೇನಹಳ್ಳಿ ಗ್ರಾಮೀಣ ಪ್ರತಿಭೆ ಡಾ.ಎಚ್.ಎಂ. ಮರುಳ ಸಿದ್ದಯ್ಯ ಪಟೇಲ್ ಅವರಿಗೆ ಕನ್ನಡಪ್ರಭ ಮತ್ತು ಏಷಿಯಾ ನೆಟ್ ಸುವರ್ಣ ನ್ಯೂಸ್ ನಿಂದ ವಿಶೇಷ ಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ಸುವರ್ಣ ಕನ್ನಡಿಗ 2026ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಬೆಂಗಳೂರಿನ ಪ್ರತಿಷ್ಠಿತ ಕಾಂನ್ರಾಡ್ ಅಂತಾರಾಷ್ಟ್ರೀಯ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಡಾ.ಎಚ್.ಎಂ. ಮರುಳಸಿದ್ದಯ್ಯ ಪಟೇಲ್ ಅವರಿಗೆ "ಸುವರ್ಣ ಕನ್ನಡಿಗ 2026 " ಪ್ರಶಸ್ತಿ ನೀಡಿ ಗೌರವಿಸಿದರು.

ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣ ಸಂಸ್ಕೃತಿ ಮಂತ್ರಾಲಯದ ಮಾನವ ಶಾಸ್ತ್ರಜ್ಞ ವಿಜ್ಞಾನಿಯಾಗಿ ಕಾಡು ಮೇಡು ಗಳಲ್ಲಿ ವಾಸವಾಗಿದ್ದ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್‌, ನಾಗರಿಕ ಜೀವನದಿಂದ ದೂರ ವಾಗಿದ್ದ ಸಾವಿರಾರು ಕುಟುಂಬಗಳನ್ನು ಗುರುತಿಸಿ ಅವರ ಮನಪರಿವರ್ತಿಸಿ ನಾಡಿಗೆ ಕರೆತಂದು ಪುನರುಜ್ಜೀವನ ದೊರಕಿಸುವ ಅತ್ಯಂತ ಕ್ಲಿಷ್ಟಕರ ಸಾಹಸ ಕಾರ್ಯ ಕೈಗೊಂಡು ಸಾವಿರಾರು ಜನರ ಬಾಳಿಗೆ ಬೆಳಕಾದವರು. ಅವರಿಗೆ ಸುವರ್ಣ ಕನ್ನಡಿಗ 26ರ ಪ್ರಶಸ್ತಿ ನೀಡಿ ರುವುದು ಜಿಲ್ಲೆಗೆ ಸುವರ್ಣ ಮುಕುಟಪ್ರಾಯವಾಗಿದೆ.ಡಾ.ಎಚ್.ಎಂ.ಪಟೇಲ್ ಅಸಾಧಾರಣ ಪ್ರತಿಭೆ ಗುರುತಿಸಿ ತರೀಕೆರೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ನೀಡಿ ಧನ್ಯತೆ ಮೆರೆದಿರುವುದು ಕನ್ನಡಿಗರ ಸೌಭಾಗ್ಯ.ಡಾ.ಎಚ್.ಎಂ.ಪಟೇಲ್ ಅಸಾಧಾರಣ ಶಕ್ತಿಯಾಗಿ, ಸಮಾಜ ಸೇವೆ, ಕಲೆ ಸಾಹಿತ್ಯ ಸಂಸ್ಕೃತಿ ಕನ್ನಡ ನಾಡು ನುಡಿಸೇವೆ ಸಲ್ಲಿಸುತ್ತಿರುವ ಇವರು ಅರಿವು ವೇದಿಕೆ ಅಶ್ರಯದಲ್ಲಿ ನಿರಂತರ ನಡೆಯುತ್ತಿರುವ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 4,500 ಜನರಿಗೆ ಕಣ್ಣಿನ ದೃಷ್ಠಿ ಭಾಗ್ಯ ದೊರಕಿಸುವ ಸೇವೆ ವಿಶಿಷ್ಠವಾಗಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಸುವರ್ಣ ಕನ್ನಡಿಗ ಪ್ರಶಸ್ತಿ ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠೆ ಹೆಚ್ಚಿಸಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಗೌರವಾಧ್ಯಕ್ಷ ಕನ್ನಡಶ್ರೀ ಬಿ.ಎಸ್.ಭಗವಾನ್, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ಲೇಖಕ ತ.ಮ.ದೇವಾನಂದ್, ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ, ಶಿಕ್ಷಕ ತಿಪ್ಪೇಶಪ್ಪ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನೀತ ಕಿರಣ್, ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಲತಾ ಗೋಪಾಲಕೃಷ್ಣ ಅಭಿನಂದಿಸಿದ್ದಾರೆ. -

30ಕೆಟಿಆರ್.ಕೆ.1ಃ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತರೀಕೆರೆ ತಾಲೂಕು ರಂಗೇನಹಳ್ಳಿಯ ಡಾ.ಎಚ್.ಎಂ. ಮರುಳುಸಿದ್ದಯ್ಯ ಪಟೇಲ್ ಅವರಿಗೆ ಕನ್ನಡಪ್ರಭ ಮತ್ತು ಏಷಿಯಾ ನೆಟ್ ಸುವರ್ಣ ನ್ಯೂಸ್ ನಿಂದ ಪ್ರತಿಷ್ಠಿತ ಸುವರ್ಣ ಕನ್ನಡಿಗ 2026ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೪೩೪೦೦ ಕೋಟಿ ರು. ಮೀಸಲು: ಟಿ.ಬಿ.ಜಯಚಂದ್ರ
ಮಹಾವೀರರ ತತ್ವಗಳಿಂದ ಉದ್ವಿಗ್ನತೆ ಶಮನ