ಪಾಂಡವಪುರ:
ಪಟ್ಟಣದ ಹಾರೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾಜ ಸೇವಕ, ವೈದ್ಯರಾದ ಡಾ.ಕೆ.ವೈ.ಶ್ರೀನಿವಾಸ್ ಅವರ ಸವಿ ನೆನಪಿಗಾಗಿ ಶಾಲಾ ಮಕ್ಕಳಿಗೆ ಇಂಗ್ಲಿಷ್ ನಿಘಂಟು ವಿತರಿಸಿ ಮಾತನಾಡಿದರು.
ಡಾ.ಕೆ.ವೈ.ಶ್ರೀನಿವಾಸ್ ಅವರು ಕ್ರೀಡೆ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿದ್ದಾರೆ. ಜೊತೆ ಜೊತೆಯಲ್ಲೇ ಸಮಾಜ ಸೇವೆಗೂ ತಮ್ಮ ಇಡೀ ಜೀವಮಾನವನ್ನು ಮುಡಿಪಾಗಿಟ್ಟಿದ್ದರು. ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ 75 ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಬೇಕೆಂಬುದು ಅವರ ಬಯಕೆಯಾಗಿತ್ತು. ಇದೀಗ ಅವರ ಪುತ್ರ ಡಾ.ಕೆ.ಎಸ್.ಅಭಿನಯ್ ಡಾ.ಶ್ರೀನಿವಾಸ್ ಅವರ ಬಯಕೆ ಈಡೇರಿಸಲು ಮುಂದಾಗಿದ್ದಾರೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಈಚೆಗೆ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಆದರೆ, ಬದ್ಧತೆಯಿಂದ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳು ಉದ್ಧಾರವಾಗುತ್ತವೆ ಎಂಬುದಕ್ಕೆ ಪಾಂಡವಪುರ ಫ್ರೆಂಚ್ ರಾಕ್ಸ್ ಶತಮಾನ ಸರ್ಕಾರಿ ಶಾಲೆ ಸೂಕ್ತ ಉದಾಹರಣೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ ಮಾತನಾಡಿ, ಪಾಂಡವಪುರ ತಾಲೂಕಿನಲ್ಲಿ ಒಟ್ಟು 9672 ಮಕ್ಕಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಾ.ಕೆ.ವೈ.ಶ್ರೀನಿವಾಸ್ ಅವರ ಪುತ್ರ ಡಾ.ಕೆ.ಎಸ್.ಅಭಿನಯ್ ಅವರು 75 ಶಾಲೆ ಮಕ್ಕಳಿಗೆ ನೋಟ್ ಬುಕ್ ಹಾಗೂ ಇಂಗ್ಲಿಷ್ ನಿಘಂಟು ವಿತರಿಸಿದ್ದಾರೆ. ಸರ್ಕಾರಿ ಶಾಲೆಗಳ ನೆರವಿಗೆ ಮತ್ತಷ್ಟು ದಾನಿಗಳು ನೆರವಾಗಬೇಕು ಎಂದರು.