ಕನ್ನಡಪ್ರಭ ವಾರ್ತೆ ಭದ್ರಾವತಿ
ಅವರು ಶನಿವಾರ ಕರುಣಾ ಸೇವಾ ಕೇಂದ್ರ ಹಾಗೂ ಕರುಣಾ ಮಹಿಳಾ ಮಂಡಳಿಗಳ ಒಕ್ಕೂಟಗಳ ಆಶ್ರಯದಲ್ಲಿ ಸೈಂಟ್ ಚಾರ್ಲ್ಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೆಟ್ಟ ವಿಚಾರವನ್ನು ಬಿಟ್ಟುಬಿಡೋಣ. ಸಂಘ-ಸಂಸ್ಥೆಗಳೆಂದ ಮೇಲೆ ಕೆಟ್ಟದ್ದು, ಒಳ್ಳೆಯದು ಇದ್ದೇ ಇರುತ್ತದೆ. ನಮ್ಮನ್ನು ಬೆಳೆಸುವ ಸಂಘ-ಸಂಸ್ಥೆಗಳ ವಿಚಾರವಾಗಿ ಒಳ್ಳೆಯದನ್ನೆ ಮಾತನಾಡೋಣ, ಒಳ್ಳೆಯದನ್ನೇ ಮಾಡೋಣ. ಇಲ್ಲಿ ಯಾರು ಪರಿಪೂರ್ಣರಲ್ಲ ಎಲ್ಲರೂ ಬದಲಾಗಬೇಕು ಎಂದರು.ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾರೆ. ಅಂತೆಯೆ ಕುಟುಂಬ ನಿರ್ವಹಣೆಯಲ್ಲಿಯೂ ಅವರ ಪಾತ್ರ ಗಣನೀಯ. ಹೆಚ್ಚು ಮಾತಿನಿಂದ ಜಗಳ ಉಲ್ಬಣವಾಗುತ್ತವೆ. ಆದ್ದರಿಂದ ಮಹಿಳೆಯರು ಮಾತಿಗೆ ಮಾತು ಕೊಡದೆ ಮಾತು ಕಡಿಮೆ ಮಾಡಿದರೇ ಒಳಿತು ಎಂದರು.
ಮಾರ್ಚ್ ೮ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಲ್ಲೆಡೆ ಆಚರಿಸಲಾಗುವುದು. ಆ ಸಮಯದಲ್ಲಿ ಮುಸಲ್ಮಾನ ಮಹಿಳೆಯರು ಉಪವಾಸದ ದಿನಗಳನ್ನು ಆಚರಿಸುವುದರಿಂದ ಯಾರಿಗೂ ಯಾವುದರಲ್ಲಿಯೂ ಕೊರತೆಯಾಗಬಾರದೆಂದು ಒಕ್ಕೂಟದ ನಿರ್ದೇಶಕಿ ಸಿಸ್ಟರ್ ಎಲೆನ್ ಮೊರಸ್ ಇಂದು ಒಂದು ತಿಂಗಳ ಮುಂಚಿತವಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ನ್ಯೂಟೌನ್ ಸೈಂಟ್ ಚಾರ್ಲ್ಸ್ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಸಿಸ್ಟರ್ ಎಲಿಜಬೆತ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲ ಆಸ್ಪತ್ರೆ ಉಪ ವ್ಯವಸ್ಥಾಪಕಿಯರಾದ ಸಿಸ್ಟರ್ ಬರ್ನಿ, ಸಿಸ್ಟರ್, ಡಾ. ರಜೀನಾ, ಸಿಸ್ಟರ್ ತೆರೇಸಾ ಡಿಕಾಸ್ಟ, ಸಿಸ್ಟರ್ ಪ್ರಭಾ, ಸಿಸ್ಟರ್ ಆಡ್ಲಿನ್, ಸಿಸ್ಟರ್ ಸಿಲ್ವಿಯ, ಉದ್ಯಮಿ ಬಿ.ಕೆ ಜಗನ್ನಾಥ್, ಕಾರ್ಯಕರ್ತೆಯರಾದ ಧನಲಕ್ಷ್ಮಿ, ಸಾವಿತ್ರಿ, ಮೇರಿ ಉಪಸ್ಥಿತರಿದ್ದರು.
ಮಹಿಳಾ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸುಪ್ರಿಯ ನಿರೂಪಿಸಿ, ಕರುಣಾ ಸೇವಾ ಕೇಂದ್ರದ ಮಹಿಳಾ ಒಕ್ಕೂಟಗಳ ನಿರ್ದೇಶಕಿ ಸಿಸ್ಟರ್ ಹೆಲೆನ್ ಮೊರಾಸ್ ಸ್ವಾಗತಿಸಿದರು, ಧನಲಕ್ಷ್ಮಿ ವಂದಿಸಿದರು.