ಡಾ.ಎಲ್‌.ಸುಬ್ರಹ್ಮಣ್ಯಂಗೆ ಸಂಗೀತ ಕಲಾವಾರಿಧಿ, ಡಾ.ವರಖೇಡಿ ಸಹಿತ ವಿದ್ವಾಂಸರಿಗೆ ವಿಶ್ವೇಶ ತೀರ್ಥಾನುಗ್ರಹ ಪ್ರಶಸ್ತಿ

KannadaprabhaNewsNetwork |  
Published : Apr 19, 2025, 12:37 AM IST
18ಪೇಜಾವರ | Kannada Prabha

ಸಾರಾಂಶ

ಪೆರಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಿ ಸಿದ್ಧಾಂತೋತ್ಸವ ಹಾಗೂ ರಾಮೋತ್ಸವದ ಧರ್ಮಸಭೆಯಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ನಿಯೋಜಿತ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ವಿದ್ವಾನ್ ಡಾ ಎಲ್ ಸುಬ್ರಹ್ಮಣ್ಯಂ ಅವರಿಗೆ ಸಂಗೀತ ಕಲಾವಾರಿಧಿ ಬಿರುದಿನೊಂದಿಗೆ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಪೆರಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಪೇಜಾವರ ಮಠ, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಅಖಿಲ ಭಾರತ ಮಾಧ್ವ ಮಹಾಮಂಡಲಗಳ ಸಂಯುಕ್ತ ಆಶ್ರಯದಲ್ಲಿ ವೈಭವದಿಂದ ನೆರವೇರಿದ ಭಕ್ತಿ ಸಿದ್ಧಾಂತೋತ್ಸವ ಹಾಗೂ ರಾಮೋತ್ಸವದ ಧರ್ಮಸಭೆಯಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ನಿಯೋಜಿತ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ವಿದ್ವಾನ್ ಡಾ ಎಲ್ ಸುಬ್ರಹ್ಮಣ್ಯಂ ಅವರಿಗೆ ಸಂಗೀತ ಕಲಾವಾರಿಧಿ ಬಿರುದಿನೊಂದಿಗೆ ಸನ್ಮಾನಿಸಲಾಯಿತು.

ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ ಶ್ರೀನಿವಾಸ ವರಖೇಡಿ , ಪೂರ್ಣಪ್ರಜ್ಞ ಸಂಶೋಧನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾ. ಆನಂದ ತೀರ್ಥ ನಾಗಸಂಪಿಗೆ, ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಮುಖ್ಯಸ್ಥ ಪಗಡಾಲ ಆನಂದ ತೀರ್ಥಾಚಾರ್ಯ‌, ಮಹಾಮಹೋಪಾಧ್ಯಾಯ ವಿದ್ವಾನ್ ಅದ್ಯಪಾಡಿ ಹರಿದಾಸ ಭಟ್ ಅವರಿಗೆ ಶ್ರೀ ವಿಶ್ವೇಶತೀರ್ಥಾನುಗ್ರಹ ಪ್ರಶಸ್ತಿ ಹಾಗೂ ಡಾ ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ಶ್ರೀ ರಾಮವಿಠಲಾನುಗ್ರಹ ಪ್ರಶಸ್ತಿಯನ್ನಿತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹಿಸಿದರು .

ಹಿರಿಯ ಯಕ್ಷಗಾನ ಕಲಾವಿದ ಕೆ ಗೋವಿಂದ ಭಟ್, ಉದ್ಯಮಿ ಡಾ.ಜಿ.ಶಂಕರ್, ಆದರ್ಶ ಆಸ್ಪತ್ರೆ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಚಿತ್ರಕಲಾವಿದ ಪಿ.ಎನ್.ಆಚಾರ್ಯ‌ ಅವರಿಗೆ ರಾಮೋತ್ಸವ ಪುರಸ್ಕಾರ, ಆಳ್ವಾಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ, ಕಟೀಲು ದೇವಳದ ಆನುವಂಶಿಕ ಅರ್ಚಕರಾದ ವಾಸುದೇವ ಆಸ್ರಣ್ಣ, ಹಿರಿಯ ಜ್ಯೋತಿಷಿ ಪಾವಂಜೆ ಕೃಷ್ಣ ಭಟ್, ಪಾಜಕ ಮಧ್ವ ಮಠದ ವ್ಯವಸ್ಥಾಪಕ ಮಾಧವ ಉಪಾಧ್ಯಾಯರು, ವಿಶ್ವ ಹಿಂದು ಪರಿಷತ್ ಮಾಜಿ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಮೂಡಬಿದಿರೆ ಅಲಂಗಾರು ಮಹಾಲಿಂಗೇಶ್ವರ ದೇವಳದ ಆನುವಂಶಿಕ ಅರ್ಚಕ ಆಡಳಿತ ಮೊಕ್ತೇಸರ ಈಶ್ವರ ಭಟ್, ಕುಡುಪು ಅನಂತಪದ್ಮನಾಭ ದೇವಸ್ಥಾನದ ಆನುವಂಶಿಕ ಅರ್ಚಕ ಕುಡುಪು ನರಸಿಂಹ ಭಟ್, ಪ್ರಸಿದ್ಧ ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ, ಉದ್ಯಮಿ ಮೂಡಬಿದಿರೆ ಅನಂತ ಕೃಷ್ಣ ರಾವ್ , ಹುಲಿಕೋಲದ ದೈವ ನರ್ತಕ ಗುಡ್ಡ ಪಾಣಾರ, ಪುತ್ತೂರು ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಸೇಸಪ್ಪ ರೈ ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್, ಭೌತಶಾಸ್ತ್ರಜ್ಞ ಡಾ.ಎ.ಪಿ. ಭಟ್, ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪ್ರೊ ಶಂಕರ್, ಪಾಕತಜ್ಞ ಕೊಡಂಗಳ ವಾಸುದೇವ ಭಟ್, ಹಡಿಲು ಭೂಮಿ ಕೃಷಿ ಸಾಧಕ ಮುಕುಂದ ಭಟ್ ಕುಂಜಾರುಗಿರಿ, ವಿದ್ಯೋದಯ ಟ್ರಸ್ಟ್ ಅಧ್ಯಕ್ಷ ನಾಗರಾಜ ಬಲ್ಲಾಳ್, ಖಜಾಂಚಿ ಪದ್ಮರಾಜ ಆಚಾರ್ಯ, ಬೆಂಗಳೂರಿನ ಉದ್ಯಮಿ ರಾಮ್ ಪ್ರಸಾದ್, ಪೇಜಾವರ ಮಠದ ದಿವಾನರಾದ ಎಂ. ರಘುರಾಮಾಚಾರ್ಯ, ಶ್ರೀ ಕೃಷ್ಣಬಾಲನಿಕೇತನದ ಉಪಾಧ್ಯಕ್ಷ ಪ್ರೊ.ಕೆ.ಕಮಲಾಕ್ಷ, ಅಖಿಲ ಭಾರತ ಮಾಧ್ವಮಹಾಂಮಡಲದ ಅಧ್ಯಕ್ಷ ಎಚ್.ವಿ. ಗೌತಮ್ ಕಾರ್ಯದರ್ಶಿ ಕೆ.ರಾಮಚಂದ್ರ ಉಪಾಧ್ಯಾಯ ಇವರುಗಳಿಗೆ ಶ್ರೀ ರಾಮವಿಠಲಾನುಗ್ರಹ ಪ್ರಶಸ್ತಿಯನ್ನು ಶ್ರೀಗಳು ಪ್ರದಾನಿಸಿ ಆಶೀರ್ವದಿಸಿದರು .‌ಸಮ್ಮೇಳನಾಧ್ಯಕ್ಷರಾದ ವಿದ್ವಾನ್ ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯ , ಉದ್ಯಮಿ ಕೆ. ರಾಮ‌ಪ್ರಸಾದ ಭಟ್ ಚೆನ್ನೈ, ವಿದ್ವಾನ್ ಪೆರಣಂಕಿಲ ಹರಿದಾಸ ಭಟ್ಟರನ್ನೂ ಶ್ರೀಗಳು ಸಂಮಾನಿಸಿದರು.ಸಮ್ಮೇಳನ‌ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯರನ್ನೂ ಸತ್ಕರಿಸಲಾಯಿತು .ವಿದ್ವಾನ್ ನಂದಳಿಕೆ ವಿಠಲ ಭಟ್, ಪೊಸ್ರಾಲು ಬಾಲಕೃಷ್ಣ ಭಟ್, ಡಾ ಆನಂದ ತೀರ್ಥ ಉಪಾಧ್ಯಾಯ ಸಗ್ರಿ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ವಿದ್ವಾನ್ ಸಗ್ರಿ ಅನಂತ ಸಾಮಗ, ವಿ. ಶಶಾಂಕ ಭಟ್, ಪೆರಂಪಳ್ಳಿ ವಾಸುದೇವ ಭಟ್, ಪಿ. ಶ್ರೀಶ ನಾಯಕ್, ಕೆ.ವಿಷ್ಣುಮೂರ್ತಿ ಆಚಾರ್ಯ, ವಿದ್ವಾನ್ ಗೋಪಾಲ ಜೋಯಿಸ್ ಮೊದಲಾದವರು ಸಹಕರಿಸಿದರು .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ
ಅಕ್ರಮ ಬಾಂಗ್ಲಾದೇಶಿಯರ ಪತ್ತೆಗೆ ರಾಜ್ಯಾದ್ಯಂತ ಬೇಟೆ