ಡಾ.ಪ್ರಭಾಕರ ಕೋರೆ ಸೊಸೈಟಿಗೆ ₹25.30 ಕೋಟಿ ಲಾಭ

KannadaprabhaNewsNetwork | Published : Apr 18, 2025 12:35 AM

ಸಾರಾಂಶ

ಅಂಕಲಿ ಗ್ರಾಮದ ಡಾ.ಪ್ರಭಾಕರ ಕೋರೆ ಕೋ-ಆಫ್ ಕ್ರೆಡಿಟ್‌ ಸೊಸೈಟಿ (ಬಹುರಾಜ್ಯ)ಯು ₹25.30 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಾಹಾಂತೇಶ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಅಂಕಲಿ ಗ್ರಾಮದ ಡಾ.ಪ್ರಭಾಕರ ಕೋರೆ ಕೋ-ಆಫ್ ಕ್ರೆಡಿಟ್‌ ಸೊಸೈಟಿ (ಬಹುರಾಜ್ಯ)ಯು ₹25.30 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಾಹಾಂತೇಶ ಪಾಟೀಲ ಹೇಳಿದರು.

ಸಹಕಾರಿಯ ಸಭಾಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 55 ಶಾಖೆಗಳನ್ನು ಹೊಂದಿರುವ ಸಹಕಾರಿಯು ಆರ್ಥಿಕ ವರ್ಷದಲ್ಲಿ ಶೇ.92 ರಷ್ಟು ಸಾಲ ವಸೂಲಾತಿ ಮಾಡಿದೆ ಎಂದರು.ಸಂಸ್ಥಾಪಕ ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನ ಹಾಗೂ ಅಮೀತ ಕೋರೆ, ಪ್ರೀತಿ ದೊಡವಾಡ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಗ್ರಾಮೀಣ ಭಾಗದ ಶಾಖೆಗಳಿಂದ ರೈತಾಪಿ ವರ್ಗದವರಿಗೆ ತನ್ನ ಅಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸೇವೆಗಳನ್ನು ನೀಡುತ್ತಿದ್ದು, ವರ್ಷಾಂತ್ಯಕ್ಕೆ 97,727 ಸದಸ್ಯರನ್ನು ಹೊಂದಿದೆ. ₹4 ಕೋಟಿಗೂ ಮಿಕ್ಕಿ ಶೇರು ಬಂಡವಾಳ ಹೊಂದಿ ₹141 ಕೋಟಿಗೂ ಮಿಕ್ಕಿ ನಿಧಿಗಳನ್ನು ಸಂಗ್ರಹಿಸಿ ₹1511 ಕೋಟಿಗೂ ಮಿಕ್ಕಿ ಠೇವು ಸಂಗ್ರಹಿಸಿರುತ್ತದೆ. ₹1,064 ಕೋಟಿಗೂ ಅಧಿಕ ಸಾಲ ವಿತರಿಸಿರುತ್ತದೆ. ₹580 ಕೋಟಿಗೂ ಮಿಕ್ಕಿ ಗುಂತಾವಣಿಗಳನ್ನು ಹೊಂದಿರುತ್ತದೆ. ₹1657 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ ₹22,076 ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ಮಾಡಿದೆ ಎಂದು ತಿಳಿಸಿದರು.ಸಂಸ್ಥೆಯು ₹25 ಕೋಟಿಗಳ ಮೌಲ್ಯದ 8 ಸ್ವಂತ ಕಟ್ಟಡಗಳನ್ನು ಹೊಂದಿರುತ್ತದೆ. ಸಾರ್ವಜನಿಕ ವಲಯದ ರಾಷ್ಟ್ರಿಕೃತ ಬ್ಯಾಂಕುಗಳ ಸಾಲ ಮತ್ತು ಠೇವಣಿಗಳ ಬಡ್ಡಿದರಗಳಿಗೆ ಸ್ಪರ್ದಾತ್ಮಕ ರೀತಿಯಲ್ಲಿ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಸಂಸ್ಥೆಯು ಅಳವಡಿಸಿಕೊಂಡಿರುತ್ತದೆ. ಸುಮಾರು 200 ಪವರ್ ಕಾರ್ಟಗಳಿಗೆ, 5 ಬೃಹತ ಕಬ್ಬು ಕಟಾವು ಯಂತ್ರಗಳಿಗೆ, ಶಾಲಾ ಬಸ್ಸು ಮತ್ತು ನಾಲ್ಕು ಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ವಾಹನಸಾಲ, ಸದಸ್ಯರ ಅನೂಕುಲಕ್ಕಾಗಿ ಗೃಹ ಸಾಲ, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸುಮಾರು 1200 ಎಕರೆ ಭೂಮಿಗೆ 900 ಫಲಾನುಭವಿ ರೈತ ಸದಸ್ಯರಿಗೆ ಏತ ನೀರಾವರಿ ಸಾಲ ನೀಡಿದ್ದೇವೆ. ಅದೆ ರೀತಿ ಬಂಗಾರ ಸಾಲವನ್ನು ತ್ವರಿತವಾಗಿ ಅತಿ ಕಡಿಮೆ ಬಡ್ಡಿದರದಲ್ಲಿ ವಿತರಿಸುತ್ತಿದ್ದೇವೆ. ಸಂಸ್ಥೆಯು ತನ್ನ ಸದಸ್ಯ ಬಾಂಧವರಿಗೆ ಸೇಫ್ ಲಾಕರ್ ವ್ಯವಸ್ಥೆ, ಮೊಬೈಲ್‌ ರಿಚಾರ್ಜ್‌, ಪ್ಯಾನ್‌ಕಾರ್ಡ್‌, ಪಾಸ್‌ಪೊರ್ಟ್, ಇ-ಸ್ಟ್ಯಾಂಪ್‌, ಆರ್‌ಟಿಸಿ (ಉತಾ), ಬಸ್ ರೈಲು ಹಗೂ ವಿಮಾನ ಟಿಕೆಟ ಕಾಯ್ದಿರುಸುವಿ, ಇತರೆ ಬ್ಯಾಂಕುಗಳ ಸಹಯೊಗದೊಂದಿಗೆ ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು ತಿಳಿಸಿದರು.ಸಂಸ್ಥೆಯು ತನ್ನ ಸಿಬ್ಬಂದಿ ವರ್ಗದವರಿಗೆ ಖಾಸಗಿ ಪಿಂಚಣಿ ಯೋಜನೆಯನ್ನು ಅಳವಡಿಸಿರುತ್ತದೆ. ಶೀಘ್ರದಲ್ಲಿ ಸಂಸ್ಥೆಯು ಮಾಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ 30ಕ್ಕೂ ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸಲಿದೆ ಹಾಗೂ ಬರುವ ದಿನಗಳಲ್ಲಿ ಕಾರ್ಯವ್ಯಾಪ್ತಿಯನ್ನು ಗೋವಾ ರಾಜ್ಯಕ್ಕೂ ವಿಸ್ತರಿಸಿಕೊಳ್ಳಲಿದೆ ಎಂದರು.ಸಂಸ್ಥೆಯ ಉಪಾಧ್ಯಕ್ಷ ಸಿದ್ದಗೌಡ ಮಗದುಮ, ನಿರ್ದೇಶಿಕಿಯಾದ ಪ್ರೀತಿ ದೊಡವಾಡ, ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ, ಅಣ್ಣಾಸಾಬ ಸಂಕೇಶ್ವರಿ, ಬಸನಗೌಡ ಆಸಂಗಿ, ಸುಕುಮಾರ ಚೌಗಲೆ, ಪಿಂಟು ಹಿರೇಕುರಬರ, ಅಮಿತ್‌ ಜಾಧವ, ಪ್ರಫುಲ ಶೆಟ್ಟಿ, ಅಶೋಕ ಚೌಗಲಾ, ಬಾಳಪ್ಪ ಉಮರಾಣೆ, ಅನೀಲ ಪಾಟೀಲ, ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಮತ್ತು ವ್ಯವಸ್ಥಾಪಕ ನಿರ್ದೇಶಕ ದೇವೆಂದ್ರ ಕರೋಶಿ ಉಪಸ್ಥಿತರಿದ್ದರು.

Share this article