ಡಾ.ರವೀಂದ್ರ ಬೆಳ್ಳಿಗೆ ಅಪಾರ ಸೇವಾ ಬದ್ಧತೆ

KannadaprabhaNewsNetwork |  
Published : Aug 01, 2025, 02:15 AM IST
ಡಾ.ರವೀಂದ್ರ ಬೆಳ್ಳಿ ಸೇವಾನಿವೃತ್ತಿ: ರೈತರ ಬದುಕು ಬೆಳ್ಳಿ ಬೆಳಕು ಕಾರ್ಯಕ್ರಮ | Kannada Prabha

ಸಾರಾಂಶ

ಪ್ರತಿಯೊಬ್ಬ ನೌಕರ ಸರ್ಕಾರಿ ನೌಕರಿಗೆ ಸೇರಿದ ಮೇಲೆ ನಿವೃತ್ತಿಯಾಗಲೇಬೇಕು. ಆದರೆ ತಮ್ಮ ಸೇವಾ ಅವಧಿಯಲ್ಲಿ ಯಾವ ರೀತಿ ಕೆಲಸ ನಿರ್ವಹಿಸಿದ್ದೇವೆ ಎಂಬುದು ತುಂಬಾ ಮುಖ್ಯ

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿಯೊಬ್ಬ ನೌಕರ ಸರ್ಕಾರಿ ನೌಕರಿಗೆ ಸೇರಿದ ಮೇಲೆ ನಿವೃತ್ತಿಯಾಗಲೇಬೇಕು. ಆದರೆ ತಮ್ಮ ಸೇವಾ ಅವಧಿಯಲ್ಲಿ ಯಾವ ರೀತಿ ಕೆಲಸ ನಿರ್ವಹಿಸಿದ್ದೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕೃಷಿ ಮಹಾವಿದ್ಯಾಲಯದ ಸಹಾಯಕ ಸಹವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಸೇವಾ ನಿವೃತ್ತಿ ಸಂದರ್ಭದಲ್ಲಿ ಅವರ ಹಿತೈಷಿಗಳು ಮತ್ತು ರೈತರು ಒಡಗೂಡಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರೈತರ ಬದುಕು ಬೆಳ್ಳಿಯ ಬೆಳಕು ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣಿಗಳು ಜನರ ಒಲೈಕೆಗಾಗಿ, ಹಣಕೊಟ್ಟು, ಗಾಡಿಕೊಟ್ಟು ಜನರನ್ನು ಕರೆಸಿ ಕಾರ್ಯಕ್ರಮ ಮಾಡುತ್ತಾರೆ. ಆದರೆ ಬೆಳ್ಳಿಯವರು ಒಂದೇ ಸ್ಥಳದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿದ ಅವರ ರೈತ ಬಳಗವು ಸ್ವಂತ ಖರ್ಚಿನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿ ಅಭಿನಂದನಾ ಕಾರ್ಯಕ್ರಮ ನೋಡಿದರೆ ಅವರ ಸೇವಾ ಬದ್ಧತೆ, ಕಾರ್ಯತತ್ಪರತೆ ತೋರಿಸಿಕೊಟ್ಟಂತಾಗುತ್ತದೆ ಎಂದರು.

ಬಾಗಲಕೋಟ ತೋಟಗಾರಿಕೆ ವಿವಿ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, ಡಾ.ಬೆಳ್ಳಿ ರೈತ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಬದುಕಿದವರು. ಅವರ ಅವಧಿಯಲ್ಲಿ ಹಲವಾರು ಲೇಖನಗಳನ್ನು ರೈತರಿಗಾಗಿ ಬರೆದಿದ್ದಾರೆ. ಅನೇಕ ತರಬೇತಿಗಳನ್ನು ರೈತರಿಗಾಗಿ ಆಯೋಜಿಸಿದ್ದಾರೆ. ಒಟ್ಟಾರೆ ಅವರದು ಸಾರ್ಥಕ ಬದುಕು ಎಂದು ಬಣ್ಣಿಸಿದರು.

ಧಾರವಾಡ ಕೃಷಿ ವಿವಿ ವಿಶ್ರಾಂತಿ ಕುಲಪತಿ ಡಾ.ವ್ಹಿ.ಐ.ಬಣಗಿ ಮಾತನಾಡಿ, ಡಾ.ಬೆಳ್ಳಿಯವರು ವಿವಿಯ ತಾಂತ್ರಿಕತೆಗಳನ್ನು ವಿವಿಧ ಮಾಧ್ಯಮಗಳ ಪ್ರಾತ್ಯಕ್ಷಕ್ಕೆ ಕ್ಷೇತ್ರೋತ್ಸವ ಮೂಲಕ ಪರಿಣಾಮಕಾರಿ ಅನುಷ್ಠಾನಗೊಳಿಸಿ ರೈತರ ಆರ್ಥಿಕಾಭಿವೃದ್ಧಿಗೆ ಶ್ರಮಿಸಿದರು. ನಾನು ಕುಲಪತಿಯಾಗಿದ್ದಾಗ ಅವರ ಸೇವೆ ಗಮನಿಸಿ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿರುವು ನನ್ನ ಹೆಮ್ಮೆ ಎಂದರು.

ಅಧ್ಯಕ್ಷತೆ ವಹಿಸಿದ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ ಮಾತನಾಡಿ, ಡಾ.ಬೆಳ್ಳಿಯವರು ಸದಾ ಕ್ರೀಯಾಶೀಲರು, ರೈತರಿಗೆ ಅನುಕೂಲವಾಗುವಂತೆ ತರಬೇತಿ, ಕೃಷಿ ತಂತ್ರಜ್ಞಾನ ಮಾಹಿತಿಗಳನ್ನು ರೈತರಿಗೆ ತಿಳಿ ಹೇಳಿ ರೈತರ ಆದಾಯ ದ್ವಿಗುಣವಾಗುವಂತೆ ಮಾಡಬೇಕು. ಬೆಳ್ಳಿಯ ಅವರ ಬದುಕು ನಿವೃತ್ತಿ ನಂತರವೂ ರೈತ ಪರವಾಗಿ ಮುಂದುವರಿಯಲಿ ಎಂದು ಶುಭಹಾರೈಸಿದರು.

ಈ ಸಂಧರ್ಭದಲ್ಲಿ ಬೆಳಗಾವಿಯ ಅಮ್ಮ ಪ್ರತಿಷ್ಠಾನದ ಅಧ್ಯಕ್ಷ ಬಾಳಾಸಾಹೇಬ ಊದಗಟ್ಟಿ ಇವರು ಜೀವಮಾನ ಸಾಧನೆಗಾಗಿ ರೈತ ರತ್ನ ಪ್ರಶಸ್ತಿ ನೀಡಿ ಬೆಳ್ಳಿಯವರನ್ನು ಗೌರವಿಸಿದರು. ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ, ಡೀನ್ ಡಾ.ಅಶೋಕ ಸಜ್ಜನ, ಜಂಟಿ ಕೃಷಿ ನಿರ್ದೇಶಕರಾದ ಡಾ.ಬಿ.ಮಂಜುನಾಥ, ಶಿವನಗೌಡ ಪಾಟೀಲ, ಪ್ರದೀಪ ದೊಡ್ಡವಾಡ, ಮಂಜುಳಾ ಯಡೂರ, ಶಿವಪ್ರಕಾಶ ಬಿರಾದಾರ, ಗರೀಶ ಕುಲಕರ್ಣಿ ರೈತ ಸಂಘದ ಅಧ್ಯಕ್ಷ ಸಂಗಮೇಶ ಸಗರ, ಬಸವರಾಜ ತಮದಡ್ಡಿ, ಡಾ.ಎಸ್.ಎಂ. ವಸ್ತ್ರದ, ಡಾ.ಶಿವಶಂಕರಮೂರ್ತಿ, ಡಾ. ಆರ್.ಕೆ.ರಾಮಚಂದ್ರ ಸೇರಿದಂತೆ ಅನೇಕ ಪ್ರಗತಿಪರ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ