ಕನ್ನಡಪ್ರಭ ವಾರ್ತೆ ಮೈಸೂರು
ವಿವಿಧ ವಯಸ್ಸಿನ ಗುಂಪುಗಳ ಮಕ್ಕಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ನಿರ್ದೇಶಕ ಡಾ. ಎಸ್. ಗಾಂಧಿ ದಾಸ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಸ್ತುತ ದಿನಗಳಲ್ಲಿ ಪರಿಸರದ ಮಹತ್ವ ಕುರಿತ ವಿವರಿಸಿದರು. ಮಾಲಿನ್ಯದಿಂದ ಮನು ಕುಲದ ಮೇಲಾಗುವ ದುಷ್ಪರಿಣಾಮಗಳನ್ನು ಕುರಿತು ಮಾತನಾಡಿದರು. ಇಂದಿನ ಯುವ ಪಿಳಿಗೆಯವರಾದ ನೀವು ಮತ್ತು ನಾವು ಪರಿಸರವನ್ನು ರಕ್ಷಿಸುವುದು ಮತ್ತು ಉಳಿಸುವುದು ಅತ್ಯಂತ ಅವಶ್ಯಕವಾಗಿದೆ. ಪರಿಸರ ಮಾಲಿನ್ಯದ ತಡೆಗಟ್ಟುವ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು ಮತ್ತು ಅದರ ಅನಿವಾರ್ಯವದ ಬಗ್ಗೆ ತಿಳುವಳಿಕೆ ನೀಡಿದರು.ಹಿರಿಯ ವಿಜ್ಞಾನಿ ಡಾ.ಕೆ.ಬಿ, ಚಂದ್ರಶೇಖರ್ ಮಾತನಾಡಿ, ಪರಿಸರ ಮಾಲಿನ್ಯ ತಡೆಗಟ್ಟಲು ಘನತ್ಯಾಜ್ಯ ನಿರ್ವಹಣೆಯ ಕುರಿತು, ಕಡಿಮೆ ಬಳಕೆ, ಪುನರ್ ಬಳಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಮುಂದುವರೆದು, ಮಕ್ಕಳು ತಮ್ಮ ಹೆಸರಲ್ಲಿ ಗಿಡ ನೆಟ್ಟು ಅದನ್ನು ಹಾರೈಕೆ ಮಾಡುವಂತೆ ಕೋರಿದರು. ಗಿಡಗಳ ವ್ಯವಸ್ಥೆಯನ್ನು ಸಂಸ್ಥೆಯು ಮಾಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡ ನೆಟ್ಟು ರಕ್ಷಿಸುವಂತೆ ಸಲಹೆ ನೀಡಿದರು.
ಡಾ. ಚಂದ್ರಕಾಂತ್, ಡಾ.ಟಿ. ಗಾಯತ್ರಿ, ಡಾ. ರಂಜಿನಿ, ಡಾ. ಭುವನೇಶ್ವರಿ, ಡಾ. ಮಲ್ಲಿಕಾರ್ಜುನ ಭಾಗವಹಿಸಿದ್ದರು. ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿಜ್ಞಾನಿಗಳು, ಅಧಿಕಾರಿಗಳು ಇದ್ದರು.