ಡಾ. ಸಂಗಮೇಶ ಬಿಜೆಪಿ ಬಿ ಟೀಂ ಲೀಡರ್‌: ಪ್ರವೀಣ ಯಾವಗಲ್ಲ ಆರೋಪ

KannadaprabhaNewsNetwork |  
Published : Nov 07, 2025, 02:30 AM IST
(6ಎನ್.ಆರ್.ಡಿ5 ಸುದ್ದಿಗೋಷ್ಟಿಯಲ್ಲಿ ಪ್ರವೀಣ ಯಾವಗಲ್ ಮಾತನಾಡುತ್ತಿದ್ದಾರೆ.)   | Kannada Prabha

ಸಾರಾಂಶ

ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂಬ ವಿಷಬೀಜದ ಮಾತುಗಳು ಪಕ್ಷಕ್ಕೆ ಅಗೌರವ ತರುತ್ತಿದೆ. ಇಂತಹ ಉದ್ದಟತನದ ಮಾತುಗಳಿಗೆ ಕಾರ್ಯಕರ್ತರೇ ತಕ್ಕ ಪಾಠ ಕಲಿಸಲಿದ್ದಾರೆ.

ನರಗುಂದ: ನರಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕನೆಂದು ಸ್ವಯಂಘೋಷಣೆ ಮಾಡಿಕೊಂಡಿರುವ ಡಾ. ಸಂಗಮೇಶ ಕೊಳ್ಳಿ ಅವರು ಬಿಜೆಪಿ ಬಿ ಟೀಂನ ಲೀಡರ್‌ ಆಗಿದ್ದಾರೆ ಎಂದು ಕಾಂಗ್ರೆಸ್ ನರಗುಂದ ಬ್ಲಾಕ್ ಅಧ್ಯಕ್ಷ ಪ್ರವೀಣ ಯಾವಗಲ್ಲ ವ್ಯಂಗ್ಯವಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಆರ್. ಯಾವಗಲ್ಲ ಅವರಿಗೆ ಪಕ್ಷದ ಟಿಕೆಟ್‌ ಸಿಕ್ಕಿತ್ತು. ಆದರೆ ಟಿಕೆಟ್‌ ಸಿಗದ ಡಾ. ಸಂಗಮೇಶ ಕೊಳ್ಳಿ ಅವರು ಹತಾಶೆಗೊಂಡು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡಿದ್ದಾರೆಂದು ಆರೋಪಿಸಿದರು.

ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂಬ ವಿಷಬೀಜದ ಮಾತುಗಳು ಪಕ್ಷಕ್ಕೆ ಅಗೌರವ ತರುತ್ತಿದೆ. ಇಂತಹ ಉದ್ದಟತನದ ಮಾತುಗಳಿಗೆ ಕಾರ್ಯಕರ್ತರೇ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಬಿ ಟೀಂನಂತೆ ಕೆಲಸ ಮಾಡಿದ್ದನ್ನು ನೋಡಿದರೆ ಕೊಳ್ಳಿ ಅವರ ತಲೆ ಸರಿಯಿಲ್ಲ. ಅವರೊಬ್ಬ ವೈದ್ಯರಾಗಿದ್ದರೂ ಬೇರೆ ಒಳ್ಳೆಯ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲಿ ಎಂದು ಸಲಹೆ ನೀಡಿದರು.

ಯಾವಗಲ್ಲ ಕುಟುಂಬ: ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ಲ ಮಾತನಾಡಿ, ಡಾ. ಸಂಗಮೇಶ ಕೊಳ್ಳಿ ಅವರ ತಂದೆ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷದಿಂದ ಕೆಲಸ ಮಾಡಿದ್ದಾರೆ. ಅವರ ಕುಟುಂಬದ ಅನೇಕರು ಹಲವು ಹುದ್ದೆಗಳನ್ನು ಅನುಭವಿಸಿದ್ದಾರೆ. ಆದಾಗ್ಯೂ ಇವರು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದಾರೆ. ಇದು ಪಕ್ಷಕ್ಕೆ ಮಾಡಿದ ದ್ರೋಹವಲ್ಲವೇ? ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೆಪಿಸಿಸಿಗೆ ದೂರು ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ರಾಜು ಕಲಾಲ, ಕೆಸಿಸಿ ಬ್ಯಾಂಕ್‌ನ ನಿರ್ದೇಶಕ ಎಂ.ಎಸ್. ಪಾಟೀಲ, ಗುರುಪಾದಪ್ಪ ಕುರಹಟ್ಟಿ, ವೀರೇಶ ಚುಳಕಿ, ಯಲ್ಲಪ್ಪಗೌಡ ನಾಯ್ಕರ, ಜಗದೀಶ ಕಗದಾಳ, ಬಿ.ಎನ್. ಮಾನೆ, ಮುಧೋಳೆ, ಸುರೇಶ ಹುಡೇದ, ರವಿ ಯರಗಟ್ಟಿ, ಉದಯ ವೀರನಗೌಡ್ರ, ಶಂಕರ ಕಾಂಬಳೆ, ಪ್ರಕಾಶ ಹಡಗಲಿ, ವಿಷ್ಣು ಸಾಠೆ ಮುಂತಾದವರು ಇದ್ದರು.ನರಗುಂದದಲ್ಲಿ ಕಾಂಗ್ರೆಸ್‌ ಕಚೇರಿಯನ್ನೂ ಸ್ಥಾಪಿಸದ ಯಾವಗಲ್ಲ: ಆರೋಪನರಗುಂದ: ಬಿ.ಆರ್. ಯಾವಗಲ್ಲ ಅವರು ಕಾಂಗ್ರೆಸ್ ಶಾಸಕರಾಗಿ ಹಲವು ವರ್ಷ ಅಧಿಕಾರ ಅನುಭವಿಸಿದ್ದರೂ ಅವರಿಗೆ ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಾಲಯ ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿ ಆರೋಪಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಜಿ ಶಾಸಕ ಯಾವಗಲ್ಲ ಅವರು ಈ ಭಾಗದ ಯುವಕರಿಗೆ ಉದ್ಯೋಗ, ವ್ಯಾಪಾರದ ದೃಷ್ಟಿಯಿಂದ ಮಲಪ್ರಭಾ ಆಯಿಲ್ ಮಿಲ್ ಸ್ಥಾಪನೆ ಮಾಡಿದ್ದರು. ಆದರೆ ಈ ಆಯಿಲ್ ಮಿಲ್‌ ಜನತೆಗೆ ಮಾತ್ರ ಉಪಯೋಗವಾಗಿಲ್ಲ. ಕೇವಲ ಯಾವಗಲ್ಲರ ಕುಟುಂಬದವರ ಸ್ವತ್ತಾಗಿದೆ ಎಂದರು.ಆಯಿಲ್ ಮಿಲ್‌ನಲ್ಲಿ ಬಿ.ಆರ್. ಯಾವಗಲ್ಲ ಅವರು ಮನೆ, ಶಾಲೆ ನಿರ್ಮಿಸಿ ತಮ್ಮ ಸ್ವಾರ್ಥಕ್ಕೆ ಬಳಸಿದ್ದಾರೆ. ಈ ಮಿಲ್ ಸ್ಥಾಪನೆಯಾಗಿ ಸುಮಾರು ವರ್ಷ ಕಳೆದರೂ ಷೇರುದಾರರಿಗೆ ಲಾಭಾಂಶ ನೀಡಿಲ್ಲ. ನ. 16ರಂದು ಮಿಲ್ ಷೇರುದಾರರ ಸಭೆ ಕರೆಯಲಾಗಿದೆ. ಸಭೆಗೆ ಎಲ್ಲ ಷೇರುದಾರರು ಆಗಮಿಸಿ ಲಾಭಾಂಶ ಪಡೆದುಕೊಳ್ಳಲು ಚರ್ಚೆ ಮಾಡಬೇಕೆಂದು ತಿಳಿಸಿದರು.

ಯಾವಗಲ್ಲ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಮುನ್ನ ತಮ್ಮ ಕುಟುಂಬದ ಬಗ್ಗೆ ಅರಿತುಕೊಳ್ಳಬೇಕು. ಮತಕ್ಷೇತ್ರದಲ್ಲಿ ಕಾಂಗ್ರೆಸ್ ಯಾವಗಲ್ಲ ಅವರ ಕುಟುಂಬವಾಗಿದ್ದರಿಂದ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಪಕ್ಷ ತ್ಯಜಿಸುತ್ತಿದ್ದಾರೆ ಎಂದು ಆರೋಪಿಸಿದರು.ವಿಠಲ ಶಿಂದೆ, ಬಿ.ಟಿ. ಪಾಟೀಲ, ಬಸವರಡ್ಡಿ ರಾಯರಡ್ಡಿ, ಎಂ.ಬಿ. ಮೆಣಸಿಗಿ, ವಿನಯಕುಮಾರ ಪಾಟೀಲ, ಚನ್ನಪ್ಪ ಕೀಲಿಕೈ, ಗುರುಲಿಂಗಪ್ಪ ಫಡ್ಡವೀರ, ಸಮೀರ, ಬಸನಗೌಡ ಕರಿಗೌಡ್ರ, ಈರಣ್ಣ ಅಂಗಡಿ, ಯಲ್ಲಪ್ಪ ಯಲಿಗಾರ, ಪ್ರವೀಣ ಮ್ಯಾಗೇರಿ, ರಾಮಣ್ಣ ಮೊರಬದ, ಸೇರಿದಂತೆ ಮುಂತಾದವರು ಇದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ