ಡಾ. ಶ್ರೀನಿವಾಸ ಪಾಡಿಗಾರಗೆ ಶಾಸನತಜ್ಞ ರಾಷ್ಟ್ರೀಯ ಪ್ರಶಸ್ತಿ

KannadaprabhaNewsNetwork |  
Published : Jul 21, 2025, 12:00 AM IST
20ಡಿಡಬ್ಲೂಡಿ5 | Kannada Prabha

ಸಾರಾಂಶ

ಭಾರತ ಸರ್ಕಾರದ ಪ್ರಥಮ ಭಾರತೀಯ ಪ್ರಧಾನ ಶಾಸನತಜ್ಞರಾಗಿದ್ದ ರಾವ್‌ ಬಹಾದ್ದೂರ ವಿ. ವೆಂಕಯ್ಯ ಅವರ ಹೆಸರಿನಲ್ಲಿ ಅವರ ಮರಿಮೊಮ್ಮಗಳು ಸುನೀತಾ ಮಾಧವನ್‌ ಚೆನ್ನೈನ ತಮಿಳು ಹೆರಿಟೇಜ್‌ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಯನ್ನು ಶಾಸನ ಶೋಧನೆ, ಹೊಸ ದೃಷ್ಟಿಕೋನಗಳಿಂದ ಶಾಸನಗಳ ಪರಾಮರ್ಶೆ, ಶಾಸನಗಳಲ್ಲಿರುವ ವಿಶಿಷ್ಟ ಮಾಹಿತಿಗಳ ಪ್ರಕಾಶನ ಮುಂತಾದವುಗಳಿಗೆ ಅಸಾಧಾರಣ ಕೊಡುಗೆ ನೀಡಿರುವ ಹಿರಿಯ ವಿದ್ವಾಂಸನಿಗೆ ಈ ಗೌರವ ಪ್ರಶಸ್ತಿ ಕೊಡಲಾಗುತ್ತದೆ.

ಧಾರವಾಡ: ಪ್ರತಿಷ್ಠಿತ ರಾವ್‌ ಬಹಾದ್ದೂರ ವಿ. ವೆಂಕಯ್ಯ ಶಾಸನತಜ್ಞ ರಾಷ್ಟ್ರೀಯ ಪ್ರಶಸ್ತಿ - 2025 ಇಲ್ಲಿಯ ಇತಿಹಾಸ ಮತ್ತು ಶಾಸನಶಾಸ್ತ್ರಜ್ಞ ಡಾ. ಶ್ರೀನಿವಾಸ ವಿ. ಪಾಡಿಗಾರ ಆಯ್ಕೆಯಾಗಿದ್ದು, ಜು. 26ರಂದು ಚೆನ್ನೈನ ಮೈಲಾಪುರದಲ್ಲಿರುವ ಆರ್‌.ಕೆ. ಕನವೆನ್ಶನ್‌ ಸೆಂಟರ್‌ನಲ್ಲಿ ಪ್ರದಾನ ಮಾಡಲಾಗುತ್ತಿದೆ.

ಭಾರತ ಸರ್ಕಾರದ ಪ್ರಥಮ ಭಾರತೀಯ ಪ್ರಧಾನ ಶಾಸನತಜ್ಞರಾಗಿದ್ದ ರಾವ್‌ ಬಹಾದ್ದೂರ ವಿ. ವೆಂಕಯ್ಯ ಅವರ ಹೆಸರಿನಲ್ಲಿ ಅವರ ಮರಿಮೊಮ್ಮಗಳು ಸುನೀತಾ ಮಾಧವನ್‌ ಚೆನ್ನೈನ ತಮಿಳು ಹೆರಿಟೇಜ್‌ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಯನ್ನು ಶಾಸನ ಶೋಧನೆ, ಹೊಸ ದೃಷ್ಟಿಕೋನಗಳಿಂದ ಶಾಸನಗಳ ಪರಾಮರ್ಶೆ, ಶಾಸನಗಳಲ್ಲಿರುವ ವಿಶಿಷ್ಟ ಮಾಹಿತಿಗಳ ಪ್ರಕಾಶನ ಮುಂತಾದವುಗಳಿಗೆ ಅಸಾಧಾರಣ ಕೊಡುಗೆ ನೀಡಿರುವ ಹಿರಿಯ ವಿದ್ವಾಂಸನಿಗೆ ಈ ಗೌರವ ಪ್ರಶಸ್ತಿ ಕೊಡಲಾಗುತ್ತದೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀನಿವಾಸ ವಿ. ಪಾಡಿಗಾರ ಅವರು ಶಾಸನ ಸಂಪಾದನೆಯನ್ನೂ ಒಳಗೊಂಡಂತೆ, ಕಲಾ ಇತಿಹಾಸ, ಪುರಾತತ್ವ, ನಾಣ್ಯಶಾಸ್ತ್ರ, ಮತ್ತು ಧಾರ್ಮಿಕ ಇತಿಹಾಸ ವಿಷಯಗಳ ಕುರಿತು ಅಂತರಶಾಸ್ತ್ರೀಯ ಅಧ್ಯಯನಗಳಿಗೆ ನೀಡಿರುವ ಮಹತ್ವದ ಕೊಡುಗೆಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಡಾ. ಶ್ರೀನಿವಾಸ ಪಾಡಿಗಾರ ಪ್ರಶಸ್ತಿ ಸ್ವೀಕರಿಸಿ ʼಚಾಲುಕ್ಯರ ಶಾಸನಗಳ ಒಳನೋಟಗಳುʼ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ