ಡಾ.ಸೂರ್ಯಕುಮಾರ್‌ ಅವರ ಮಂಗಳಿ ಕೃತಿಗೆ ಪ್ರಶಸ್ತಿ

KannadaprabhaNewsNetwork |  
Published : Aug 01, 2025, 12:30 AM IST
ಚಿತ್ರ : ಸೂರ್ಯಕುಮಾರ್ | Kannada Prabha

ಸಾರಾಂಶ

ಮಡಿಕೇರಿ ಹಿರಿಯ ವೈದ್ಯ ಸಾಹಿತಿ ಡಾ. ಕೆ.ಬಿ. ಸೂರ್ಯಕುಮಾರ್‌ ಅವರ ಮಂಗಳಿ ಕೃತಿಗೆ ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಅತ್ಯುತ್ತಮ ಕೃತಿ ಪ್ರಶಸ್ತಿ ದೊರಕಿದೆ.

ಮಡಿಕೇರಿ: ಮಡಿಕೇರಿಯ ಹಿರಿಯ ವೈದ್ಯ ಸಾಹಿತಿ ಡಾ.ಕೆ.ಬಿ. ಸೂರ್ಯಕುಮಾರ್ ಅವರ ಮಂಗಳಿ ಕೃತಿಗೆ ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಅತ್ಯುತ್ತಮ ಕೃತಿ ಪ್ರಶಸ್ತಿ ದೊರಕಿದೆ.ಡಾ. ಇಂದಿರಾ ದೊಡ್ಡಬಳ್ಳಾಪುರ ಅವರು ನೀಡಿರುವ ಪ್ರಶಸ್ತಿಯು ಸೂರ್ಯಕುಮಾರ್ ಅವರು ಬರೆದಿರುವ ಮಂಗಳಮುಖಿಯರ ಜೀವನ ಶೈಲಿಯ ನಿರೂಪಣೆ ಇರುವ ಮಂಗಳಿ ಕೃತಿಗೆ ಸಂದಿದೆ.

ಪ್ರಶಸ್ತಿ ಪ್ರಧಾನ ಸಮಾರಂಭವು ಆ. 24 ರಂದು ಬಳ್ಳಾರಿಯಲ್ಲಿ ಆಯೋಜಿತವಾಗಿದೆ. ಈವರೆಗೂ ಡಾ. ಸೂರ್ಯಕುಮಾರ್ ಅವರು ಕನ್ನಡದಲ್ಲಿ ಏಳು ಮತ್ತು ಇಂಗ್ಲೀಷ್ ನಲ್ಲಿ ಒಂದು ಕೃತಿಗಳನ್ನು ಪ್ರಕಟಿಸಿದ್ದಾರೆ.

---------------------------------------

ಕಿಶೋರ ಕನಕ ಕಾವ್ಯ ಸ್ಪರ್ಧೆ

ಮಡಿಕೇರಿ : ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಪ್ರಸಕ್ತ ಸಾಲಿನಿಂದ ಕಿಶೋರ ಕನಕ ಕಾವ್ಯ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ.ಕನಕದಾಸರ ಕಾವ್ಯಗಳನ್ನು ಮಾತ್ರ ಗಮಕ ವಾಚನಕ್ಕೆ ಪರಿಗಣಿಸಲಾಗುವುದು. 10 ರಿಂದ 15 ವರ್ಷ ವಯೋಮಾನದ ಕಿಶೋರ ಪ್ರತಿಭೆಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶ, ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಥಮ ಬಹುಮಾನ 20 ಸಾವಿರ ರು., ದ್ವಿತೀಯ ಬಹುಮಾನ 15 ಸಾವಿರ ರು., ತೃತೀಯ ಬಹುಮಾನ 10 ಸಾವಿರ ರು. ಮತ್ತು ಇಬ್ಬರಿಗೆ ಸಮಾಧಾನಕರ ಬಹುಮಾನ (ತಲಾ ರೂ.5,000 ದಂತೆ)ಇರುತ್ತವೆ. ಪ್ರತ್ಯೇಕ ಸಮಾರಂಭವೊಂದರಲ್ಲಿ ಬಹುಮಾನ ವಿತರಿಸಲಾಗುವುದು.

ಕಿಶೋರ ಪ್ರತಿಭೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅಧ್ಯಯನ ಕೇಂದ್ರದ ಜಾಲತಾಣ https://kanakadasaresearcheenter.karnataka.gov.in/ ರಲ್ಲಿ ಅರ್ಜಿಗಳನ್ನು ಡೌನಲೋಡ್ ಮಾಡಿಕೊಂಡು ಪೂರ್ಣ ಮಾಹಿತಿಯೊನ್ನೊಳಗೊಂಡ ಅರ್ಜಿಗಳನ್ನು ಭರ್ತಿಮಾಡಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ಗೆ ಅಥವಾ ಇ-ಮೇಲ್ kanakaresearchcentre@gmail.com ಮೂಲಕ 2025ರ ಸೆಪ್ಟೆಂಬರ್, 20ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ 6364529319ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ