ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಯುವ ಬ್ರಿಗೇಡ್ ಪದಾಧಿಕಾರಿಗಳು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಸಿದ್ದರಾಮಯ್ಯ ಅವರ ಬೃಹತ್ ಭಾವಚಿತ್ರ ಬಿಡಿಸಿ ಶುಭ ಕೋರಿದರು.ಸುಮಾರು 125 ಅಡಿ ಉದ್ದ ಹಾಗೂ 65 ಅಡಿ ಅಗಲದ ಸುಮಾರು 8 ಸಾವಿರ ಚದುರ ಅಡಿಯ ಸಿದ್ದರಾಮಯ್ಯ ಭಾವಚಿತ್ರವನ್ನು ಬಿಡಿಸಿ ಶುಭ ಕೋರಲಾಯಿತು. ಕರ್ನಾಟಕದ ಭೂಪಟದ ಮುಂದೆ ಸಿದ್ದರಾಮಯ್ಯ 17ನೇ ಬಜೆಟ್ ನ ಸೂಟ್ ಕೇಸ್ ಹಿಡಿದ ಭಂಗಿಯಲ್ಲಿ ಚಿತ್ರ ಬಿಡಿಸಲಾಗಿದೆ.ರಂಗೋಲಿ ಮತ್ತು ವಿವಿಧ ರೀತಿಯ ಬಣ್ಣ ಬಳಸಿ ಈ ಚಿತ್ರವನ್ನು ಬಿಡಿಸಲಾಗಿತ್ತು. ಸಿದ್ದರಾಮಯ್ಯ ಅವರು 17ನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಮುಂದೆಯೂ ಬಜೆಟ್ಮಂಡಿಸುವಂತಾಗಲಿ ಎಂದು ಅವರ ಅಭಿಮಾನಿಗಳು ಆಶಿಸಿದರು.ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮುಖಂಡರಾದ ಬಸಪ್ಪ, ಕಂಸಾಳೆ ರವಿ, ಸಂತೋಷ್ ಮಳಿಯೂರು, ಹೇಮಂತ್, ಕೆಂಪರಾಜು ಮೊದಲಾದವರು ಇದ್ದರು.