ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಜಾಕ್‌ವೆಲ್ ಮೋಟಾರ್‌ಗಳ ಅಳವಡಿಸುವ ಸಂಬಂಧ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಇದರಲ್ಲಿ ಹರಳೆ, ಸಿದ್ದಯ್ಯನಪುರ ಜಾಕ್‌ವೆಲ್‌ನಲ್ಲಿ 67 ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಹೊಸ ಮೋಟಾರ್ ಅಳವಡಿಕೆ ಹಾಗೂ 33 ಲಕ್ಷ ರು. ವೆಚ್ಚದಲ್ಲಿ ನೀರು ಶುದ್ಧೀಕರಣ ಯಂತ್ರಗಳ ಬದಲಾವಣೆ ಕಾಮಗಾರಿ ಸೇರಿದೆ ಎಂದರು.ಹನೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪ್ರಮುಖ ಮೂಲವಾದ ಹರಳೆ, ಸಿದ್ದಯ್ಯನಪುರ ಜಾಕ್‌ವೆಲ್‌ನಲ್ಲಿ ಹೊಸ ಮೋಟಾರ್ ಅಳವಡಿಕೆಯ ಕಾಮಗಾರಿ ಭರದಿಂದ ಸಾಗಿದ್ದು, ಈ ಕಾರಣದಿಂದಾಗಿ ಸದ್ಯಕ್ಕೆ ಹನೂರು ಪಟ್ಟಣಕ್ಕೆ ಕಾವೇರಿ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಕೊಳವೆಬಾವಿ ಹಾಗೂ ಟ್ಯಾಂಕರ್ ನೀರನ್ನು ಮಿತವಾಗಿ ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ 67 ಲಕ್ಷ ರು. ವೆಚ್ಚದಲ್ಲಿ ಹೊಸ ಮೋಟಾರ್ ಖರೀದಿಸಿ ಅಳವಡಿಸಲಾಗುತ್ತಿದೆ. ಈ ಮೋಟಾರ್ ಅಳವಡಿಕೆ ಕಾಮಗಾರಿ ಸೆ. 2 ರವರೆಗೆ ನಡೆಯಲಿದೆ. ಅಲ್ಲಿಯವರೆಗೆ ಪಟ್ಟಣದ ನಾಗರಿಕರು ಸಹಕರಿಸಬೇಕು, ಯಾವುದೇ ವಾರ್ಡ್‌ನಲ್ಲಿ ನೀರಿನ ಮೂಲ ಇಲ್ಲದಿದ್ದರೆ ಪಟ್ಟಣ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಪಡೆಯಬಹುದು ಎಂದರು.
ಕಾವೇರಿ ನದಿಯಿಂದ ಹರಳೆ ಜಾಕ್‌ವೆಲ್ ಮೂಲಕ ಸಿದ್ದಯ್ಯನಪುರಕ್ಕೆ ನೀರು ಪೂರೈಕೆಯಾಗಿ ಅಲ್ಲಿ ಶುದ್ಧೀಕರಿಸಿದ ನಂತರವೇ ಹನೂರು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹರಳೆ ಮತ್ತು ಸಿದ್ದಯ್ಯನಪುರ ಗ್ರಾಮಗಳಲ್ಲಿರುವ ಜಾಕ್‌ವೆಲ್ ಕಟ್ಟಡಗಳು ಹಳೆಯದಾಗಿದ್ದು, ಅವುಗಳನ್ನೂ ಸಹ ನವೀಕರಣ ಮಾಡಲಾಗುವುದು. ಹರಳೆ ಜಾಕ್‌ವೆಲ್‌ನಲ್ಲಿ ಹಗಲಿರುಳು ದುಡಿಯುವ ನೀರುಗಂಟಿಗಳ (ವಾಟರ್‌ಮೆನ್) ಅನುಕೂಲಕ್ಕಾಗಿ ವಸತಿಗೃಹಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ ಎಂದರು.