ಯಲಬುರ್ಗಾ: ಸಾರಿಗೆ ಇಲಾಖೆಯ ಬಸ್ ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿ ಸಾರಿಗೆ ನಿಗಮದ ಎರಡು ಕಣ್ಣುಗಳಿದ್ದಂತೆ. ರಸ್ತೆ ನಿಯಮ ಪಾಲಿಸುವುದರ ಮೂಲಕ ಜಾಗರೂಕತೆಯಿಂದ ವಾಹನ ಚಾಲಾಯಿಸಬೇಕು ಎಂದು ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಹೇಳಿದರು.
ಸಾರಿಗೆ ಬಸ್‌ಗಳ ತಾಂತ್ರಿಕತೆ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಿ, ಚಾಲಕ ಮತ್ತು ನಿರ್ವಾಹಕರು ಯಾವುದೇ ಆತಂಕಕ್ಕೆ ಒಳಗಾಗದೆ ವಾಹನ ಚಾಲನೆ ಮಾಡಬೇಕು. ಕಳೆದ ವರ್ಷದಲ್ಲಿ ಪಟ್ಟಣದ ಸಾರಿಗೆ ಘಟಕಕ್ಕೆ ಸಂಬಂಧಿಸಿದ ರಸ್ತೆ ಅಪಘಾತದಿಂದ ಯಾವುದೇ ವ್ಯಕ್ತಿಗಳು ಮೃತಪಟ್ಟಿಲ್ಲ ಎಂದರು.
ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಡೀಸೆಲ್ ಉಳಿಸಿದ ಚಾಲಕರಾದ ಕಲ್ಲೇಶ, ಕನಕಪ್ಪ, ಬಸವರಾಜ ಬಬಲಿ ಅವರಿಗೆ ಸನ್ಮಾನಿಸಲಾಯಿತು.ಸಾರಿಗೆ ಘಟಕದ ಉಸ್ತುವಾರಿ ಬಿ.ಎಸ್.ತಳವಾರ್ ವ್ಯವಸ್ಥಾಪಕ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಘಟಕದ ತಾಂತ್ರಿಕ ಸಿಬ್ಬಂದಿ ಇಮ್ರಾನ್ ಸೇರಿದಂತೆ ಮತ್ತಿತರರು ಇದ್ದರು.