ಚಾಲಕರು ಪ್ರಯಾಣಿಕರ ಪಾಲಿಗೆ ಶ್ರೀಕೃಷ್ಣ: ಸೋಮೇಶ್ವರಾನಂದ ಸ್ವಾಮೀಜಿ

KannadaprabhaNewsNetwork |  
Published : Jun 27, 2024, 01:03 AM IST
ಗುರುಮಠಕಲ್ ಸಮೀಪದ ಸೈದಾಪುರ ಪಟ್ಟಣದ ಜಿ.ಆರ್‌. ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ಚಾಲಕರ ಒಕ್ಕೂಟದ ಸೈದಾಪುರ ಹೋಬಳಿ ಘಟಕವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಚಾಲಕರು ಪ್ರಯಾಣಿಕರ ಪಾಲಿನ ಶ್ರೀಕೃಷ್ಣ ಪರಮಾತ್ಮ ಇದ್ದಂತೆ, ಹೆಮ್ಮೆಪಟ್ಟು ಸ್ವಾಭಿಮಾನದ ಜೀವನ ಸಾಗಿಸಿ ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಚಾಲಕರು ಪ್ರಯಾಣಿಕರ ಪಾಲಿನ ಶ್ರೀಕೃಷ್ಣ ಪರಮಾತ್ಮ ಇದ್ದಂತೆ, ಹೆಮ್ಮೆಪಟ್ಟು ಸ್ವಾಭಿಮಾನದ ಜೀವನ ಸಾಗಿಸಿ ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು.

ಸಮೀಪದ ಸೈದಾಪುರ ಪಟ್ಟಣದ ಜಿ.ಆರ್‌. ಫಂಕ್ಷನ್ ಹಾಲ್‌ನಲ್ಲಿ ನಡೆದ ಕರ್ನಾಟಕ ಚಾಲಕರ ಒಕ್ಕೂಟದ ಸೈದಾಪುರ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಚಾಲಕರು ದುಶ್ಚಟಗಳಿಗೆ ಬಲಿಯಾಗದೆ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ನಿಮ್ಮ ಮತ್ತು ಇತರರ ಪ್ರಾಣ ಉಳಿಸುವ ಕಾರ್ಯ ಮಾಡಬೇಕು ಎಂದರು.

ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಾರಾಯಣ ಸ್ವಾಮಿ ಮಾತನಾಡಿ, ಸರ್ಕಾರದ ಸೌಲಭ್ಯ ಪಡೆದೆಕೊಳ್ಳಲು ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡಬೇಕು. ಆಗ ಮಾತ್ರ ನಾವು ಜಯಗಳಿಸಲು ಸಾಧ್ಯವಾಗುತ್ತದೆ. ವಾಹನ ಚಾಲನೆ ಮಾಡುವಾಗ ಬಹಳ ಜಾಗ್ರತೆಯಿಂದ ಚಾಲನೆ ಮಾಡಬೇಕು. ಜನಸಾಮಾನ್ಯರಿಂದ, ದೇಶದ ಅತ್ಯುನ್ನತ ವ್ಯಕ್ತಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಮುಟ್ಟಿಸುವ ಸಾರಥಿಯಾಗಿ ಕಾರ್ಯ ನಿರ್ವಹಿಸುವ ನಾವು ಯಾರಿಗೂ ಕಡಿಮೆ ಇಲ್ಲ ಎಂದರು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆ ಮೂಲಕ ಬಡವರಿಗೆ ಅನೂಕೂಲ ಮಾಡಿಕೊಟ್ಟಿದೆ. ಆದರೆ, ಶಕ್ತಿ ಯೋಜನೆಯು ಬಡ ಚಾಲಕರ ಸಮುದಾಯಕ್ಕೆ ಕೊಡಲಿಪೆಟ್ಟು ನೀಡಿದೆ. ಈ ಯೋಜನೆ ರದ್ದು ಮಾಡಿ ಚಾಲಕರ ಸ್ವಾಭಿಮಾನ ಬದುಕಿಗೆ ನೆರವಾಗಿ ಹಾಗೂ ಈ ಕುರಿತು ಮುಖ್ಯಮಂತ್ರಿಗೆ ಮತ್ತು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶರಣಿ ಕುಮಾರ ದೋಕಾ, ಮಲ್ಲಣ್ಣಗೌಡ ಹೊಸಗೌಡರು, ಯೋಗೇಶ ಕುಮಾರ ದೋಕಾ, ಶರಣಗೌಡ ಕ್ಯಾತ್ನಾಳ, ಕೃಷ್ಣಮೂರ್ತಿ ಗುಜ್ಜಾ, ರಾಜೆಶ ಶೆಟ್ಟಿ ಉಡುಪಿ, ಮುಕುಂದ ಕುಮಾರ ಅಲಿಝಾರ್, ನೀಲಕಂಠಪ್ಪಗೌಡ ಕ್ಯಾತ್ನಾಳ, ಸಣ್ಣವೀರ ಕೂಡ್ಲೂರು, ಹೋಬಳಿ ಘಟಕದ ಅಧ್ಯಕ್ಷ ಲೋಕೇಶ ನಾಯಕ ನೀಲಹಳ್ಳಿ, ಗೌರವಧ್ಯಕ್ಷ ಶರಣಗೌಡ ಹುಣಸೇಮರ, ಶಕೀಲ್ ಅಹಮ್ಮದ್, ವಿಜಯ ಕುಮಾರ, ಪ್ರಭಣ್ಣಗೌಡ, ಎಂ.ಡಿ ಲತೀಫ್, ಅಶೋಕರೆಡ್ಡಿ, ಗಂಗಾಧರ ಸ್ವಾಮಿ, ಬಸ್ಸಪ್ಪ ಸಾಹುಕಾರ, ವಿನೋದ ಕುಮಾರ, ಅಜಮತ್ ಅಲಿ ಇತರರಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!