ಎಸ್‌ಬಿಆರ್‌ ಮಕ್ಕಳಿಗೆ ಶೀಘ್ರ ದ್ರೋಣ್‌ ತರಬೇತಿ

KannadaprabhaNewsNetwork |  
Published : Aug 08, 2026, 01:30 AM IST
ಫೋಟೋ- ದೇವರಕಲ್‌ ಎನ್‌. ಎಸ್‌. ದೇವರಕಲ್‌, ಪ್ರಾಚಾರ್ಯರು, ಎಸ್ಬಿಆರ್‌ ಶಾಲೆಕಲಬುರಗಿ | Kannada Prabha

ಸಾರಾಂಶ

Drone training for SBR students soon

-ಮಕ್ಕಳಿಗೆ ಕಂಪ್ಯೂಟರ್‌, ರೋಬೋಟಿಕ್ಸ್‌ ತರಬೇತಿ ಲ್ಯಾಬ್‌ ಸ್ಥಾಪನೆ । ಫಿಸಿಕ್ಸ್‌, ಕೆಮಿಸ್ಟ್ರಿ ಅತ್ಯಾಧುನಿಕ ಲ್ಯಾಬೋರೇಟರಿಗೆ ಸಿದ್ಧತೆ

----

-ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ತನ್ನ ಪಾರಂಪರಿಕ ಹಾಗೂ ಆಧುನಿಕ ವಿದ್ಯಾರ್ಥಿ ಕೇಂದ್ರಿತ ಸವಲತ್ತುಗಳಿಂದಾಗಿಯೇ 6 ದಶಕಗಳಿಂದ ಕಲಬುರಗಿಯಷ್ಟೇ ಅಲ್ಲದೇ ಕಲ್ಯಾಣ ಕರ್ನಾಟಕ, ಇಡೀ ರಾಜ್ಯದ ಗಮನ ಸೆಳೆದಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ಶರಣಬಸವೇಶ್ವರ ರೆಸಿಡೆನ್ಸಿಯಲ್‌ ಪಬ್ಲಿಕ್‌ ಶಾಲೆ ಈಚೆಗಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ತನ್ನ ತರಗತಿ ಕೋಣೆಗಳಿಗೆ ಸ್ವಾಗತಿಸುತ್ತಿದೆ.

ಅತ್ಯುತ್ತಮವಾದದ್ದು ಅದೆಲ್ಲೇ ಇರಲಿ ಅದನ್ನು ತಮ್ಮ ಶಾಲೆಯ ಮಕ್ಕಳಿಗೆ ಒದಗಿಸಬೇಕೆಂಬ ಹಂಬಲದ ಡಾ. ಶರಣಬಸವಪ್ಪ ಅಪ್ಪ ಅವರ ದೂರದೃಷ್ಟಿ, ಕನಸುಗಳ ಪ್ರತೀಕ ಎಸ್ಬಿಆರ್‌ ಶಾಲೆ ಎನ್ನಬಹುದು.

ಕಳೆದ 6 ದಶಕದಿಂದ ಈ ಶಾಲೆಯ ಪ್ರಾಚಾರ್ಯ ಎನ್‌. ಎಸ್‌. ದೇವರಕಲ್‌ ಅವರು ಸಮರ್ಥವಾಗಿ ಈಡೇರಿಸುತ್ತ ಹೊರಟಿದ್ದಾರೆ.

ಮುಂಚೆ ಕರಿಕಲ್ಲಿನ ಕಟ್ಟಡದಲ್ಲಿದ್ದ ಎಸ್ಬಿಆರ್‌ ಶಾಲೆ ಇದೀಗ ಅತ್ಯಾಧುನಿಕ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಆಧುನಿಕ ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ಸವಲತ್ತುಗಳನ್ನೆಲ್ಲ ಹೊಂದಿದ್ದು ಸಾವಿರಾರು ಮಕ್ಕಳು ತಂತ್ರಜ್ಞಾನ ಆಧರಿತ ತರಬೇತಿ ಹೊಂದುತ್ತಿದ್ದಾರೆ.

....ಬಾಕ್ಸ್‌.....

ಐಸಿಟಿ ಟೆಕ್ನಾಜಿ ಆಧಾರಿತ ತರಗತಿ ಕೋಣೆಗಳು

ಅಲ್ಟ್ರಾ ಮಾಡರ್ನ್‌ ಸವಲತ್ತುಗಳಿರುವ ಹೊಸ ಕಟ್ಟಡದಲ್ಲಿರುವ 8, 9 ಹಾಗೂ 10 ನೇ ತರಗತಿಯ ಎಲ್ಲಾ ತರಗತಿ ಕೋಣೆಗಳು ಇನ್‌ಫಾರ್ಮೇಷನ್‌ ಆಂಡ್‌ ಟೆಕ್ನಾಲಜಿ ಆಧಾರದಲ್ಲಿ ಅಭಿವೃದ್ಧಿ ಪಡಿಸಲಾಗಿರುವುದು ವಿಶೇಷ. ಸ್ಮಾರ್ಟ್‌ ತರಗತಿಗಳಲ್ಲಿ ಅಷ್ಟೇ ಸ್ಮಾರ್ಟ್‌ ಕ್ಲಾಸ್‌ರೂಮ್‌ಗಳಿವೆ. ಎಲ್ಲಾ ತರಗತಿ ಕೋಣೆಗಳ ಸ್ಮಾರ್ಟ್‌ ಹಲಗೆಗಳಿಗೂ ಅಂತರ್ಜಾಲ ಸಂಪರ್ಕ, ಯೂಟ್ಯೂಬ್‌ ಪ್ರದರ್ಶನದಂತಹ ಅತ್ಯಾಧುನಿಕ ವ್ಯವಸ್ಥೆ ಇದೆ.

ತರಗತಿ ಕೋಣೆಗಳಲ್ಲಿ ಇಂತಹ ಐಸಿಟಿ ಆಧಾರಿತ ಹಲಗೆಗಳು ಇರುವುದರಿಂದ ಶಿಕ್ಷಕರಿಲ್ಲಿ ಮಕ್ಕಳಿಗೆ ಬಲು ಸುಲಭದಲ್ಲಿ ಆನ್‌ ಲೈನ್‌ ಲಭ್ಯ ಪಠ್ಯ ಕ್ರಮಗಳನ್ನೂ ಬೋಧಿಸೋದು ಸುಲಭವಾಗಿದೆ. ಇದಲ್ಲದೆ ಪಾರಂಪರಿಕವಾಗಿಯೂ ಬೋಧನೆಗೆ ಈ ತರಗತಿ ಅಣಿಗೊಳಿಸಲಾಗಿದೆ. ಆಟೋಟದ ವಿಭಾಗ, ಜಿಮ್‌, ಶೌಚಲಯ ಕಾಂಪ್ಲೆಕ್ಸ್‌, ಮಕ್ಕಳ ಆಟದ ಮೈದಾನದಂತಹ ಸವಲತ್ತುಗಳಿಲ್ಲಿ ವಿಶೇಷವಾಗಿವೆ.

..ಬಾಕ್ಸ್‌..

ಶೀಘ್ರ ದ್ರೋಣ್‌, ರೊಬೋ ಲ್ಯಾಬೋರೇಟರಿಗಳು

ಹೊಸ ಕಟ್ಟಡದಲ್ಲಿ 2 ಸಭಾಂಗಣ, 200 ಮಕ್ಕಳು ಕುಳಿತು ಕಲಿಯುವಂತಹ ಕಂಪ್ಯೂಟರ್‌ ಲ್ಯಾಬೋರೇಟರಿ , ರೋಬೋಟಿಕ್ಸ್‌, ದ್ರೋಣ್‌ ಲ್ಯಾಬೋರೇಟರಿಗಳು ಸಿದ್ಧಗೊಳ್ಳುತ್ತಿವೆ. ಜೊತೆಗೆ ಹೈಸ್ಕೂಲ್‌ ಮಕ್ಕಳಿಗಾಗಿಯೇ ಪ್ರತ್ಯೇಕ ಭೌತ, ರಸಾಯನ, ಜೀವ ಶಾಸ್ತ್ರ ವಿಷಗಳ ಆಧುನಿಕ ಪ್ರಯೋಗಾಲಯ ಇಲ್ಲಿ ತರಲಾಗುತ್ತಿದೆ. ರೋಬೋ, ದ್ರೋಣ್‌, ಕಂಪ್ಯೂಟರ್‌ ಲ್ಯಾಬೋರೇಟರಿಗಳಿಗಾಗಿ ಬಾಂಬೆ ಸಂಸ್ಥೆಯೊಂದು ಅದಾಗಲೇ ಎಸ್ಬಿಆರ್‌ಗೆ ಸಂಪರ್ಕದಲ್ಲಿದ್ದು, ಲ್ಯಾಬ್‌ ಯೋಜನೆಗಳನ್ನು ನೀಡಿದೆ.

ಪಿಯುಸಿ ಹಂತದಲ್ಲಿ ಲ್ಯಾಬರೋಟರಿಗಳು ಪ್ರತ್ಯೇಕವಾಗಿ ಇರುತ್ತವೆ, ಆದರೆ, ಎಸ್ಬಿಆರ್‌ ಶಾಲೆಯಲ್ಲಿ ಪ್ರಾಚಾರ್ಯ ಎನ್‌. ಎಸ್‌. ದೇವರಕಲ್‌ ಅವರ ವಿಶೇಷ ಆಸಕ್ತಿಯಿಂದಾಗಿ ಹೈಸ್ಕೂಲ್‌ ಸಾವಿರಾರು ಮಕ್ಕಳಿಗೇ ಫಿಸಿಕ್ಸ್‌, ಕೆಮಿಸ್ಟ್ರಿ, ಬಯಾಲಜಿ, ಕಂಪ್ಯೂಟರ್‌ ಪ್ರಯೋಗಾಲಯಗಳು ಮಕ್ಕಳ ವಿಷಯ ಆಸಕ್ತಿಯಿಂದ ಕಲಿಕೆಗೆ ಪೂರಕವಾಗಲಿವೆ.

------------

...ಬಾಕ್ಸ್‌......

ಎಸ್ಬಿಆರ್‌ಗೆ 60 ರ ಹರೆಯ

ಶರಣಬಸವೇಶ್ವರ ರೆಸಿಡೆನ್ಶಿಯಲ್ ಪಬ್ಲಿಕ್ ಸ್ಕೂಲ್‌ ಕಲಬುರಗಿಯಲ್ಲಿ 1967ರಲ್ಲಿ ಆರಂಭವಾಗಿ ಇದೀಗ 6 ದಶಕ ಪೂರ್ಣಗೊಳಿಸಿದೆ. ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಅಡಿಯಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಯಿತು. ಡಾ. ಶರಣಬಸವಪ್ಪ ಅಪ್ಪ ಅವರ ಪಬ್ಲಿಕ್‌ ಸ್ಕೂಲ್‌ ಪರಿಕಲ್ಪನೆಗೆ ಅವರ ಜೊತೆಗಿದ್ದುಕೊಂಡು ನೀರೆರೆದವರು ಪ್ರಾಚಾರ್ಯ ಎನ್‌. ಎಸ್‌. ದೇವರಕಲ್‌. ತಮ್ಮ ಪ್ರತಿಕ್ಷಣವನ್ನು ಮಕ್ಕಳಿಗೆ ಮೀಸಲಿಟ್ಟಿರುವ ದೇವರಕಲ್‌, ಮಕ್ಕಳ ಪಾಲಿಗೆ ದೇವರು ಎಂದೇ ಹೇಳಲಾಗುತ್ತಿದೆ. ಮಾನವನ ಬದುಕಲ್ಲಿ 60 ವರ್ಷ ವೃದ್ಧಾಪ್ಯ. ಆದರೆ, ಶಿಕ್ಷಣ ಸಂಸ್ಥೆಯೊಂದಕ್ಕೆ 60 ವರ್ಷ, ಅದರಲ್ಲೂ ಎಸ್ಬಿಆರ್‌ನಂತಹ ಅತ್ಯಾಧುನಿಕ, ಪಾರಂಪರಿಕ ಶಿಕ್ಷಣದ ಹದವಾದಂತಹ ಮಿಶ್ರಣವಿರುವ ಸಂಸ್ಥೆಗೆ 60ನೇ ವರ್ಷ ಹರೆಯದ ಅವಧಿ. ಪ್ರಸಿದ್ಧ ಮತ್ತು ನಂಬಿಕಾರ್ಹ ಶಿಕ್ಷಣ ಸಂಸ್ಥೆಯಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ಬಿಆರ್‌ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ವಸತಿ ಸೌಲಭ್ಯಕ್ಕೆ ಹೆಸರುವಾಸಿ.

-----------------

.....ಬಾಕ್ಸ್‌....

ಮೌಲ್ಯಾಧಾರಿತ , ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ದೇವರಕಲ್‌

ಶರಣಬಸವೇಶ್ವರ ರೆಸಿಡೆನ್ಶಿಯಲ್ ಪಬ್ಲಿಕ್ ಸ್ಕೂಲ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಹೆಮ್ಮೆಯ ಶಾಲೆ. ಉತ್ತಮ ಶೈಕ್ಷಣಿಕ ವಾತಾವರಣದೊಂದಿಗೆ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಕ್ರೀಡೆ, ವಿಜ್ಞಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ನಡೆಸಲು ಅತ್ಯುತ್ತಮ ಮಾರ್ಗದರ್ಶನ ಇಲ್ಲಿದೆ ಎಂದು ಎಸ್ಬಿಆರ್‌ನ ಪ್ರಾಚಾರ್ಯರಾದ ಎನ್‌. ಎಸ್‌. ದೇವರಕಲ್‌ ಹೇಳುತ್ತಾರೆ. ದೇವರಕಲ್‌ ಸರ್‌ ಅವರ ಮಾರ್ಗದರ್ಶನದಲ್ಲಿ ಎಸ್ಬಿಆರ್‌ ಹೈಸ್ಕೂಲ್‌ ವಿಭಾಗದ ಶಂಬುಲಿಂಗ ಸರ್‌ ಅವರು ಹೊಸ ಲ್ಯಾಬೋರೇಟರಿಗಳ ನಿರ್ಮಾಣ ಯೋಜನೆ ಮುಂಬರುವ 2 ತಿಂಗಳಲ್ಲಿ ಕೈಗೂಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್ಬಿಆರ್‌ ಶಾಲೆ ವಿದ್ಯಾರ್ಥಿ ಕೇಂದ್ರಿತ, ಪ್ರತ್ಯೇಕ ಲ್ಯಾಬೊರೇಟರಿ ಹೊಂದಿರುವ ಶಾಲೆ ಇದಾಗಿದ್ದು, ವಿದ್ಯಾರ್ಥಿ ಕಲ್ಯಾಣವೇ ನಮ್ಮ ಗುರಿ ಎಂದಿದ್ದಾರೆ.

---

ಫೋಟೋ- ದೇವರಕಲ್‌

ಎನ್‌. ಎಸ್‌. ದೇವರಕಲ್‌, ಪ್ರಾಚಾರ್ಯರು, ಎಸ್ಬಿಆರ್‌ ಶಾಲೆ

ಕಲಬುರಗಿ

ಫೋಟೋ- ಎಸ್ಬಿಆರ್‌ 1

ಕಲಬುರಗಿಯಲ್ಲಿರುವ ಎಸ್ಬಿಆರ್‌ ಶಾಲೆಯ ತರಗತಿ ಕೋಣೆಗಳು ಅಲಂಕರಿಸಿರುವ ಐಸಿಟಿ ಆಧಾರಿತ ಕ್ಲಾಸ್‌ರೂಮ್‌ಗಳ ನೋಟ

ಫೋಟೋ- ಎಸ್ಬಿಆರ್‌ 2

ಎಸ್ಬಿಆರ್‌ ಶಾಲೆಯ ತರಗತಿ ನೋಟ

ಫೋಟೋ- ಎಸ್ಬಿಆರ್‌ 3 ಮತ್ತು ಎಸ್ಬಿಆರ್‌ 4

ಕಲಬುರಗಿಯಲ್ಲಿರುವ ಎಸ್ಬಿಆರ್‌ ಹೈಸ್ಕೂಲ್‌ ನೋಟ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಉಪವಾಸ ಸತ್ಯಾಗ್ರಹ: ಸಚಿವ ಅಜಯ್ ಸಿಂಗ್ ಭರವಸೆ
ಎರಡು ದಿನ ಬರ ಪರಿಸ್ಥಿತಿ ಪರಿಶೀಲನೆ, ಸಭೆ