ಆಧುನಿಕ ಯುಗದಲ್ಲಿ ಡ್ರೋನ್ ತರಬೇತಿ ಅವಶ್ಯಕ: ಡಾ.ವಿಷ್ಣುವರ್ಧನ್

KannadaprabhaNewsNetwork | Published : Apr 7, 2025 12:35 AM

ಸಾರಾಂಶ

ಡಿಜಿಟಲ್ ತೋಟಗಾರಿಕೆ ಸಂಶೋಧನೆಗೆ ಹೆಚ್ಚಿನ ಪಾತ್ರ ವಹಿಸುವಲ್ಲಿ ಸಹಕಾರಿಯಾಗಿದೆ. ಈ ದಿಕ್ಕಿನಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಡ್ರೋನ್ ತರಬೇತಿ ಕಾರ್ಯಗಾರ ಉತ್ತಮವಾದ ಅವಕಾಶ ಒದಗಿಸಿ ಕೊಡುತ್ತದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಡಿಜಿಟಲ್ ತೋಟಗಾರಿಕೆ ಸಂಶೋಧನೆಗೆ ಹೆಚ್ಚಿನ ಪಾತ್ರ ವಹಿಸುವಲ್ಲಿ ಸಹಕಾರಿಯಾಗಿದೆ. ಈ ದಿಕ್ಕಿನಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಡ್ರೋನ್ ತರಬೇತಿ ಕಾರ್ಯಗಾರ ಉತ್ತಮವಾದ ಅವಕಾಶ ಒದಗಿಸಿ ಕೊಡುತ್ತದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ತಿಳಿಸಿದ್ದಾರೆ.

ಬಾಗಲಕೋಟೆಯ ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯ ಆವರಣದಲ್ಲಿ ಕರ್ನಾಟಕ ರಾಜ್ಯದ 4 ಕಂದಾಯ ವಿಭಾಗದ ಪ.ಜಾತಿಯ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ, ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ, ಬೆಂಗಳೂರು ವತಿಯಿಂದ ಆಯೋಜಿಸಲಾದ 15 ದಿನಗಳ ಡ್ರೋನ್ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಶ್ರೀಹರ್ಷಾ ವಿ. ಮಾತನಾಡಿ, ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಡ್ರೋನ್ ತಂತ್ರಜ್ಞಾನ ಮಾಹಿತಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಡ್ರೋನ್ ಪೈಲೆಟ್ ಪ್ರಮಾಣ ಪತ್ರದಿಂದ ಸಾಕಷ್ಟು ಪ್ರಯೋಜನ ಪಡೆಯಬಹುದೆಂದರು.

ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಬಾಲಾಜಿ ಕುಲಕರ್ಣಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿ, ಇಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಕಾರ್ಮಿಕರ ಕೊರತೆಯಿಂದ ರೈತರಿಗೆ ಅತೀವ ತೊಂದರೆಯಾಗುತ್ತಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸ ತಂತ್ರಜ್ಞಾನ ಡ್ರೋನ್‌ ಗಳ ಮೂಲಕ ಕೀಟನಾಶಕ, ಗೊಬ್ಬರ ಸಿಂಪಡಿಸಬಹುದು. ಇನ್ನಿತರೆ ಉಪಯೋಗವಾಗುವ ಕೆಲಸ ಕಾರ್ಯ ನಿರ್ವಹಿಸಬಹುದು. ಡ್ರೋನ್ ಕೃಷಿಗೆ ಉತ್ತೇಜನ ನೀಡಲು ರೈತರು ಹೆಚ್ಚು ಹೆಚ್ಚಾಗಿ ಡ್ರೋನ್ ಬಳಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ತರಬೇತಿ ಕಾರ್ಯಗಾರ ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿರುವುದು ಹರ್ಷದಾಯಕವಾದ ವಿಷಯವಾಗಿದ್ದು, ಈ ಕಾರ್ಯಗಾರದ ಸಂಪೂರ್ಣ ಲಾಭ ಪಡೆಯಬೇಕೆಂದು ಎಂದು ಸಲಹೆ ನೀಡಿದರು.

ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಬಸವರಾಜಪ್ಪ ಎಚ್.ಆರ್. ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯ ಸಂಯೋಜಕರು ಪ್ರಾಸ್ತಾವಿಕ ನುಡಿಗಳನ್ನಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಸಹಾಯಕ ಪ್ರಾಧ್ಯಾಪಕ ಹಾಗೂ ಸಂಯೋಜಕರಾದ ಡಾ.ಮಹಾಂತೇಶ ನಾಯಕ ಬಿ.ಎನ್., ವಂದಿಸಿದರು. ಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥಿಸಿದರು.

ಕೃಷಿಯಲ್ಲಿ ಬೆಳೆಗಳ ಮೇಲೆ ಗೊಬ್ಬರ, ಔಷಧ, ರಸಾಯನಿಕ ಸಿಂಪಡಣೆ, ಕಾಲ ಕಾಲಕ್ಕೆ ಬೆಳೆಗಳ ಮೇಲ್ವಿಚಾರಣೆ ಸೇರಿ ಇಳುವರಿ ಹೆಚ್ಚಿಸಿ ಉತ್ತಮ ಆದಾಯ ಹೊಂದಲು ಡ್ರೋನ್‌ ಗಳ ಬಳಕೆ ಸಹಾಯಕವಾಗಿದೆ. ಇವುಗಳ ಬಳಕೆ ದೇಶದಲ್ಲಿ ಹೆಚ್ಚಾಗಬೇಕು. 21ನೇ ಶತಮಾನದಲ್ಲಿ ಡ್ರೋನ್ ಬಳಕೆ ಕೃಷಿಯಲ್ಲಿ ಮೈಲುಗಲ್ಲಾಗಲಿದೆ. ರೈತರು ಹೆಚ್ಚೆಚ್ಚು ಡ್ರೋನ್‌ ಉಪಯೋಗಿಸಲು ಮುಂದಾದಲ್ಲಿ ಉತ್ತಮ ಫಸಲು ಪಡೆಯಬಹುದು, ಆಹಾರ ಕೊರತೆ ನೀಗಿಸಲು ಡ್ರೋನ್‌ ಗಳು ಸಹಾಯಕವಾಗುತ್ತವೆ.

- ಡಾ.ವಿಷ್ಣುವರ್ಧನ್ ಕುಲಪತಿ ತೋಟಗಾರಿಕೆ ವಿಶ್ವವಿದ್ಯಾಲಯ

Share this article