ಮಾದಕ ವಸ್ತುಗಳ ಸೇವನೆಯಿಂದ ದೇಶ ಹಾಳು

KannadaprabhaNewsNetwork |  
Published : Jan 03, 2026, 01:45 AM IST
ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಹಮ್ಮಿಕೊAಡಿದ್ದ ಡ್ರಗ್ಸ್ ಮುಕ್ತ ಭಾರತ ಅಂದೋಲನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ದೇಶದ ಗಡಿಭಾಗದಲ್ಲಿ ವಿರೋದಿ ರಾಷ್ಟ್ರಗಳು ದೇಶವನ್ನು ಕಬಳಿಸುವ ಸಂಚು ಮಾಡಿದರೆ ದೇಶದ ಒಳಗೆ ಯುವ ಜನತೆಯನ್ನು ಡ್ರಗ್ಸ್ ವ್ಯಸನಿಗಳನ್ನಾಗಿ ಮಾಡುವ ಮೂಲಕ ದೇಶದ ಆಂತರ್ಯವನ್ನು ದುರ್ಬಲ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಅನಕ್ಷರಸ್ಥರನ್ನು ಗುರಿಯಾಗಿ ಮೊದಲ ಉಚಿತವಾಗಿ ಡ್ರಗ್ಸ್ ಹಂಚುವ ಮೂಲಕ ಡ್ರಗ್ಸ್ ವ್ಯಸನಗಳನ್ನಾಗಿ ಮಾಡಲಾಗುತ್ತಿದೆ. ಮತ್ತೊಂದೆಡೆ ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮಾದಕ ವಸ್ತುಗಳ ಸೇವನೆ ಕುಟುಂಬ ಹಾಗೂ ದೇಶವನ್ನು ಹಾಳು ಮಾಡಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ಹಾಗೂ ಪರಿವರ್ತನ ಟ್ರಸ್ಟ್ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಭಾರತ ಆಂದೋಲನದಲ್ಲಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿ ಮೊದಲ ತಮ್ಮ ಕುಟುಂಬದ ನೆಮ್ಮದಿಗೆ ಭಂಗ ತರಲಿದ್ದರೆ, ತರುವಾಯ ಸಮಾಜದ ಸ್ವಾಸ್ಥ್ಯಕ್ಕೆ ಕುತ್ತು ತರಲಿದ್ದಾರೆ. ಆದ್ದರಿಂದ ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ. ದೇಶದ ಗಡಿಭಾಗದಲ್ಲಿ ವಿರೋದಿ ರಾಷ್ಟ್ರಗಳು ದೇಶವನ್ನು ಕಬಳಿಸುವ ಸಂಚು ಮಾಡಿದರೆ ದೇಶದ ಒಳಗೆ ಯುವ ಜನತೆಯನ್ನು ಡ್ರಗ್ಸ್ ವ್ಯಸನಿಗಳನ್ನಾಗಿ ಮಾಡುವ ಮೂಲಕ ದೇಶದ ಆಂತರ್ಯವನ್ನು ದುರ್ಬಲ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಅನಕ್ಷರಸ್ಥರನ್ನು ಗುರಿಯಾಗಿ ಮೊದಲ ಉಚಿತವಾಗಿ ಡ್ರಗ್ಸ್ ಹಂಚುವ ಮೂಲಕ ಡ್ರಗ್ಸ್ ವ್ಯಸನಗಳನ್ನಾಗಿ ಮಾಡಲಾಗುತ್ತಿದೆ. ಮತ್ತೊಂದೆಡೆ ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವ ಹುನ್ನಾರ ನಡೆದಿದೆ. ಯುವ ಜನಾಂಗ ಆರೋಗ್ಯವಾಗಿದ್ದರೆ ದೇಶವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಸತ್ಯ ತಿಳಿದಿರುವ ವಿರೋಧಿಗಳು ವಿವಿಧ ಆಮಿಷಗಳನ್ನೊಡ್ಡಿ ದೇಶದ ಯುವ ಜನತೆ ಕೆಟ್ಟ ಚಟಗಳ ದಾಸರನ್ನಾಗಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ, ಮಾದಕ ವಸ್ತುಗಳ ಸೇವಿಸುವುದು ಮಾತ್ರ ತಪ್ಪಲ್ಲ ಇದನ್ನು ಕಂಡು ಮೌನವಾಗಿರುವುದು ತಪ್ಪು, ಮಾದಕ ವಸ್ತುಗಳ ವ್ಯವಸ್ಥಿತ ಹಂಚಿಕೆದಾರರು ದೇಶದ್ರೋಹಿಗಳು ಇವರ ವಿರುದ್ಧ ಕಠಿಣ ಕ್ರಮ ಕೈಗೊಂಡಾಗ ಮಾತ್ರ ಇಂತಹ ಅನಿಷ್ಟ ದಂಧೆಗೆ ಕಡಿವಾಣ ಬೀಳಲಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯಬೀದಿಯಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಕುರಿತ ಸ್ತಬ್ಧ ಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಮಂಜುನಾಥ್ ಸಂಘಿ, ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕರಡಿಗಾಲ್ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓದಿನತ್ತ ಗಮನ ಹರಿಸದ್ದಿರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಸಾಧ್ಯ
ಸಂಘಟನೆಗಳು ಸಮಾಜದ ಏಳಿಗೆಗೆ ದುಡಿಯಲಿ: ಶ್ರೀಗುರುದೇವ್ ಸ್ವಾಮೀಜಿ