ಕನ್ನಡಪ್ರಭ ವಾರ್ತೆ ಬೆಂಗಳೂರು
ಗಿರಿನಗರ, ಹೆಬ್ಬಾಳ ಹಾಗೂ ವಿದ್ಯಾರಣ್ಯಪುರ ಠಾಣೆಗಳ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 10.96 ಕೋಟಿ ರು. ಮೌಲ್ಯದ 5.480 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿದ್ದಾರೆ.
ದೆಹಲಿಯ ಡ್ರಗ್ಸ್ ಮಾಫಿಯಾ ಸಂಪರ್ಕ:ದೆಹಲಿಯಿಂದ ನಗರಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ಒಬ್ಬ ವಿದೇಶಿ ಪ್ರಜೆ ಸೇರಿದಂತೆ ಮೂವರು ದಂಧೆಕೋರರನ್ನು ಗಿರಿನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕೇರಳ ರಾಜ್ಯದ ಆಶಿಕ್, ಜಾಫರ್, ನೈಜಿರಿಯಾದ ಜೋಶಿಯಾ ಅಬೆಲ್ ಬಂಧಿತರಾಗಿದ್ದು, ಆರೋಪಿಗಳಿಂದ 8.64 ಕೋಟಿ ರು.ಮೌಲ್ಯದ 4.320 ಕೆಜಿ ಎಂಡಿಎಂಎ ಜಪ್ತಿಯಾಗಿದೆ. ಹಲವು ದಿನಗಳಿಂದ ದೆಹಲಿಯಿಂದ ಬಸ್ ಮೂಲಕ ಡ್ರಗ್ಸ್ ತಂದು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಸ್.ಮಂಜುನಾಥ್ ಹಾಗೂ ಪಿಎಸ್‌ಐ ಕೆ.ಡಿ.ಮಂಜುನಾಥ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಈ ಆರೋಪಿಗಳ ಪೈಕಿ ಆಶಿಕ್ ವೃತ್ತಿಪರ ಪೆಡ್ಲರ್ ಆಗಿದ್ದು, ಆತನ ವಿರುದ್ಧ ಕೇರಳದಲ್ಲಿ 10ಕ್ಕೂ ಹೆಚ್ಚು ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ.
ರಾಜಸ್ಥಾನದ ಜೋಧ್‌ಪುರದಿಂದ ನಗರಕ್ಕೆ ಪ್ರಯಾಣಿಕಳ ಸೋಗಿನಲ್ಲಿ ಬಸ್‌ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಬನಿತಾ ಎಂಬಾಕೆಯಿಂದ 2.10 ಕೋಟಿ ರು. ಬೆಲೆಯ 1 ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ.
-ಕೋಟ್-
ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ