ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯರ ಬ್ಯಾಗ್‌ಗಳಲ್ಲಿ 23.88 ಕೋಟಿ ರು. ಮೌಲ್ಯದ ಡ್ರಗ್ಸ್ ಅಡಗಿಸಿ ಸಾಗಣೆಗೆ ಯತ್ನಿಸಿದ ವಿದೇಶಿ ಪ್ರಜೆಯನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್‌ಸಿಬಿ)ಅಧಿಕಾರಿಗಳು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರುಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯರ ಬ್ಯಾಗ್‌ಗಳಲ್ಲಿ 23.88 ಕೋಟಿ ರು. ಮೌಲ್ಯದ ಡ್ರಗ್ಸ್ ಅಡಗಿಸಿ ಸಾಗಣೆಗೆ ಯತ್ನಿಸಿದ ವಿದೇಶಿ ಪ್ರಜೆಯನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್‌ಸಿಬಿ)ಅಧಿಕಾರಿಗಳು ಬಂಧಿಸಿದ್ದಾರೆ.
ಬ್ರೆಜಿಲ್ ದೇಶದ ಪ್ರಜೆ ಆಗಿರುವ ಆರೋಪಿ ಕತಾರ್‌ನ ದೋಹಾದಿಂದ ಮಂಗಳವಾರ ಕೆಐಎಗೆ ಬಂದಿಳಿದ ವೇಳೆ ಬಂಧಿಸಿ 23.88 ಕೋಟಿ ರು ಮೌಲ್ಯದ 4.776 ಕೆ.ಜಿ. ಕೊಕೇನ್ ಅನ್ನು ಎನ್‌ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಕತಾರ್‌ನಿಂದ ಕೋಟ್ಯಂತರ ರು. ಬೆಲೆಯ ಕೊಕೇನ್ ಸಾಗಣೆ ಬಗ್ಗೆ ಸಿಕ್ಕ ಸುಳಿವು ಆಧರಿಸಿ ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿಯಿತು. ಕತಾರ್‌ನ ದೋಹಾದಿಂದ ಕೆಐಎಗೆ ಮಂಗಳವಾರ ಬಂದಿಳಿದ ಪ್ರಯಾಣಿಕರ ಮೇಲೆ ಕಣ್ಗಾವಲಿಡಲಾಗಿತ್ತು. ಈ ವೇಳೆ ಶಂಕೆ ಮೇರೆಗೆ ಬ್ರೆಜಿಲ್ ಪ್ರಜೆಯನ್ನು ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಆಗ ಆತನ ಬಳಿ ಮಹಿಳೆಯರ ನಾಲ್ಕು ಬ್ಯಾಗ್‌ಗಳು ಪತ್ತೆಯಾದವು. ಅನುಮಾನದ ಮೇರೆಗೆ ಆ ಬ್ಯಾಗ್‌ಗಳನ್ನು ವಶಕ್ಕೆ ಪಡೆದು ತಪಾಸಣೆಗೊಳಪಡಿಸಿದಾಗ ಅವುಗಳಲ್ಲಿ ಅಡಗಿಸಿಟ್ಟಿದ್ದ ಕೊಕೇನ್ ಸಿಕ್ಕಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಅಲ್ಲದೆ ಕೆಲ ಸಿದ್ಧ ಉಡುಪುಗಳಲ್ಲಿ ಸಹ ಅವಿತಿಟ್ಟಿದ್ದ ಕೊಕೇನ್ ಪತ್ತೆಯಾಗಿದೆ. ಈ ಡ್ರಗ್ಸ್ ಸಾಗಣೆ ಹಿಂದೆ ಒಂದು ತಂಡ ಕಾರ್ಯನಿರ್ವಹಿಸಿರುವ ಶಂಕೆ ಇದ್ದು, ಈ ಡ್ರಗ್ಸ್ ಜಾಲದ ಮೂಲ ಭೇದಿಸಲು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೆಲ ದಿನಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಸಾಗಣೆಯಾಗುತ್ತಿದ್ದ 20 ಕೋಟಿ ರು. ಮೌಲ್ಯದ ಖಟ್ಟಾ ಎಲೆಗಳು ಹಾಗೂ ಮೈಸೂರು ನಗರದಲ್ಲಿ ಡ್ರಗ್ಸ್ ಉತ್ಪಾದಕ ಘಟಕದ ಮೇಲೆ ದಾಳಿ ನಡೆಸಿ 50 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದರು.ವಿಶೇಷ ವಿನ್ಯಾಸದ ಬ್ಯಾಗ್‌ಡ್ರಗ್ಸ್ ಸಾಗಣೆ ಸಲುವಾಗಿಯೇ ಮಹಿಳೆಯರು ಬಳಸುವ ಹ್ಯಾಡ್ ಬ್ಯಾಗ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. ಬ್ಯಾಗ್ ಹಿಡಿಕೆ (ಫಾಲ್ಸ್ ವಾಲ್ಸ್) ಹಾಗೂ ತಳದಲ್ಲಿ ಹೊರನೋಟಕ್ಕೆ ಒಮ್ಮೆಗೆ ಗೋಚರಿಸದಂತೆ ವಿಸ್ತಾರದ ಕಂಪಾರ್ಟ್ಸ್‌ಮೆಂಟ್‌ಗಳನ್ನು ರಚಿಸಲಾಗಿತ್ತು. ಈ ಬ್ಯಾಗ್‌ಗಳಿಗೆ ತುಂಡು ಬಟ್ಟೆಗಳಲ್ಲಿ ಕೊಕೇನ್ ತುಂಬಿ ಅಡಗಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಡ್ರಗ್ಸ್ ಸಾಗಣೆ ಸಲುವಾಗಿಯೇ ಮಹಿಳೆಯರು ಬಳಸುವ ಹ್ಯಾಡ್ ಬ್ಯಾಗ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. ಬ್ಯಾಗ್ ಹಿಡಿಕೆ (ಫಾಲ್ಸ್ ವಾಲ್ಸ್) ಹಾಗೂ ತಳದಲ್ಲಿ ಹೊರನೋಟಕ್ಕೆ ಒಮ್ಮೆಗೆ ಗೋಚರಿಸದಂತೆ ವಿಸ್ತಾರದ ಕಂಪಾರ್ಟ್ಸ್‌ಮೆಂಟ್‌ಗಳನ್ನು ರಚಿಸಲಾಗಿತ್ತು. ಈ ಬ್ಯಾಗ್‌ಗಳಿಗೆ ತುಂಡು ಬಟ್ಟೆಗಳಲ್ಲಿ ಕೊಕೇನ್ ತುಂಬಿ ಅಡಗಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.