ಬ್ಯಾಡಗಿ: ಲೋಕಸಭೆ ಚುನಾವಣೆ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಹಾಲಿ ಮಾಜಿ ಸಚಿವರು ಶಾಸಕರು ತಮ್ಮ ಮಕ್ಕಳನ್ನೇ ಕಣಕ್ಕಿಳಿಸುತ್ತಿದ್ದು ಪಾಠ ಕಲಿಯದೇ ಪರೀಕ್ಷೆ ಎದುರಿಸಬೇಕಾಗಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಲೇವಡಿ ಮಾಡಿದರು.
ನಾಪತ್ತೆಯಾದ ಮುಖಂಡರು: ಘಟಾನುಘಟಿ ಮುಖಂಡರು ನರೇಂದ್ರ ಮೋದಿ ಜನಪ್ರಿಯತೆ ಕಂಡು ಲೋಕಸಭೆ ಚುನಾವಣೆ ವೇಳೆಯಲ್ಲಿ ನಾಪತ್ತೆಯಾಗಿದ್ದಾರೆ. ಇನ್ನೂ ಕಾಂಗ್ರೆಸ್‌ನ ಹಾಲಿ ಸಚಿವರು ಆಂತರಿಕ ಷರತ್ತಿಗೊಳಪಟ್ಟು ತಮ್ಮ ಮಕ್ಕಳು, ಪತ್ನಿ ಮತ್ತು ಸಂಬಂಧಿಗಳನ್ನು ಚುನಾವಣೆ ಕಣಕ್ಕಿಳಿಸಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಬೆಂಗಳೂರು ದಕ್ಷಿಣ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಬೀದರ್, ಕಲಬುರಗಿ ಕ್ಷೇತ್ರಗಳಲ್ಲಿ ಇಂತಹ ಪ್ರಯೋಗ ನಡೆದಿದ್ದು 60 ವರ್ಷದ ಇತಿಹಾಸವಿರುವ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಗೆ ಮುನ್ನವೇ ಇಂತಹ ದುರ್ಗತಿ ಬಂದಿದ್ದು ಖೇದಕರ ಸಂಗತಿ ಎಂದರು.
ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು, ಯುವ ಮೋರ್ಚಾ ಅಧ್ಯಕ್ಷ ಸುಭಾಸ್ ಮಾಳಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಧುಮ್ಮಿಹಾಳ ಬೂತ್ ಅಧ್ಯಕ್ಷ ಶಿವರಾಜ ಮೀಸಿಮಣ್ಣನವರ ಅವರನ್ನೂ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ವಿಸ್ತಾರಕ ಸೋಮೇಶ ಉಪನಾಳ, ಶಿವಬಸಪ್ಪ ಕುಳೇನೂರ, ಹನುಮಂತಪ್ಪ ನೆಲ್ಲಿಕೊಪ್ಪ, ಮೃತ್ಯುಂಜಯ ಕಡೇಮನಿ, ಶಿವರಾಜ ವಸ್ತçದ, ವರುಣ ಮಲ್ಲಿಗಾರ, ಮಾರುತಿ ಫಾಸಿ, ಬ್ಯಾಡಗಿ ಮಂಡಲ ಪ್ರಧಾನ ಕಾರ್ಯದರ್ಶಿ ಫಕ್ಕೀರಸಿಂಗ್ ಕಹಾರ್, ಪ್ರದೀಪ್ ಜಾಧವ ಇನ್ನಿತರಿದ್ದರು