ಹನುಮಸಾಗರ: ದುರ್ಗಾ ಸಪ್ತಸತಿ ಪಠಣದಿಂದ ಆರೋಗ್ಯ, ಸಂಪತ್ತು, ಶಾಂತಿ ಮತ್ತು ದೈವಿಕ ಕೃಪೆ ಪ್ರಾಪ್ತಿ ಎಂದು ಮಹಿಳಾ ಮಂಡಳದ ಸದಸ್ಯ ವಿಜಯಲಕ್ಷ್ಮಿ ಕಾಳಗಿ ಹೇಳಿದರು.
ದುರ್ಗಾ ಸಪ್ತಸತಿ ಪಠಣ. ಗ್ರಹದೋಷಗಳು ನಿವಾರಣೆಯಾಗುತ್ತವೆ, ಜೀವನದಲ್ಲಿ ಸುಖ-ನೆಮ್ಮದಿ ನೆಲೆಸುತ್ತದೆ, ದೈಹಿಕ-ಮಾನಸಿಕ ಆರೋಗ್ಯ ಸುಧಾರಣೆ, ಆರ್ಥಿಕ ಸ್ಥಿತಿ ವೃದ್ಧಿ, ಮನಶಾಂತಿ, ದೇವಿಯ ಆಶೀರ್ವಾದ ಹಾಗೂ ಗ್ರಹದೋಷ ಪರಿಹಾರವಾಗುತ್ತದೆ. ಇಷ್ಟಾರ್ಥ ನೆನಪಿನಲ್ಲಿಟ್ಟು ಪಠಿಸಿದರೆ ಉತ್ತಮ ಫಲ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಳ ಸದಸ್ಯರಾದ ಭುವನೇಶ್ವರಿ ಸಿನ್ನೂರ, ಗಾಯತ್ರಿ ಸಿನ್ನೂರ, ದಾನಮ್ಮ ಸಿನ್ನೂರ, ವತ್ಸಲಾ ಸಿನ್ನೂರ, ವಿದ್ಯಾ ಸಪ್ಪಂಡಿ, ಸುನಂದಾ ಮೆದಿಕೇರಿ, ರೂಪಾ ಯರಗಲ್ಲ, ವಿಜಯಾ ಕಾಳಗಿ, ಸುಮಾ ಸಿನ್ನೂರ, ಗಂಗಮ್ಮ ಹುಲಮನಿ, ಶಿಲ್ಪಾ ಸಿನ್ನೂರ, ಸರಸ್ವತಿ ಸಿನ್ನೂರ, ವಿಜಯಲಕ್ಷ್ಮಿ ಕಾಳಗಿ, ಲಕ್ಷ್ಮೀ ಸಿನ್ನೂರ, ರಂಜಿತಾ ಹುಲಮನಿ, ಸವಿತಾ ಸಿನ್ನೂರ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದರು.