ಕುಮಟಾದಲ್ಲಿ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jan 29, 2026, 02:45 AM IST
ಫೋಟೋ : ೨೭ಕೆಎಂಟಿ_ಜೆಎಎನ್_ಕೆಪಿ೧ : ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಚಿತ್ರಗಿ ಗಣಪಯ್ಯ ನಾಯ್ಕರಿಗೆ ಪ್ರದಾನ ಮಾಡಲಾಯಿತು. ರಾಜು ಗುನಗಾ, ಎಂ.ಟಿ.ನಾಯ್ಕ, ಸೂರಜ ನಾಯ್ಕ, ನಾಗರಾಜ ನಾಯಕ, ರಾಮನಾಥ ಶಾನಭಾಗ, ಭಾಸ್ಕರ ಪಟಗಾರ, ರವಿ ನಾಯ್ಕ, ಅಶೋಕ ಗೌಡ, ಡಾ.ಜಿ.ಎಸ್.ಭಟ್, ವೆಂಕಟೇಶ ಹೆಗಡೆ, ನಾಗರಾಜ ಆಚಾರಿ, ಗಣಪತಿ ಹೆಗಡೆ ಇನ್ನಿತರರು ಇದ್ದರು.  | Kannada Prabha

ಸಾರಾಂಶ

ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಯಕ್ಷಗಾನ ವಸ್ತ್ರಾಲಂಕಾರ ನಿಪುಣ ಚಿತ್ರಗಿ ಗಣಪಯ್ಯ ಮಂಜಯ್ಯ ನಾಯ್ಕ, ಕಲಾ ಗಂಗೋತ್ರಿ ಪ್ರಶಸ್ತಿಯನ್ನು ಉದ್ಯಮಿ ಹೆಗಡೆಯ ರಾಮನಾಥ (ಧೀರು) ಶ್ರೀಧರ ಶ್ಯಾನಭಾಗ, ನಿವೃತ್ತ ಎಸಿಎಫ್ ನಾಗರಾಜ ಜಿ. ನಾಯಕ ತೊರ್ಕೆ ಹಾಗೂ ಆದರ್ಶ ಕೃಷಿಕ ತಿಮ್ಮಣ್ಣ ಗೋಪಾಲ ಭಟ್ಟ ಕೂಜಳ್ಳಿ ಇವರಿಗೆ ಪ್ರದಾನ ಮಾಡಲಾಯಿತು.

ಕುಮಟಾ: ಯಕ್ಷಗಾನವು ಒಂದು ದೈವೀಕಲೆಯಾಗಿದ್ದು, ಸಮಾಜಕ್ಕೆ ಪುರಾಣ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕವಾಗಿದೆ ಎಂದು ದೇವರಹಕ್ಕಲ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಜು ಕೃಷ್ಣ ಗುನಗಾ ಹೇಳಿದರು.

ಕಲಾ ಗಂಗೋತ್ರಿ ಆಶ್ರಯದಲ್ಲಿ ಪಟ್ಟಣದಲ್ಲಿ ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ಯಕ್ಷಗಾನ ವೇದಿಕೆಯಲ್ಲಿ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಮತ್ತು ಕಲಾ ಗಂಗೋತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಲಾ ಗಂಗೋತ್ರಿಯ ಅಧ್ಯಕ್ಷ ಎಂ.ಟಿ. ನಾಯ್ಕ, ಕಲಾ ಗಂಗೋತ್ರಿಯ ಯಶಸ್ಸಿನ ಹಿಂದೆ ಕಲಾಭಿಮಾನಿಗಳ ಸಹಕಾರವಿದೆ ಎಂದರು. ಮುಖ್ಯ ಅತಿಥಿ ಹಿರಿಯ ಎಂಜಿನಿಯರ್ ಎಚ್.ಎನ್. ನಾಯ್ಕ, ಯಕ್ಷಗಾನ ಕಲೆಯನ್ನು ಶಾಸ್ತ್ರೋಕ್ತವಾಗಿ ಅಭ್ಯಾಸ ಮಾಡಿದರೆ ಮನೋರಂಜನೆಯೊಟ್ಟಿಗೆ ಮನೋವಿಕಾಸವೂ ಆಗುತ್ತದೆ ಎಂದರು.

ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಭಾಸ್ಕರ ಪಟಗಾರ, ಸಾಮಾಜಿಕ ಕಾರ್ಯಕರ್ತ ಸೂರಜ ನಾಯ್ಕ, ಉದ್ಯಮಿ ಶ್ರೀಧರ ಭಟ್ ಮಾಸ್ತಿಹಳ್ಳ, ಪ್ರಶಸ್ತಿ ಸ್ವೀಕರಿಸಿದ ರಾಮನಾಥ ಶಾನಭಾಗ, ನಾಗರಾಜ ನಾಯಕ ಇತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಶಕ್ತ ಕಲಾವಿದರಿಗೆ ನೀಡಲಾಗುವ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಯಕ್ಷಗಾನ ವಸ್ತ್ರಾಲಂಕಾರ ನಿಪುಣ ಚಿತ್ರಗಿ ಗಣಪಯ್ಯ ಮಂಜಯ್ಯ ನಾಯ್ಕ, ಕಲಾ ಗಂಗೋತ್ರಿ ಪ್ರಶಸ್ತಿಯನ್ನು ಉದ್ಯಮಿ ಹೆಗಡೆಯ ರಾಮನಾಥ (ಧೀರು) ಶ್ರೀಧರ ಶ್ಯಾನಭಾಗ, ನಿವೃತ್ತ ಎಸಿಎಫ್ ನಾಗರಾಜ ಜಿ. ನಾಯಕ ತೊರ್ಕೆ ಹಾಗೂ ಆದರ್ಶ ಕೃಷಿಕ ತಿಮ್ಮಣ್ಣ ಗೋಪಾಲ ಭಟ್ಟ ಕೂಜಳ್ಳಿ ಇವರಿಗೆ ಪ್ರದಾನ ಮಾಡಲಾಯಿತು.

ಇತ್ತೀಚೆಗೆ ನಿಧನರಾದ ಕಲಾ ಗಂಗೋತ್ರಿಯ ಸಂಸ್ಥಾಪಕ ಸದಸ್ಯ ಶ್ರೀಪತಿ ನಾವುಡ ಹಾಗೂ ಅನಂತ ಅಡಿ ಅವರಿಗೆ ಸದ್ಗತಿ ಕೋರಲಾಯಿತು. ವೇದಿಕೆಯಲ್ಲಿ ದಿ. ದುರ್ಗದಾಸ ಗಂಗೊಳ್ಳಿ ಕುಟುಂಬದ ಕೃಷ್ಣರಾಜ ಗಂಗೊಳ್ಳಿ, ಕಲಾ ಗಂಗೋತ್ರಿಯ ರವಿ ನಾಯ್ಕ, ಅಶೋಕ ಗೌಡ, ಡಾ. ಜಿ.ಎಸ್. ಭಟ್, ವೆಂಕಟೇಶ ಹೆಗಡೆ, ನಾಗರಾಜ ಆಚಾರಿ, ಗಣಪತಿ ಹೆಗಡೆ ಇತರರಿದ್ದರು.

ಡಾ. ಎಂ.ಆರ್. ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಸಂತ ಪಂಡಿತ ಸನ್ಮಾನ ಪತ್ರ ವಾಚಿಸಿದರು. ಗಣೇಶ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಕಲಾಗಂಗೋತ್ರಿಯ ಗೌರವಾಧ್ಯಕ್ಷ ಶ್ರೀಧರ ನಾಯ್ಕ ವಂದಿಸಿದರು. ಆನಂತರ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಹರಿ ಶೃಂಗಾರ ಮತ್ತು ಮೋಹ ಮೇನಕಾ ಎಂಬ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ತೂರು ಬಸಿಲಿಕಾ ಮಹೋತ್ಸವ: ಹರಿದು ಬಂದ ಭಕ್ತಸಾಗರ
ಕಬಡ್ಡಿ ಶಕ್ತಿ, ಯುಕ್ತಿಯಿಂದ ಆಡುವ ಆಟ: ಡಾ. ಅನ್ನದಾನೀಶ್ವರ ಸ್ವಾಮೀಜಿ