ದಸರಾ ಹಿಂದೂಗಳ ಭಾವೈಕ್ಯತೆಯ ಹಬ್ಬ: ಗುರುನಾಥ

KannadaprabhaNewsNetwork |  
Published : Sep 30, 2024, 01:20 AM IST
ಪತ್ರಿಕಾಗೋಷ್ಠಿಯಲ್ಲಿ ಗುರುನಾಥ ದಾನಪ್ಪನವರ ಮಾತನಾಡಿದರು. | Kannada Prabha

ಸಾರಾಂಶ

ಅ. 3 ರಿಂದ 11 ರವರೆಗೆ 9 ದಿನಗಳ ಕಾಲ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ

ಲಕ್ಷ್ಮೇಶ್ವರ: ದಸರಾ ನಮ್ಮೆಲ್ಲ ಹಿಂದು ಬಾಂಧವರಿಗೆ ಭಾವೈಕ್ಯತೆಯ ಹಬ್ಬವಾಗಿದ್ದು, ಇದಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ, ಇಂತಹ ಸಂಪ್ರದಾಯ ಬದ್ಧ ದಸರಾ ಹಬ್ಬವನ್ನು ದುರ್ಗಾದೌಡ ಎನ್ನುವ ವಿಶಿಷ್ಟ ಕಾರ್ಯಕ್ರಮ ಕಳೆದ ಎರಡು ವರ್ಷಗಳಿಂದ ಪಟ್ಟಣದ ಜನತೆ ಸಹಕಾರದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಇದೀಗ 3ನೇ ವರ್ಷದ ಕಾರ್ಯಕ್ರಮವು ಅ. 3 ರಿಂದ 11 ರವರೆಗೆ 9 ದಿನಗಳ ಕಾಲ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ದಸರಾ ಉತ್ಸವ ಸಮಿತಿಯ ರೂವಾರಿ ಗುರುನಾಥ ದಾನಪ್ಪನವರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ನಮ್ಮೆಲ್ಲ ಹಿಂದೂ ಬಾಂಧವರಿಗೆ ಭಾವೈಕ್ಯತೆಯ ಹಬ್ಬವಾಗಿದ್ದು, ಇದಕ್ಕೆ ತನ್ನದೆ ಆದ ಇತಿಹಾಸ ಪರಂಪರೆ ಇದೆ ಇಂತಹ ಸಂಪ್ರದಾಯಬದ್ಧ ದಸರಾ ಹಬ್ಬವನ್ನು ದುರ್ಗಾದೌಡ ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ಪಟ್ಟಣದಲ್ಲಿ ಆಚರಿಸುತಿರುವದಕ್ಕೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡು ವರ್ಷಗಳ ಕಾಲ ಯಶಸ್ವಿಯಾಗಿ ನಡೆದಿದ್ದು, ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವ, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆ ಉಳಿಯಬೇಕು ಎನ್ನುವ ಉದ್ದೇಶವು ಈ ಕಾರ್ಯಕ್ರಮದ್ದಾಗಿದೆ. ಧರ್ಮ ಜಾಗೃತಿ ಎಲ್ಲ ಧರ್ಮದಲ್ಲಿ ಇರುವಂತೆ ನಮ್ಮಲ್ಲಿಯೂ ಜಾಗೃತಿ ಮೂಡಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ. ಪಟ್ಟಣದಲ್ಲಿ ಎಲ್ಲ ಮುಖಂಡರು ಪ್ರೋತ್ಸಾಹ ಸಹಕಾರವನ್ನು ಈ ಕಾರ್ಯಕ್ರಮಕ್ಕೆ ನೀಡುತ್ತಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸುವಂತೆ ಮನವಿ ಮಾಡುವದಾಗಿ ತಿಳಿಸಿದರು.

ಸಮಿತಿಯ ಮುಖಂಡ ಬಸವರಾಜ ಅರಳಿ ಮಾತನಾಡಿ, ಪಟ್ಟಣದ ದಸರಾ ಉತ್ಸವ ಸಮಿತಿ ವತಿಯಿಂದ ದುರ್ಗಾದೌಡ ಕಾರ್ಯಕ್ರಮ ಅ. 3 ರಿಂದ 11 ವರೆಗೂ ನಡೆಯಲಿದೆ. ಅ.3 ಗುರುವಾರ ಬೆಳಗ್ಗೆ 5ಕ್ಕೆ ಗ್ರಾಮದೇವತೆ ದ್ಯಾಮವ್ವ ದೇವಸ್ಥಾನದಿಂದ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಸ್ವಾಮಿಗಳ ಸಾನ್ನಿಧ್ಯದಲ್ಲಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು. ದುರ್ಗಾದೌಡ ಕಾರ್ಯಕ್ರಮದ ರೂವಾರಿ ಗುರುನಾಥ ದಾನಪ್ಪನವರ ನೇತೃತ್ವ ವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ದೇವೆಂದ್ರಪ್ಪ ಗಡೇದ, ಮಲ್ಲನಗೌಡ ಪಾಟೀಲ, ತಿಪ್ಪಣ್ಣ ಸಂಶಿ, ಯಲ್ಲಪ್ಪ ಕೋರದಾಳ, ರಾಜಶೇಖರ ಶಿಗ್ಲಿಮಠ, ರಾಘವೇಂದ್ರ ಪೂಜಾರ, ರವಿ ಲಿಂಗಶೆಟ್ಟಿ, ನಾಗರತ್ನ ನಾಗಲೋಟಿ, ಮಲ್ಲವ್ವ ಜಡಿ, ಚಿನ್ನಮ್ಮ ಮಡಿವಾಳರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್