ರಾಜೇಂದ್ರಶ್ರೀಗಳ ಅರ್ಥಪೂರ್ಣ ಜಯಂತಿಗೆ ನನ್ನ ಸಂಪೂರ್ಣ ಸಹಕಾರ: ಕೃಷ್ಣಮೂರ್ತಿ

KannadaprabhaNewsNetwork |  
Published : Sep 30, 2024, 01:20 AM IST
ರಾಜೇಂದ್ರ ಶ್ರೀಗಳ ಅಥ೯ಪೂಣ೯ ಜಯಂತಿಗೆ ನನ್ನ ಸಂಪೂಣ೯ ಸಹಕಾರ- ಎ.ಆರ್. ಕೃ ಷ್ಣಮೂತಿ೯ | Kannada Prabha

ಸಾರಾಂಶ

ಚಾಮರಾಜನಗರ: ಸುತ್ತೂರು ಶ್ರೀ ಶಿವರಾತ್ರಿರಾಜೇಂದ್ರ ಶ್ರೀಗಳು ದಾಸೋಹ ಮತ್ತು ಶಿಕ್ಷಣಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಂತಹ ದಾರ್ಶನಿಕರ ಜಯಂತಿಯನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ನಡೆಸಲು ಎಲ್ಲರೂ ಮುಂದಾಗೋಣ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಚಾಮರಾಜನಗರ: ಸುತ್ತೂರು ಶ್ರೀ ಶಿವರಾತ್ರಿರಾಜೇಂದ್ರ ಶ್ರೀಗಳು ದಾಸೋಹ ಮತ್ತು ಶಿಕ್ಷಣಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಂತಹ ದಾರ್ಶನಿಕರ ಜಯಂತಿಯನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ನಡೆಸಲು ಎಲ್ಲರೂ ಮುಂದಾಗೋಣ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ಚಾ.ನಗರ ಜಿಲ್ಲೆ ಕೊಳ್ಳೇಗಾಲದ ಜೆಎಸ್ಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶ್ರೀಗಳವರ 109ನೇ ಜಯಂತಿಗೆ ನನ್ನ ಸಂಪೂರ್ಣ ಸಹಕಾರವಿದೆ. ಅವರ ಜಯಂತಿ ಆಚರಣೆ ಜೊತೆಗೆ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಅವರ ದಾಸೋಹ ಪರಿಕಲ್ಪನೆ, ಶಿಕ್ಷಣ ಕ್ರಾಂತಿ ಇಂದಿನ ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದರು.ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಆಚರಣೆ ಜೊತೆಗೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಬಡವರು, ಅವರು ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಧೀಮಂತರು. ಅಂತಹವರ ಜಯಂತಿ ವೇಳೆ ನಾನೂ ಪಾಲ್ಗೊಳ್ಳುವ ಜೊತೆ ಯಶಸ್ವಿಗಾಗಿ ಸಹಕಾರ ನೀಡುವೆ ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ರಾಜೇಂದ್ರ ಶ್ರೀಗಳ ತತ್ವಾದರ್ಶಗಳನ್ನು ಎಲ್ಲರು ಅರ್ಥೈಸಿಕೊಂಡು ಅವರ ಕಾಯಕ ನಿಷ್ಠೆ, ಶೈಕ್ಷಣಿಕ ಕ್ರಾಂತಿಗೆ ಪಟ್ಟ ಶ್ರಮವನ್ನು ಅರಿಯಬೇಕಿದೆ. ನಿಜಕ್ಕೂ ಅವರಂತಹ ಪುಣ್ಯ ಪುರುಷರ ಜಯಂತಿಯನ್ನು ಕೊಳ್ಳೇಗಾಲದಲ್ಲಿ ಆಯೋಜಿಸಿರುವುದು ಹೆಮ್ಮೆಯ ಮತ್ತು ಪುಣ್ಯದ ಕೆಲಸ, ಇದರಲ್ಲಿ ನಾನು ಪಾಲ್ಗೊಂಡು ಯಶಸ್ವಿಗೆ ಸಹಕರಿಸುವುದಾಗಿ ಹೇಳಿದರು.ಈ ವೇಳೆ ಸಭೆಯ ಸಾನ್ನಿಧ್ಯ ವಹಿಸಿದ್ದ ಮ.ಬೆಟ್ಟ ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ರಾಜೇಂದ್ರ ಶ್ರೀಗಳ ಜಯಂತಿ ಯಶಸ್ವಿಗೆ ಎಲ್ಲರೂ ಕೈಜೋಡಿಸಿಬೇಕು ಎಂದರು. ಈ ವೇಳೆ ಮುಡಿಗುಂಡ ಮಠಾಧ್ಯಕ್ಷ ಶ್ರೀಕಂಠಸ್ವಾಮೀಜಿ, ಕುಂತೂರು ಮಠದ ಶಿವಪ್ರಭುಸ್ವಾಮೀಜಿ, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಜಿ.ಎನ್.ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್, ಹನೂರು ಕ್ಷೇತ್ರದ ಯುವ ಮುಖಂಡ ನಿಶಾಂತ್, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಉದ್ಯಮಿ ವೀರಮಾದು, ಪೊನ್ನಾಚಿ ಮಹದೇವಸ್ವಾಮಿ ಇನ್ನಿತರರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌