ದಸರಾ ರಜೆ: ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್...!

KannadaprabhaNewsNetwork |  
Published : Oct 03, 2025, 01:07 AM IST
ಚಿಕ್ಕಮಗಳೂರಿನ ಗಿರಿ ಪ್ರದೇಶಕ್ಕೆ ತೆರಳಲು ಸಾಲುಗಟ್ಟಿ ನಿಂತಿರುವ ಪ್ರವಾಸಿಗರ ವಾಹನಗಳು. | Kannada Prabha

ಸಾರಾಂಶ

ಚಿಕ್ಕಮಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ರಜೆ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿಗೆ ಭಾರೀ ಪ್ರವಾಸಿಗರ ಆಗಮನದಿಂದ ಮುಳ್ಳನಗಿರಿ ಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಚಿಕ್ಕಮಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ರಜೆ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿಗೆ ಭಾರೀ ಪ್ರವಾಸಿಗರ ಆಗಮನದಿಂದ ಮುಳ್ಳನಗಿರಿ ಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ಭಾಗಕ್ಕೆ ಭಾರೀ ಪ್ರವಾಸಿಗರು ಆಗಮಿಸಿದ್ದರಿಂದ ಪ್ರವಾಸಿಗರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಮುಳ್ಳಯ್ಯನಗಿರಿ ಭಾಗಕ್ಕೆ ನಿತ್ಯ1200 ವಾಹನಗಳಿಗೆ ಮಾತ್ರ ಅವಕಾಶ. ಬೆಳಗ್ಗೆ 600 ಹಾಗೂ ಮಧ್ಯಾಹ್ನ 600 ವಾಹನಗಳಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಮುಳ್ಳಯ್ಯನಗಿರಿ ಭಾಗಕ್ಕೆ ಭಾರೀ ವಾಹನಗಳು ಆಗಮಿಸಿದ ಪರಿಣಾಮ ಸುಮಾರು 4-5 ಕಿ.ಮೀ. ಟ್ರಾಫಿಕ್ ಜಾಮ್ ಆಗಿ ಪ್ರವಾಸಿಗರು ಪರದಾಡುವಂತಾಗಿತ್ತು.

ಮುಳ್ಳಯ್ಯನಗಿರಿ ಮಾರ್ಗದ ಚೆಕ್ ಪೋಸ್ಟ್ ಎನ್ಎಂಡಿಸಿ ಬಳಿಯಿಂದ ಅಲ್ಲಂಪುರ ಗ್ರಾಮದವರೆಗೂ ವಾಹನಗಳು ಸರದಿ ಸಾಲಿನಲ್ಲಿ ಸಾಲುಗಟ್ಟಿ ನಿಂತಿದ್ದವು. ಮಳೆ ಮಧ್ಯೆ ಗಿರಿ ಭಾಗದಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆ, ಯಾವುದೇ ಅಪಘಾತ ಸಂಭವಿಸಬಾರದೆಂದು ಪೊಲೀಸರು ಗಿರಿ ಭಾಗಕ್ಕೆ ಹೋಗಿದ್ದ ವಾಹನಗಳು ಕೆಳಗೆ ಬಂದ ಮೇಲೆ ಬೇರೆ ವಾಹನಗಳನ್ನು ಬಿಡಲು ಮುಂದಾಗಿದ್ದರು. ಆದರೆ, ಮೇಲಿಂದ ಮೇಲೆ ಬರುತ್ತಿದ್ದ ವಾಹನಗಳನ್ನ ನಿಯಂತ್ರಿಸಲು ಪೊಲೀಸರು ಹಾಗೂ ಚೆಕ್ ಪೋಸ್ಟ್ ಸಿಬ್ಬಂದಿ ಪರದಾಡಿದರು. ಒಂದೆಡೆ ಜಿಟಿ ಜಿಟಿ ಮಳೆ. ಮತ್ತೊಂದೆಡೆ ಭಾರೀ ವಾಹನಗಳಿಂದ ಪೊಲೀಸರು ಹೈರಾಣಾಗಿದ್ದಾರೆ. 2 ಕೆಸಿಕೆಎಂ 3ಚಿಕ್ಕಮಗಳೂರಿನ ಗಿರಿ ಪ್ರದೇಶಕ್ಕೆ ತೆರಳಲು ಸಾಲುಗಟ್ಟಿ ನಿಂತಿರುವ ಪ್ರವಾಸಿಗರ ವಾಹನಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ