ಹಿರೇಕೆರೂರು:ಹೈನುಗಾರಿಕೆಯನ್ನು ಒಂದು ಉಪ ಕಸಬಾಗಿ ಮಾಡುವುದರಿಂದ ಆರ್ಥಿಕ ಲಾಭದ ಜೊತೆಗೆ ಹೆಚ್ಚುವರಿ ಆದಾಯ ಗಳಿಸಬಹುದು. ಇದಕ್ಕೆ ಸರ್ಕಾರದಿಂದ ವಿವಿಧ ಯೋಜನೆಗಳು ಲಭ್ಯವಿವೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯಲ್ಲಿ ಹೆಂಗಸರು ಅತೀ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ ಎಂದು ಕಸಬು ಯಶಸ್ವಿಯಾಗಿ ನಡೆಸಲು, ಹೈನುಗಾರಿಕೆಗೆ ಸಂಬಂಧಿಸಿದಂತೆ, ಉಪ ಕಸಬುಗಳನ್ನು ಸಹ ಆರಿಸಿಕೊಳ್ಳಬಹುದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.ರೈತರು ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಖರೀದಿಸುವ ವ್ಯಾಪಾರಿ ಬೆಲೆ ನಿಗದಿ ಮಾಡುವಂತಾಗಿರುವುದು ದುರಂತ, ಇದು ಸರಿಹೋಗಲು ರೈತರು ಆರ್ಥಿಕವಾಗಿ ಸದೃಢರಾಗಬೇಕು ಅದಕ್ಕಾಗಿ ಉಪ ಕಸುಬುಗಳನ್ನು ಅವಲಂಬಿಸಬೇಕು. ರೈತರು ಆರ್ಥಿಕವಾಗಿ ಸದೃಢವಾಗದ ಹೊರತೂ ಅಭಿವೃದ್ಧಿ ಸಾಧ್ಯ ಇಲ್ಲ. ಇಂದು ರೈತರಿಗೆ ಆಶಾದಾಯಕ ಕಸುಬು ಎಂದರೆ ಅದು ಹೈನುಗಾರಿಕೆ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಹಾಯ ಇದೆ. ಹೈನುಗಾರಿಕೆ ಮತ್ತು ಇತರ ಉಪ ಕಸಬುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು. ಹೈನುಗಾರಿಕೆಯ ಜೊತೆಗೆ ಕುರಿ ಅಥವಾ ಮೇಕೆ ಸಾಕಾಣಿಕೆ ಮಾಡುವುದು ಇನ್ನೊಂದು ಲಾಭದಾಯಕ ಉಪ ಕಸಬು. ಕೋಳಿ ಸಾಕಾಣಿಕೆಯ ಮೂಲಕ ಮೊಟ್ಟೆ ಮತ್ತು ಮಾಂಸದ ಆದಾಯ ಪಡೆಯಬಹುದು. ಹೈನುಗಾರಿಕೆ, ರೈತರಿಗೆ ಕುರಿ-ಮೇಕೆ, ಹಂದಿ ಸಾಕಾಣಿಕೆ ಘಟಕಗಳ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನ ಲಭ್ಯವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು.ತಾಲೂಕಿಗೆ ಅವಶ್ಯಕತೆಗೆ ಅನುಗುಣವಾಗಿ ಬೇಕಾಗಿರುವ ಪಶು ಆಸ್ಪತ್ರೆ ಮಂಜೂರಿ ಹಾಗೂ ಆಸ್ಪತ್ರೆ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಸರಕಾರದಿಂದ ನೀಡಲಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಎಲ್ಲ ಇಲಾಖೇಗಳ ಅಭಿವೃದ್ಧಿಗಾಗಿ ಅನುದಾನ ನೀಡುವ ಮೂಲಕ ರಾಜ್ಯವನ್ನು ಸಮಗ್ರ ಅಭಿವೃದ್ಧಿಯತ್ತ ಸಾಗುವತ್ತ ಆಡಳಿತ ಮಾಡುತ್ತಿದ್ದಾರೆ. ಟೀಕೆಗಳು ಬರುವುದು ಸಹಜ ಆದರೆ ಇಂದು ರಾಜ್ಯ ಅಭಿವೃದ್ಧಿಯತ್ತ ಸಾಗುತ್ತದೆ ಎಂಬುದು ರಾಜ್ಯದ ಜನತೆಗೆ ಗೊತ್ತು. ಹಿರೇಕೆರೂರ ಪಶು ಆಸ್ಪತ್ರೆಗೆ ವೈದ್ಯರ ಸಂಚಾರಕ್ಕೆ ವಾಹನ ಬೇಕು ಎಂಬ ಬೇಡಿಕೆ ಇಟ್ಟದ್ದು ಇನ್ನೆರಡು ತಿಂಗಳಲ್ಲಿ ವಾಹನ ವ್ಯವಸ್ಥೆ ಮಾಡಲಾಗುವುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಕಿರಣ ಎಲ್. ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದೆ. ಆರ್ಥಿಕ ಸಾಮಾಜಿಕ ಬಲವರ್ಧನೆಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸಹಾಯಧನದಲ್ಲಿ ಮ್ಯಾಟ್, ಮೇವು ಕತ್ತರಿಸುವ ಯಂತ್ರ ನೀಡಲಾಗುತ್ತಿದೆ. ಜನತೆ ಸದುಪಯೋಗ ಪಡಿಸಿಕೊಳ್ಳಬೇಕು. ಶಾಸಕರ ಪ್ರಯತ್ನದಿಂದ ಹೊಸ ಪಶುಚಿಕಿತ್ಸಾಲಯ, ಹೊಸ ಕಟ್ಟಡಗಳು ಮಂಜೂರು ಮಾಡಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ರಮೇಶ ಮಡಿವಾಳರ, ಸನಾವುಲ್ಲಾ ಮಕಾನ್ದಾರ, ಷಣ್ಮುಖಯ್ಯ ಮಳಿಮಠ, ಸಿದ್ದು ತಂಬಾಕದ, ವೀರನಗೌಡ ಬಿದರಿ, ಬಿದ್ದಾಡೆಪ್ಪ ಅರಳಿಕಟ್ಟಿ, ನಾಸೀರ, ಮಂಜು , ದ್ಯಾಮನಗೌಡ ಕಡೂರ, ವೈದ್ಯರಾದ ಹಾಲೇಶ ನಾಯಕ, ಮಾಯಾಚಾರಿ, ಶ್ರಾವ್ಯ, ನವೀನ ಹಿರೇಕೆರೂರ, ಪ್ರವೀಣ ಮರಿಗೌಡ್ರ ಸೇರಿದಂತೆ ಪಶು ಇಲಾಖೆ ಸಿಬ್ಬಂದಿ ಇದ್ದರು.