ಕನ್ನಡ ಪ್ರಭ ವಾರ್ತೆ ಮುಧೋಳ
ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಉದ್ಯಮಿ, ಸಿವಿಲ್ ಎಂಜಿನಿಯರ್ ಮಿಲಿಂದ್ ಬಕ್ಷಿ ಮಾತನಾಡಿ, ಬ್ರಾಹ್ಮಣ ಸಮಾಜವನ್ನು ಎಲ್ಲರೂ ರಾಜಕೀಯವಾಗಿ, ಸಂವಿಧಾನದ ಹೆಸರು ಹೇಳಿ ಕಾನೂನಾತ್ಮಕವಾಗಿ ತುಳಿಯಬಹುದು. ಆದರೆ ನಮ್ಮಲ್ಲಿರುವ ವಿದ್ಯೆಯನ್ನು ಕಸಿದುಕೊಳ್ಳಲಾಗದು, ಬ್ರಾಹ್ಮಣರ ಯುಕ್ತಿಯನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದು, ಅದಕ್ಕೆ ನಿಮ್ಮ ಶಕ್ತಿಯನ್ನು ವ್ಯರ್ಥ ಹಾಳು ಮಾಡದೆ ಒಗ್ಗಟ್ಟಿನಿಂದ ಇರಬೇಕೆಂದು ಹೇಳಿದರು.
ಅಣ್ಣಾರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಸೋನಪ್ಪಿ ಕುಲಕರ್ಣಿ, ಸಧರ್ಮ ಮಂಡಳ ಅಧ್ಯಕ್ಷ ಪಿ.ಎಂ. ದೇಶಪಾಂಡೆ, ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಬಿ.ಎಲ್. ಬಬಲಾದಿ ವೇದಿಕೆ ಮೇಲೆ ಉಪಸ್ಥಿತರಿದ್ದು, ಸಾಂದರ್ಭಿಕವಾಗಿ ಮಾತನಾಡಿದರು.ನಾಗರಾಜ ಝುಂಜರವಾಡ, ಸಂಜೀವ ಮೋಕಾಶಿ ವೇದಘೋಷ ಮಾಡಿದರು. ಶುಭಾ ಮೋಕಾಶಿ ಸ್ವಾಗತ ಗೀತೆ ಹೇಳಿದರು, ಬ್ರಾಹ್ಮಣ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದೆ ಸುಮಾರು 20 ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮಾಜದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಆಕ್ಷಯ ಕುಲಕರ್ಣಿ ಸ್ವಾಗತಿಸಿ ಪರಿಚಯಿಸಿದರು, ಸುನಿತಾ ದೇಶಪಾಂಡೆ ನಿರೂಪಿಸಿದರು, ಆಕಾಶ ಮನಗೂಳಿ ವಂದಿಸಿದರು.