ಆರೋಗ್ಯವಂತ ಸಮಾಜ ಕಟ್ಟಲು ಶಿಕ್ಷಣ ಅತಿಮುಖ್ಯ

KannadaprabhaNewsNetwork | Published : Feb 26, 2025 1:02 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪೋಷಕರು ಮತ್ತು ಶಿಕ್ಷಕರು ಬಾಲ್ಯದಿಂದಲೇ ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಿ ಪ್ರೋತ್ಸಾಹ ನೀಡಿದರೆ ದೇಶಕ್ಕೆ ಆಸ್ತಿಯಾಗಲಿದ್ದಾರೆ. ಸಂಸ್ಕಾರವಂತ, ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಶಾಲೆಗಳು ಪ್ರಧಾನ ಪಾತ್ರವಹಿಸಲಿವೆ. ಇಂದು ಮಕ್ಕಳಿಗೆ ದೇಶಾಭಿಮಾನ ಮಾನವಿಯ ಮೌಲ್ಯಗಳುಳ್ಳ ಸಂಸ್ಕಾರ ನೀಡುವುದು ಅಗತ್ಯವಾಗಿದೆ ಎಂದು ಕೂಡಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಜಾಲವಾದಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪೋಷಕರು ಮತ್ತು ಶಿಕ್ಷಕರು ಬಾಲ್ಯದಿಂದಲೇ ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಿ ಪ್ರೋತ್ಸಾಹ ನೀಡಿದರೆ ದೇಶಕ್ಕೆ ಆಸ್ತಿಯಾಗಲಿದ್ದಾರೆ. ಸಂಸ್ಕಾರವಂತ, ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಶಾಲೆಗಳು ಪ್ರಧಾನ ಪಾತ್ರವಹಿಸಲಿವೆ. ಇಂದು ಮಕ್ಕಳಿಗೆ ದೇಶಾಭಿಮಾನ ಮಾನವಿಯ ಮೌಲ್ಯಗಳುಳ್ಳ ಸಂಸ್ಕಾರ ನೀಡುವುದು ಅಗತ್ಯವಾಗಿದೆ ಎಂದು ಕೂಡಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಜಾಲವಾದಿ ಅಭಿಪ್ರಾಯಪಟ್ಟರು.ಪಟ್ಟಣದ ಅಹಿಲ್ಯಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಭ್ಯುದಯ ಇಂಟರ್ನಾಷನಲ್‌ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕೋತ್ಸವ ಹಾಗೂ ಅಹಿಲ್ಯಾ ಹೋಳ್ಕರ ಕಲಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಎಲ್ಲಾ ಮಕ್ಕಳ ಬುದ್ಧಿಶಕ್ತಿ ಸಮಾನವಾಗಿರುತ್ತದೆ. ಶಿಕ್ಷಕರು-ಪಾಲಕರು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿಸಿ. ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಪೋಷಕರು ಶ್ರಮಿಸಬೇಕು ಎಂದು ಹೇಳಿದರು.ಆಧುನಿಕ ತಂತ್ರಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಮೊಬೈಲ್‌ ಗೀಳಿಗೆ ಅಂಟಿಕೊಳ್ಳದೇ ಸದಾ ಓದಿನ ಕಡೆ ಗಮನ ಹರಿಸಬೇಕು. ಹೆತ್ತವರ, ವಿದ್ಯ ಕಲಿಸಿದ ಗುರುಗಳ ಕೀರ್ತಿ ತರುವಂತವರಾದಾಗ ಮಾತ್ರ ವಿದ್ಯಾರ್ಥಿ ಜೀವನ ಯಶಸ್ವಿಯಾಗಲಿದೆ. ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ ತೆರದು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಸಂಸ್ಥೆಯ ಕಾರ್ಯದರ್ಶ ಮಲ್ಲಿಕಾರ್ಜು ಮದರಿಯವರ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಬಣ್ಣಿಸಿದರು.ಈ ವೇಳೆ ಅಹಿಲ್ಯಾದೇವಿ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಮಾತನಾಡಿ, ರಾಣಿ ಅಹಿಲ್ಯಾದೇವಿ ಹೆಸರಲ್ಲಿ ನಾಲ್ಕು ವರ್ಷದಿಂದ ಶಿಕ್ಷಣ ಸಂಸ್ಥೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಪ್ರತಿಭೆ ಗುರ್ತಿಸುವ ಪ್ರಯತ್ನ ನಡೆಸುತ್ತಿದೆ. ಅಹಿಲ್ಯಾದೇವಿ ಸಾಮಾಜಿಕ ಜಾತ್ಯಾತೀತ ಮನೋಭಾವ, ಸಮಾನತೆಯ ಜೀವನ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಅಹಿಲ್ಯಾದೇವಿ ಕಲಾ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.ಈ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯಗಳ ಮೂಲಕ ಪೋಷಕರಿಗೆ ಮನರಂಜನೆ ನೀಡಿದರು. ಈ ಸಂದರ್ಭದಲ್ಲಿ ಅಹಿಲ್ಯಾದೇವಿ ರೂಪಕ ದೃಶ್ಯ ಎಲ್ಲರ ಗಮನ ಸೆಳೆಯಿತು. ವಿವಿಧ ನೃತ್ಯಗಳಿಂದ ಹಾಗೂ ಅಭಿನಯ ಕಾರ್ಯಕ್ರಮಗಳನ್ನು ನೋಡಿ ಪೋಷಕರು ಹಾಗೂ ಸಾರ್ವಜನಿಕರು ಸಂತಸ ಪಟ್ಟರು. ಈ ವೇಳೆ ಸರೂರ ರೇವಣಸಿದ್ದೇಶ್ವರ ಹಾಲುಮತ ಗುರುಪೀಠದ ಶಿವಯ್ಯ ಗುರುಸಿದ್ದಯ್ಯಾ ಗುರುವಿನ ಸಾನಿಧ್ಯ ವಹಿಸಿದ್ದರು.

ವಾಣಿಜ್ಯ ತೆರಿಗೆ ಇಲಾಖೆ ಸಂತೋಷ ಗೋಲಾಯಿ, ಶ್ರೀದೇವಿ ಮದರಿ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗುರಲಿಂಗಪ್ಪಗೌಡ ಪಾಟೀಲ, ನಿಂಗಪ್ಪ ಚೆಟ್ಟೆರ, ವಿಜಯಲಕ್ಷ್ಮೀ ಬೂದಿಹಾಳಮಠ, ಶ್ರೀಕಾಂತ ಚಲವಾದಿ. ಶ್ರೀಶೈಲ ಪೂಜಾರಿ, ನಾಗಭೂಷಣ ನಾವದಗಿ, ರವಿ ಜಗಲಿ, ಕಿರಣ ಮದರಿ, ಬಸವರಾಜ ಗೂಡಲಮನಿ, ರವಿ ಗೂಳಿ, ಆಡಳಿತಾಧಿಕಾರಿ, ಬಿ.ಜಿ.ಬಿರಾದಾರ, ಪ್ರಾಂಶುಪಾಲ ಹಣಮಂತ ಜಾಯವಾಡಗಿ ಸೇರಿದಂತೆ ಹಲವರು ಇದ್ದರು.

Share this article