ಮುಂಡರಗಿ: ಪ್ರತಿಯೊಬ್ಬರ ಜೀವನದಲ್ಲಿ ಏನನ್ನಾದರೂ ಮಹತ್ತರವಾದ ಸಾಧನೆ ಮಾಡಲು ಹಾಗೂ ಉನ್ನತ ಸ್ಥಾನಕ್ಕೇರಿ ಬದಲಾವಣೆ ಕಾಣುವುದಕ್ಕೆ ಶಿಕ್ಷಣ ತುಂಬಾ ಅಗತ್ಯ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ತಿಳಿಸಿದರು.
ಮಕ್ಕಳು ಶಿಕ್ಷಣವಂತರಾಗುವ ಜತೆಗೆ ಜೀವನದಲ್ಲಿ ಸಾಧನೆ ಮಾಡುವ ಛಲ, ಗುರಿ ಹೊಂದಬೇಕು. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂಬ ಸಲಹೆ ಚಿಕ್ಕ ಮಕ್ಕಳ ತಜ್ಞ ಡಾ. ಗೋಣೇಶ ಮೇವುಂಡಿ, ಪತ್ರಕರ್ತ ಸಂತೋಷಕುಮಾರ ಮುರುಡಿ ಅವರಿಂದ ಬಂತು.
ಸಾನ್ನಿಧ್ಯ ವಹಿಸಿದ್ದ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಜಗತ್ತಿನ ತುಂಬಾ ನಾರಿಶಕ್ತಿಯು ತುಂಬಾ ಪರಿಣಾಮ ಬೀರುತ್ತಿದೆ. ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಸಹ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆ ಧೈರ್ಯವಂತರಾಗಿ ಜೀವನದಲ್ಲಿ ಸಾಧನೆ ಹಾದಿಯಲ್ಲಿ ಸಾಗಬೇಕು. ಹೆಣ್ಣುಮಕ್ಕಳು ಶಿಸ್ತು ಹೊಂದಿ ಉತ್ತಮ ಸಾಧನೆ ಮಾಡಬೇಕು ಎಂದರು.ಶ್ರೇಯಸ್ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ತಿಪ್ಪೇಸ್ವಾಮಿ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಪತ್ರಕರ್ತ ಸಂತೋಷಕುಮಾರ ಮುರುಡಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸೌಭಾಗ್ಯಲಕ್ಷ್ಮಿ ಹೊಸಮನಿ, ಮುಖ್ಯಶಿಕ್ಷಕಿ ಸೌಭಾಗ್ಯ ಜತ್ತಿ, ನಿವೃತ್ತ ಉಪನ್ಯಾಸಕ ಬಿ.ಬಿ. ಕುರಗುಂದ, ನಿವೃತ್ತ ಮುಖ್ಯಶಿಕ್ಷಕ ರುದ್ರಪ್ಪ ತಳವಾರ ಉಪಸ್ಥಿತರಿದ್ದರು. ಅಶ್ವಿನಿ ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಚೈತ್ರಾ ಕುರಡಗಿ ಸ್ವಾಗತಿಸಿದರು. ಚೇತನಾ ರೋಹಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ಮತ್ತಾಳಿ ವಂದಿಸಿದರು.