ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಚಿತ ಟ್ಯಾಕ್ಸ್ ಫಾರ್ಮ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಕಾಲಕ್ಕೆ ಶಿಕ್ಷಕರು ತಮ್ಮ ಆದಾಯ ತೆರಿಗೆ ನಮೂನೆ ಭರ್ತಿ ಮಾಡಿ ಕೊಡಬೇಕು ಎಂದು ಹೇಳಿದರು.
ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಬೇವನೂರ ಮಾತನಾಡಿ, ಸಂಘವು ಶಿಕ್ಷಕರ ಏಳಿಗೆಗಾಗಿ ಶ್ರಮಿಸುತ್ತಿದ್ದು ನಾವೆಲ್ಲರೂ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಪ್ರಗತಿ ಪಥದತ್ತ ಕೊಂಡೊಯ್ಯೋಣ ಎಂದರು. ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಮಾತನಾಡಿ, ಸಂಘದ ಸಾಧನೆ ಹಾಗೂ ಕಾರ್ಯ ಚಟುವಟಿಕೆ ತಿಳಿಸಿದರು.ಈ ವೇಳೆ ಕ್ಯಾಲೆಂಡರ್ ಬಿಡುಗಡೆ ಮಾಡಿ ಶಿಕ್ಷಕರಿಗೆ ಆದಾಯ ತೆರಿಗೆ ನಮೂನೆ ನೀಡಲಾಯಿತು. ಸಂಘಕ್ಕೆವಿವಿಧ ಶಾಲೆಗಳ ಶಿಕ್ಷಕರಾದ ನಾಗಯ್ಯ ಹಿರೇಮಠ, ಜಾಕೀರ ಬಗಲಿ, ಅಣ್ಣು ಭಜಂತ್ರಿ, ರಮೇಶ ಜನಗೊಂಡ, ಪುಷ್ಪಾವತಿ ರೂಗಿ, ಎಸ್.ಕೆ.ನದಾಫ, ವಿ.ಡಿ.ಮದ್ದರಕಿ, ರಾಘವೇಂದ್ರ ಕುಲಕರ್ಣಿ, ರವೀಂದ್ರ ಕೊಟೀನ, ಬಸವರಾಜ ನಾಗರಾಳ, ಸಿ.ಆರ್.ಬಸಣ್ಣವರ, ಬಿ.ವಿ.ಚಂಡಕಿ ರವರನ್ನು ನಾಮನಿರ್ದೇಶನ ಮಾಡಲಾಯಿತು.
ಶಿಕ್ಷಣ ಸಂಯೋಜಕರಾದ ಎಸ್.ಎಂ.ಕಪನಿಂಬರಗಿ, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಸಿ.ತಳಕೇರಿ, ಉಪಾಧ್ಯಕ್ಷೆ ಕಾವೇರಮ್ಮ ಚವ್ಹಾಣ, ಖಜಾಂಚಿ ಶಿವಾನಂದ ಕೊಟೀನ, ಸಹಕಾರ್ಯದರ್ಶಿ ರೇಣುಕಾ ಇಂಡಿ, ಜಯಶ್ರೀ ನಾಯಕ, ಸಂಘಟನಾ ಕಾರ್ಯದರ್ಶಿ ಪಾರ್ವತಿ ಪೂಜಾರಿ, ದಾನು ರಾಠೋಡ, ನಿರ್ದೇಶಕ ಎಂ.ಜಿ.ಯಂಕಂಚಿ, ಎಸ್.ಎಂ.ರಾಠೋಡ ಸೇರಿ ತಾಲೂಕಿನ ಸಿಆರ್‌ಪಿಗಳು, ಮುಖ್ಯಗುರುಗಳು, ಶಿಕ್ಷಕರು ಉಪಸ್ಥಿತರಿದ್ದರು.