ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಶಾಸಕರು ಲಂಚ ಪಡೆಯುತ್ತಿದ್ದಾರೆ. ಅವತ್ತಿನ ಶಾಸನ ಸಭೆ ಬಹಳ ಗಂಭೀರವಾಗಿತ್ತು. ಆದರೆ, ಇಂದು ಆ ವ್ಯವಸ್ಥೆ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೋಸ ಮಾಡುತ್ತಿದ್ದು, ಆಸ್ಪತ್ರೆ, ಗುತ್ತಿಗೆ ಕೆಲಸ ಸೇರಿದಂತೆ ಎಲ್ಲೆಡೆಯೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮತ ವ್ಯಾಪಾರವಾಗಿದೆ. ಚುನಾವಣೆ ಆಯೋಗ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಶಾಲಾ ಕಾಲೇಜುಗಳು ರಾಜಕಾರಣಿಗಳಿಗೆ ಸೇರಿವೆ. ಇದರಿಂದ ಬಡವರು ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ. ಮೈಸೂರಿನಲ್ಲಿ ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬಡ್ಡಿ ಮೇಲೆ ಬಡ್ಡಿ ಕಟ್ಟಿ ಸಾಯುವಂತಾಗಿದೆ. ಮಾದಕ ವಸ್ತುಗಳ ಬಗ್ಗೆ ಕೇಳುವವರೆ ಇಲ್ಲವಾಗಿದೆ ಎಂದು ಅವರು ಕಿಡಿಕಾರಿದರು.ಯಡಿಯೂರಪ್ಪ ಅಭಿಮಾನೋತ್ಸವ ಯಡಿಯೂರಪ್ಪ ಮತ್ತು ಮಗನ ಉತ್ಸವವಾಗಿದೆ. ಪುರ ಪ್ರವೇಶ ಮಾಡಲು ಇವರು ಜಗದ್ಗುರುಗಳಾ? ಯಡಿಯೂರಪ್ಪ, ಕುಮಾರಸ್ವಾಮಿ ಈ ರಾಜ್ಯವನ್ನು ಹಾಳು ಮಾಡಿದ್ದಾರೆ. ಎಂಎಲ್‌ಎಗಳನ್ನು ವ್ಯಾಪಾರಕ್ಕೆ ಇಟ್ಟಿದ್ದರು ಎಂದು ಅವರು ಆರೋಪಿಸಿದರು.
ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ತೇಜೇಶ್ ಲೋಕೇಶ್ ಗೌಡ, ಪಾರ್ಥಸಾರಥಿ, ಗಿರೀಶ್ ಗೌಡ, ನಾರಾಯಣಸ್ವಾಮಿ, ನಾಗೇಗೌಡ, ಶಿವಕುಮಾರ್, ರಾಧಾಕೃಷ್ಣ, ದರ್ಶನ್ ಗೌಡ, ಪ್ರದೀಪ್, ರಘು ಅರಸ್, ಬಸವರಾಜು, ಹನುಮಂತಯ್ಯ ಮೊದಲಾದವರು ಇದ್ದರು.