ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕೆ.ಬಿ. ಕ್ರಾಸ್‌ನ ಗೋಡೆಕೆರೆ ಶ್ರೀಮದ್ ರಂಭಾಪುರಿ ವಿದ್ಯಾಸಂಸ್ಥೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಯುವ ಘಟಕ, ಕದಳಿ ಮಹಿಳಾ ವೇದಿಕೆ ವತಿಯಿಂದ ಸಿದ್ಧರಾಮ ಜಯಂತಿ, ವಚನ ಗಾಯನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನುಭವ ಮಂಟಪದ ಮೂಲಕ ಸಾವಿರಾರು ಶರಣರು ಆಧ್ಯಾತ್ಮ ಚಿಂತನೆಗಳ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿ ಲಕ್ಷಾಂತರ ವಚನಗಳನ್ನು ಜನಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ಬರೆದು ಸಮಾಜಮುಖಿ ಚಿಂತನೆಗಳನ್ನು ಅವುಗಳಲ್ಲಿ ಅಡಕ ಮಾಡಿ ವಚನ ಸಾಹಿತ್ಯ ರಚಿಸಿದರು. ಈ ವಚನಗಳು ಸಾಹಿತ್ಯವು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ. ವಚನಗಳ ಮೂಲಕ ಮಾನವನ ಬದುಕಿನ ಸಾರ್ಥಕತೆ ಹೇಗಿರಬೇಕೆಂಬುದನ್ನು ತಿಳಿಸಿಕೊಟ್ಟವರು ಶರಣರು. ಇಂತಹ ಶರಣರ ವಚನ ಸಾಹಿತ್ಯವನ್ನು ಯುವಪೀಳಿಗೆ ಅಧ್ಯಯನ ಮಾಡುವ ಮೂಲಕ ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ತಾ. ಶಸಾಪ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.ಶಸಾಪ ಜಿಲ್ಲಾ ಉಪಾಧ್ಯಕ್ಷ ರವೀಂದ್ರನಾಥ ಠಾಕೂರ್ ಮಾತನಾಡಿ, ಯುವಪೀಳಿಗೆ ಶರಣರಂತೆ ನಿಸ್ವಾರ್ಥವಾಗಿ ಕಾಯಕದಲ್ಲಿ ತೊಡಗಿಸಿಕೊಂಡು ಸಮಾಜ ತಿದ್ದುವ ಕೆಲಸ ಮಾಡಬೇಕು. ಸಿದ್ಧರಾಮೇಶ್ವರರು ಪಶುಪಕ್ಷಿಗಳು ಸೇರಿದಂತೆ ಜೀವರಾಶಿಗಳಿಗೆಲ್ಲಾ ಅನುಕೂಲವಾಗಲೆಂದು ಕೆರೆಕಟ್ಟೆ, ಕಲ್ಯಾಣಿ, ಉದ್ಯಾನವನಗಳನ್ನು ಕಟ್ಟಿದರು. ಜೊತೆಗೆ ದೇವಾಲಯಗಳನ್ನು ನಿರ್ಮಿಸಿ ಅಜ್ಞಾನದಲ್ಲಿದ್ದ ಜನರಿಗೆ ಜ್ಞಾನದ ಬೆಳಕನ್ನ ನೀಡಿದರು. ಕಾಯಕದಿಂದ ಕಾಯಶುದ್ಧಿ, ಮನಶುದ್ಧಿಯಾಗುತ್ತದೆ, ನಿರ್ಮಲ ನೆಮ್ಮದಿ ಸಿಗುತ್ತದೆಂಬ ತತ್ವವನ್ನು ಬಿತ್ತರಿಸಿದರು. ವಿದ್ಯಾರ್ಥಿಗಳಾದ ನೀವು ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಕಾಯಕದಲ್ಲಿ ನಿರತರಾಗಬೇಕೆಂದರು.
ಶಸಾಪ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಮಾತನಾಡಿ, ಶಿವಯೋಗಿಶ ಸಿದ್ಧರಾಮೇಶ್ವರರು ಕಾಯಕ ಹಾಗೂ ಶಿವಯೋಗದ ಜೊತೆಗೆ ಸಮಾಜದಲ್ಲಿ ನೈತಿಕ ಮೌಲ್ಯಗಳಿಗೆ ಒತ್ತು ಕಟ್ಟು ಮೌಲಿಕ ವಚನಗಳ ರಚನೆ ಮಾಡಿ ವಚನಕಾರ ಸಿದ್ಧರಾಮ ಎಂಬ ಹೆಸರನ್ನೂ ಪಡೆದರು. ಕಲ್ಯಾಣ ಕ್ರಾಂತಿಯ ನಂತರ ಬೇರೆ ಬೇರೆ ಕಡೆ ಸಂಚರಿಸಿ ಶರಣ ಧರ್ಮ ಪ್ರಚುರ ಪಡಿಸಿ ವಚನಗಳ ಸಂರಕ್ಷಕರು ಆದರು ಎಂದು ಸಿದ್ಧರಾಮ ಕಾಯಕ, ಜೀವನ ಸಾಧನೆ ಬಗ್ಗೆ ತಿಳಿಸಿದರು.