ಪೌರ ನೌಕರರ ಸಮಸ್ಯೆ ಬಗೆಹರಿಸುವ ಪ್ರಯತ್ನ

KannadaprabhaNewsNetwork |  
Published : Jul 07, 2026, 02:00 AM IST
06 HRR 02ಹರಿಹರದ ನಗರಸಭಾ ಸಭಾಂಗಣದಲ್ಲಿ ಜಿಲ್ಲಾ ಅಧ್ಯಕ್ಷ ಎಚ್. ರಮೇಶ್ ಅಧ್ಯಕ್ಷತೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗುರುನಾಥ್ ಉಪಸ್ಥಿತಿಯಲ್ಲಿ  ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. | Kannada Prabha

ಸಾರಾಂಶ

ಪೌರ ನೌಕರರ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳ ಬಗೆಹರಿಸುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಹರಿಹರ ಶಾಖೆ ನೂತನ ಅಧ್ಯಕ್ಷ ಪಿ.ಎಚ್.ಸದಾಶಿವ ಭರವಸೆ ವ್ಯಕ್ತಪಡಿಸಿದ್ದಾರೆ.

- ಹರಿಹರ ಪೌರ ನೌಕರರ ಸಂಘದ ನೂತನ ಅಧ್ಯಕ್ಷ ಪಿ.ಎಚ್.ಸದಾಶಿವ ಭರವಸೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಪೌರ ನೌಕರರ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳ ಬಗೆಹರಿಸುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಹರಿಹರ ಶಾಖೆ ನೂತನ ಅಧ್ಯಕ್ಷ ಪಿ.ಎಚ್.ಸದಾಶಿವ ಭರವಸೆ ವ್ಯಕ್ತಪಡಿಸಿದರು.

ನಗರದ ನಗರಸಭಾ ಸಭಾಂಗಣದಲ್ಲಿ ಜಿಲ್ಲಾ ಅಧ್ಯಕ್ಷ ಎಚ್.ರಮೇಶ್ ಅಧ್ಯಕ್ಷತೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗುರುನಾಥ್ ಉಪಸ್ಥಿತಿಯಲ್ಲಿ ನಡೆದ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅವರು ಮಾತನಾಡಿದರು. ಕಳೆದ ಬಾರಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ರಮೇಶ್ ಮಾತನಾಡಿ ಪೌರಕಾರ್ಮಿಕರಿಗೆ ನಿವೇಶನ/ ಮನೆ ನೀಡುವ ಬಗ್ಗೆ ಯಾವುದೇ ರೀತಿಯ ಸಕಾರಾತ್ಮಕ ಸೂಚನೆಗಳು ದೊರೆಯುತ್ತಿಲ್ಲ. ಅಧಿಕಾರಿಗಳು ಕೇವಲ ಸಬೂಬು ಹೇಳಿ ಮುಂದೂಡುತ್ತಿದ್ದಾರೆ. ಈ ಸಮಸ್ಯೆಯನ್ನು ಸಂಘದ ನೂತನ ಅಧ್ಯಕ್ಷರು ಮತ್ತು ನಾವೆಲ್ಲರೂ ಸೇರಿ ನಿವೇಶನಗಳ ಪಡೆಯುವಲ್ಲಿ ಹೋರಾಟ ಮಾಡಬೇಕು ಎಂದರು.

ಸಂಘದಲ್ಲಿ ಒಗ್ಗಟ್ಟಿನ ಕೊರತೆಯಿದ್ದು, ನಮ್ಮ ಹಲವಾರು ಬೇಡಿಕೆಗಳು ಸಮಸ್ಯೆಗಳು ಸರಿಯಾದ ವೇಳೆಗೆ ಈಡೇರಿಕೆ ಆಗಿರುವುದಿಲ್ಲ. ನೇರ ಪಾವತಿ ಕಾರ್ಮಿಕರ ಕಾಯಂ ನೇಮಕಾತಿ 4 ವರ್ಷಗಳು ಕಳೆದರೂ ಆಗಿಲ್ಲ. ಅದರಲ್ಲಿ ಈಗಾಗಲೇ ಮೂರು ಜನ ಮರಣ ಹೊಂದಿದ್ದಾರೆ ಎಂದರು.

ಹೊರಗುತ್ತಿಗೆ ಡ್ರೈವರ್ಸ್‌ಗಳ ವೇತನ ಐದಾರು ತಿಂಗಳು ಕಳೆದರೂ ಆಗಿಲ್ಲ. ಇದರ ಹೋರಾಟ ಕೈಗೆತ್ತಿಕೊಳ್ಳಬೇಕಾಗಿದೆ. ಗುತ್ತಿಗೆ ನೌಕರರು ಮರಣಿಸಿದರೆ, ಅವರಿಗೆ ಯಾವುದೇ ರೀತಿಯ ಪರಿಹಾರ ದೊರೆಯುತ್ತಿಲ್ಲ. ಇದೆಲ್ಲವನ್ನು ನೂತನ ಅಧ್ಯಕ್ಷರು ಗಮನಿಸಬೇಕಾಗಿದೆ. ಎಲ್ಲದರ ಜೊತೆಗೆ ಹೊರಗುತ್ತಿಗೆ ಯುಜಿಡಿ, ನೀರು ಸರಬರಾಜು ಕಾರ್ಮಿಕರು ಮತ್ತು ಚಾಲಕರನ್ನು ನೇರ ಪಾವತಿ ವ್ಯಾಪ್ತಿಗೆ ತರಲು ಸಂಘ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಬಿ.ದಯಾನಂದ, ಉಪಾಧ್ಯಕ್ಷರಾಗಿ ಎಸ್.ಉಷಾ, ಪ್ರಧಾನ ಕಾರ್ಯದರ್ಶಿಯಾಗಿ ರಾಮ್ ಕುಮಾರ್ ಕೊಂಡಜ್ಜಿ, ಖಜಾಂಚಿಯಾಗಿ ರಜಾಕ್ ಸಾಬ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ವೈ.ಬಸವರಾಜ್, ನಿರ್ದೇಶಕರಾಗಿ ಹೆಚ್.ಶಿವಮೂರ್ತಿ ಮುಂತಾದವರನ್ನು ಈ ವೇಳೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮೀ, ಜಗದೀಶ್ ಅಡ್ಡೇರ್, ಕಂದಾಯ ನಿರೀಕ್ಷಕಿ ಆಮ್ರಿನ್ ಬಾನು, ಸಹಾಯಕಿ ಪೂಜಾ, ದಫೇದಾರ್ ಹನುಮಂತಪ್ಪ ಪೂಜಾರ್, ಟಿ. ಹನುಮಂತಪ್ಪ, ಸೌಭಾಗ್ಯಮ್ಮ, ಮರಿದೇವ, ಯಮನೂರ, ಪೌರಕಾರ್ಮಿಕರು, ಯುಜಿಡಿ ಕಾರ್ಮಿಕರು, ವಾಹನ ಚಾಲಕರು, ನೀರು ಸರಬರಾಜು ವಿಭಾಗದ ಕಾರ್ಮಿಕರು, ಕಂಪ್ಯೂಟರ್ ಆಪರೇಟರ್ ಭಾಗವಹಿಸಿದ್ದರು.

- - -

-06HRR02:

ಹರಿಹರದ ನಗರಸಭಾ ಸಭಾಂಗಣದಲ್ಲಿ ಜಿಲ್ಲಾ ಅಧ್ಯಕ್ಷ ಎಚ್.ರಮೇಶ್ ಅಧ್ಯಕ್ಷತೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗುರುನಾಥ್ ಉಪಸ್ಥಿತಿಯಲ್ಲಿ ರಾಜ್ಯ ಪೌರ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೆಸ್ಸೆಸ್‌ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಪ್ರಿಯಾಂಕ್‌
ಬಂಟ್ವಾಳದ ಈ ಶಾಲೇಲಿ ಮಕ್ಕಳ ಸುರಕ್ಷತೆಗೆ ಆರ್‌ಎಫ್‌ಐಡಿ ಟ್ಯಾಗ್‌!